ಪುತ್ತೂರು: ಭಾರತದ ರಾಯಭಾರ ಕಚೇರಿಯ ಅಡಿಯಲ್ಲಿ ಇಂಡಿಯನ್ ಕಲ್ಚರಲ್ ಸೆಂಟರ್ ಸಹವರ್ತಿ ಸಂಘಗಳಲ್ಲಿ ಒಂದಾದ ಬಂಟ್ಸ್ ಕತಾರ್ ತನ್ನ ಸದಸ್ಯರಿಗೆ ವೇದಿಕೆಯನ್ನು ಒದಗಿಸುವ ಮತ್ತು ಉತ್ತೇಜಿಸುವ ಮತ್ತು ರವಾನಿಸುವ ಮುಖ್ಯ ಉದ್ದೇಶದೊಂದಿಗೆ 2011ರಲ್ಲಿ ಸ್ಥಾಪನೆಯಾದ ಸಂಸ್ಥೆಯಾಗಿದೆ.ಬಂಟ್ಸ್ ಕತಾರ್ ವಾರ್ಷಿಕ ಸಾಮಾನ್ಯ ಸಭೆಯು ಇತ್ತೀಚೆಗೆ ನಡೆಯಿತು.ಸಭೆಯಲ್ಲಿ 2023-25 ನೇ ಸಾಲಿನ ಹೊಸ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ನವೀನ್ ಶೆಟ್ಟಿ ಇರುವೈಲ್ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ನವೀನ್ ಶೆಟ್ಟಿ ಇರುವೈಲ್ ಪರಿಚಯ
ನವೀನ್ ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಸಮೀಪದ ಇರುವೈಲ್ ಮೂಲದವರು. ಕತಾರ್ ಮತ್ತು ಬಹರೈನ್ ನಲ್ಲಿ ವಿವಿಧ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ನವೀನ್ ಭಾಷಣಕಾರ ಮತ್ತು ನಿರೂಪಕರಾಗಿದ್ದಾರೆ. ಕತಾರ್ ಮತ್ತು ಬಹರೈನ್ ನ ವಿವಿಧ ಸಂಘಗಳ ವೇದಿಕೆಗಳಲ್ಲಿ ನಾಟಕ ಮತ್ತು ಯಕ್ಷಗಾನದಲ್ಲಿ ಸಹ ಪ್ರದರ್ಶನ ನೀಡಿದ್ದಾರೆ.
ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಮಾನಸ ಶೆಟ್ಟಿ ಹಿಂದಿನ ಅವಧಿಯ ವರದಿ ವಾಚಿಸಿದರು. ಕೋಶಾಧಿಕಾರಿ ಮನೋಹರ ಶೆಟ್ಟಿ ಹಿಂದಿನ ವರ್ಷದ ಲೆಕ್ಕ ಪರಿಶೋಧಕ ಆಯವ್ಯಯ ಪತ್ರವನ್ನು ಮಂಡಿಸಿದರು. ಬಂಟ್ಸ್ ಕತಾರ್ ನ ನಿರ್ಗಮಿತ ಅಧ್ಯಕ್ಷೆ ಡಾ. ಪದ್ಮಶ್ರೀ ಶೆಟ್ಟಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಘದ ಸಂಘದ ಉದ್ದೇಶಗಳನ್ನು ವಿವರಿಸಿದರು.
ಸ್ಥಾಪಕ ಅಧ್ಯಕ್ಷ ರವಿ ಶೆಟ್ಟಿ ,ಮಾಜಿ ಅಧ್ಯಕ್ಷ ನವನೀತ ಶೆಟ್ಟಿ , ಹಾಗೂ ಹಿರಿಯ ಸದಸ್ಯರಾದ ರಾಮ್ ಮೋಹನ್ ರೈ, ರಾಮಚಂದ್ರ ಶೆಟ್ಟಿ,ಮಾಜಿ ಅಧ್ಯಕ್ಷರು ಮತ್ತು ನಿರ್ಗಮಿತ ಸಲಹಾ ಸಮಿತಿ ಛೇರ್ಮನ್ ದೀಪಕ್ ಶೆಟ್ಟಿ , ಸಮಿತಿಯ ಸದಸ್ಯರು ಮತ್ತು ಬಂಟ್ಸ್ ಕತಾರ್ ಸದಸ್ಯರು ಉಪಸ್ಥಿತರಿದ್ದರು.
2023-25 ರ ಅವಧಿಗೆ ಹೊಸದಾಗಿ ಆಯ್ಕೆಯಾದ ನಿರ್ವಹಣಾ ಸಮಿತಿಯ ಪಟ್ಟಿ ಹೀಗಿದೆ :
ಅಧ್ಯಕ್ಷ : ನವೀನ್ ಶೆಟ್ಟಿ ಇರುವೈಲ್
ಉಪಾಧ್ಯಕ್ಷ : ಸುಬೋಧ ಶೆಟ್ಟಿ
ಕೋಶಾಧಿಕಾರಿ : ಸುನೀಲ್ ಶೆಟ್ಟಿ
ಪ್ರಧಾನ ಕಾರ್ಯದರ್ಶಿ:ಸುಕರಾಮ ಶೆಟ್ಟಿ
ಕ್ರೀಡಾ ಕಾರ್ಯದರ್ಶಿ : ನವೀನ್ ಶೆಟ್ಟಿ ಮಡಂತ್ಯಾರು
ವಿಶೇಷ ಅಗತ್ಯಗಳು : ಪ್ರೀತಮ್ ರೈ
ಸಾಂಸ್ಕೃತಿಕ ಕಾರ್ಯದರ್ಶಿ : ಅಕ್ಷಿಣಿ ವಿಘ್ನೇಶ್ ಶೆಟ್ಟಿ
ಜಂಟಿ ಪ್ರಧಾನ ಕಾರ್ಯದರ್ಶಿ : ಚಿದಾನಂದ ರೈ ಈಶ್ವರಮಂಗಲ
ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ : ಪೂಜಾ ಆದರ್ಶ ಶೇಣವ
ಲಾಜಿಸ್ಟಿಕ್ ಮತ್ತು ಯುವ ಸಂಯೋಜಕ : ದಿನೇಶ್ ಶೆಟ್ಟಿ
ಸದಸ್ಯತ್ವ ಮತ್ತು ಪರಿಸರ ಸಂಯೋಜಕ : ಮನೋಜ್ ಶೆಟ್ಟಿ