ಅಕ್ಷಯ ಕಾಲೇಜಿನಲ್ಲಿ ” ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ದತ್ತಿ ನಿಧಿ- 2015″

0

ಪುತ್ತೂರು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು , ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ಚದಲ್ಲಿ, ಅಕ್ಷಯ ಕಾಲೇಜಿನ ಅದ್ವಯ ಸಾಹಿತ್ಯ ಸಂಘ  ಮತ್ತು ರೊಟ್ರ್ಯಾಕ್ಟ್ ಕ್ಲಬ್ – ಪುತ್ತೂರು ಅಕ್ಷಯ ಕಾಲೇಜು ಸಹಾಭಾಗಿತ್ವದಲ್ಲಿ ” ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ದತ್ತಿ ನಿಧಿ- 2015″  ಉಪನ್ಯಾಸ ಕಾರ್ಯಕ್ರಮವು ಅಕ್ಷಯ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದ ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕ ಜಯಂತ್ ನಡುಬೈಲ್ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ವ್ಯಕ್ತಪಡಿಸಿದರು. ಪುತ್ತೂರು ಅಕ್ಷಯ ಕಾಲೇಜಿನ ರೊಟ್ರ್ಯಾಕ್ಟ್ ಕ್ಲಬ್‌ ಸಭಾಪತಿ ರತ್ನಾಕರ ರೈ ಮಾತನಾಡಿ ಯಾವುದೇ ಭಾಷೆಯ ಬೆಳವಣಿಗೆಗೆ ಸಾಹಿತ್ಯವೇ ಕಾರಣ ಎಂದರು. ಅಧ್ಯಕ್ಷರ ನೆಲೆಯಲ್ಲಿ ಪುತ್ತೂರಿನ ಕ.ಸಾ.ಪ. ನ ಅಧ್ಯಕ್ಷ ಉಮೇಶ್ ನಾಯಕ್ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಉಂಟಾಗಲು ಸಾಹಿತ್ಯ ಪ್ರಮುಖ ಘಟ್ಟಗಳು ಪಾತ್ರವಹಿಸುತ್ತವೆ ಹಾಗೂ ಅನುವಾದ ಸಾಹಿತ್ಯದಿಂದ  ಕನ್ನಡ ಸಾಹಿತ್ಯದ ಕಾರ್ಯವು ಪ್ರಾರಂಭವಾಯಿತು ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಲೇಖಕರು, ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಮರ್ಖಾಧಿಕಾರಿ ಡಿ. ಆರ್.ಡಿ.ಓ ಕೇಂದ್ರ ರಕ್ಷಣಾ ಸಂಶೋಧನಾ ಇಲಾಖೆಯ ಅಧಿಕಾರಿ ಜಯಪ್ರಕಾಶ್ ರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ ಎ, ರೊಟ್ರ್ಯಾಕ್ ಕ್ಲಬ್ ನ ಸಯೋಂಜಕ ಉಪನ್ಯಾಸಕ   ರಾಕೇಶ್ ರೊಟ್ರ್ಯಾಕ್ ಕ್ಲಬ್ ಅಕ್ಷಯ ಕಾಲೇಜಿನ ಸತ್ಯನಾರಾಯಣ ನಾಯಕ್ ಉಪಸ್ಥಿತರಿದ್ದರು. ಅದ್ವಯ -ಸಾಹಿತ್ಯ ಸಂಘದ ಮುಖ್ಯಸ್ಥ ಹರಿಶ್ಚಂದ್ರ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳ್ನಾಡಿದರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಪಶುಪತಿ ಶರ್ಮ ಸ್ವಾಗತಿಸಿ,  ಉಜ್ವಲ್ ನಾಯಕ್ ವಂದಿಸದರು. ಕೀರ್ತನ್ ಕಾರ್ಯಕ್ರಮವನ್ನು ನಿರೂಪಿಸಿದರು. ಸವಿ ಡೇಚಮ್ಮ ರವರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here