ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕೊಂಬೆಟ್ಟು ವಿದ್ಯಾರ್ಥಿ ಶಶಾಂಕ್‌ಗೆ ಅದ್ದೂರಿಯ ಸ್ವಾಗತ ಮೆರವಣಿಗೆ

0

ಪುತ್ತೂರು: 14ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ ಪುತ್ತೂರು ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 8ನೇ ತರಗತಿಯ ವಿದ್ಯಾರ್ಥಿ ಶಶಾಂಕ್ ಅವರು ಪುತ್ತೂರಿಗೆ ಆಗಮಿಸಿದ ವೇಳೆ ಶಾಲೆಯ ವತಿಯಿಂದ ಅದ್ದೂರಿಯ ಸ್ವಾಗತ ಮೆರವಣಿಗೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದೊಂದಿಗೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುನಿಸೆಫ್ ನಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಆಯ್ಕೆಯಾಗಿ ಭಾಗವಹಿಸಿದ ವಿದ್ಯಾರ್ಥಿನಿಯರಾದ ಶ್ರೇಯಾ ಆರ್. ವಿ ಮತ್ತು ಶಿಲ್ಪಾ ಅವರನ್ನು ಸಹ ಸ್ವಾಗತಿಸಲಾಯಿತು. ಶಶಾಂಕ್, ಶ್ರೇಯಾ, ಶಿಲ್ಪಾ ಅವರನ್ನು ತೆರೆದ ವಾಹನದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಪ್ರಧಾನ ಅಂಚೆಕಚೇರಿಯಾಗಿ ಮುಖ್ಯರಸ್ತೆಯಲ್ಲಿ ಕೊಂಬೆಟ್ಟು ಶಾಲೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಅಲ್ಲಿ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಜಯಪ್ರಕಾಶ್, ಚೆನ್ನಪ್ಪ, ಶಿಕ್ಷಣ ತಜ್ಞ ಸೇರ ಕೋಟಿಯಪ್ಪ ಪೂಜಾರಿ, ಪ್ರಾಂಶುಪಾಲ ಗೋಪಾಲ ಗೌಡ, ಉಪಪ್ರಾಂಶುಪಾಲ ವಸಂತ ಮೂಲ್ಯ ಪಿ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಯಾದವ್, ನಗರ ಪೊಲಿಸ್ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ, ಸಿಬ್ಬಂದಿಗಳು, ಶಶಾಂಕ್ ಅವರ ತಂದೆ ಬೆಳಿಯಪ್ಪ ಗೌಡ, ತಾಯಿ ಲಲಿತ, ಪಿಎಂಶ್ರೀ ಶಾಲೆಯ ಮುಖ್ಯಗುರು ತಾರಾನಾಥ್ ಸವಣೂರು, ಕಬಡ್ಡಿ ತರಬೆತುದಾರರಾದ ಅಬ್ದುಲ್ ಸಲೀಮ್, ಫಾರೂಕ್, ಅವಿನಾಶ್ ಶೆಟ್ಟಿ, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಧನೆಗೈದ ಮೂವರು ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಶಾಲು ಹೊದೆಸಿ ಅಭಿನಂದಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಂಜಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here