ಪುತ್ತೂರು: ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನ.27ರಂದು ಕಾರ್ತಿಕ ದೀಪೋತ್ಸವ, ಲಕ್ಷದೀಪೋತ್ಸವ ಮತ್ತು ಕುರಿಂದು ಉತ್ಸವ ವಿಜೃಂಭಣೆಯಿಂದ ನಡೆಯಿತು.
ರಾತ್ರಿ ದೀಪ ನಮಸ್ಕಾರ, ರಾತ್ರಿ ಪೂಜೆಯ ಬಳಿಕ ಶ್ರೀ ದೇವರ ಪೇಟೆ ಸವಾರಿ ಉತ್ಸವ ಆರಂಭಗೊಂಡಿತ್ತು. ಕಟ್ಟೆಪೂಜೆಯ ಬಳಿಕ ದರ್ಬೆಯುದ್ಧಕ್ಕೂ ಭಕ್ತರ ಆರತಿಗಳನ್ನು ಸ್ವೀಕರಿಸಿ ದರ್ಬೆಯ ವೃತ್ತದಲ್ಲಿ ಕುರಿಂದು ಉತ್ಸವ ನಡೆಯಿತು.
