ಇನ್ಸೆಫ್ 2023 ರ ವಿಭಾಗೀಯ ಮಟ್ಟದ ವಿಜ್ಞಾನ ಸಂಶೋಧನಾ ಸ್ಪರ್ಧೆ- ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಉಪ್ಪಿನಂಗಡಿ: ಇನ್ಸೆಫ್ 2023 ರ ವಿಭಾಗೀಯ ಮಟ್ಟದ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ 10 ನೇ ತರಗತಿಯ ವಿದ್ಯಾರ್ಥಿಗಳಾದ ಹೃಷಿಕೇಶ್ ನಾಯಕ್ ಮತ್ತು ಸುಹಾಸ್ ಎಂ. ಬಣಕಾರ್ ಚಿನ್ನದ ಪದಕವನ್ನು ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


ಡ್ರಾಗನ್ ಪ್ರೂಟ್ ಹಣ್ಣಿನ ಸಿಪ್ಪೆಯಿಂದ ಆಹಾರ ಪದಾರ್ಥಕ್ಕೆ ಬಳಸಲಾಗುವ ಬಣ್ಣವನ್ನು ತಯಾರಿಸಬಹುದೆಂಬ ಸಂಶೋಧನಾ ವರದಿಯನ್ನು ಮಂಡಿಸಿದ ಈ ವಿದ್ಯಾರ್ಥಿಗಳ ಸಂಶೋಧನಾ ವರದಿಯು ಮೂಡಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿಭಾಗೀಯ ಮಟ್ಟದ ಇನ್ಸೆಫ್ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆಯುವುದರೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಗುಜರಾತಿನ ರಾಜಕೋಟ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದರೆ ಅಂತರಾಷ್ಟ್ರೀಯ ಸ್ಪರ್ಧಾ ಕಣವಾದ ಐ ಸ್ವೀಪ್ ಸ್ಪರ್ಧೆಗೆ ಆಯ್ಕೆಯಾಗುವ ಅವಕಾಶ ಲಭಿಸುತ್ತದೆ.

LEAVE A REPLY

Please enter your comment!
Please enter your name here