ಆಲಂಕಾರು ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ .ಕೆ ಅವರು ನ.29ರಂದು ಸೇವಾ ನಿವೃತ್ತಿ

0

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ .ಕೆ ಯವರು ನ.29ರಂದು ಸೇವಾ ನಿವೃತ್ತಿ ಗೊಳ್ಳಲಿದ್ದಾರೆ.ಪದ್ಮಪ್ಪ ಗೌಡ .ಕೆ ಯವರು ರಾಮಕುಂಜ ಗ್ರಾಮದ ಕೆದುಂಬಾಡಿ ದಿ.ದೇವಪ್ಪ ಗೌಡ ಮತ್ತು ಚೆನ್ನಕ್ಕರವರ ಪುತ್ರನಾಗಿ 1963 ರಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಕಿರಿಯ ಪ್ರಾಥಮಿಕ ಶಾಲೆ ಕುಂಡಾಜೆ, ಹಾಗೂ ರಾಮಕುಂಜ(ಅತೂರು) ಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜದಲ್ಲಿ ನಂತರ ಪಿ.ಯು.ಸಿ ಹಾಗೂ ಪದವಿ ಶಿಕ್ಷಣವನ್ನು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಮುಗಿಸಿ ನಂತರ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಆಲಂಕಾರು ಸಿ.ಎ ಬ್ಯಾಂಕ್ ನಲ್ಲಿ ಎರಡು ವರ್ಷದಿನಗೂಲಿ ನೌಕರನಾಗಿ ನಂತರ 1992 ರಲ್ಲಿ ಖಾಯಂ ಉದ್ಯೋಗಿಯಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ 2022 ರಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದನ್ನೋತಿಗೊಂಡು ನ.29 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ. ಪದ್ಮಪ್ಪ ಗೌಡ ರವರು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.

ಪದ್ಮಪ್ಪ ಗೌಡ .ಕೆ ರಾಮಕುಂಜ ಗ್ರಾಮದ ಕೆದುಂಬಾಡಿ ಅಮ್ಮ‌ನಿಲಯದಲ್ಲಿ ವಾಸವಾಗಿದ್ದು, ಪತ್ನಿ ರಾಮಕುಂಜ ಗ್ರಾ.ಪಂ ಮಾಜಿ ಅಧ್ಯಕ್ಷೆ ಕೃಷ್ಣವೇಣಿ ,ಮಗ ದೀಕ್ಷಿತ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು ಮಗಳು ಎಂ.ಎಸ್ಸಿ ಪದವೀಧರೇಯಾಗಿದ್ದು ಮಗ ಬೆನಕೇಶ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಸೇವಾ ನಿವೃತ್ತರ ಬೀಳ್ಕೋಡಿಗೆ ಕಾರ್ಯಕ್ರಮವು ನ.29ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನದಯಾಳು ಸಭಾಭವನದಲ್ಲಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ಬಾಲ್ಯೋಟ್ಟು, ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿರ್ಬಂಧಕರಾದ ತ್ರಿವೇಣಿ ರಾವ್, ಶ್ರೀ ರಾಮಕುಂಜೇಶ್ವರ ಅಂಗ್ಲ ಮಾಧ್ಯಮ ಶಾಲೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಸೇಸಪ್ಪ ರೈ ಕೆ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here