ಡಿ.1: ಕಾಣಿಯೂರಿನಲ್ಲಿ ಉಚಿತ ನೇತ್ರ ತಪಾಸಣೆ, ವೈದ್ಯಕೀಯ ಶಿಬಿರ

0

ಕಾಣಿಯೂರು: ಅಮ್ಮ ಮೆಡಿಕಲ್ಸ್ ಕಾಣಿಯೂರು, ದೀಪಾ ಡಿ.ಜೆ ಸೌಂಡ್ಸ್, ಲೈಟ್ಸ್ ಮತ್ತು ಡೆಕೋರೇಶನ್ ಪುಣ್ಚತ್ತಾರು, ಕಾಣಿಯೂರು ಇದರ ಶುಭಾರಂಭದ ಪ್ರಯುಕ್ತ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಸುಳ್ಯ, ಪುತ್ತೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮಂಗಳೂರು, ಡಾ. ಪಿ ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಸೆಂಚುರಿ ಗ್ರೂಪ್ಸ್ ಬೆಂಗಳೂರು ಹಾಗೂ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ವೈದ್ಯಕೀಯ ಶಿಬಿರವು ಕಾಣಿಯೂರಿನ ನವಶಕ್ತಿ ಕಾಂಪ್ಲೆಕ್ಸ್‌ನಲ್ಲಿ ಡಿ 1ರಂದು ನಡೆಯಲಿದೆ.

ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ,ಸಾಜಿದಾ ಉದ್ಘಾಟಿಸಲಿದ್ದಾರೆ. ಕಾಣಿಯೂರು ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಕೊಪ್ಪ, ಸದಸ್ಯ ಗಣೇಶ್ ಉದನಡ್ಕ, ಪುತ್ತೂರು ಬನ್ನೂರು ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ಕಡಬ ತಾಲೂಕು ಧ್ವನಿ ಬೆಳಕು, ಶಾಮಿಯಾನ ಸಂಘದ ಅಧ್ಯಕ್ಷ ಪ್ರಮೋದ್ ರೈ ನಂದಗುರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರಾದ ಚಂದ್ರಶೇಖರ್ ಮುಂಡಾಳ, ದಿನೇಶ್ ಪೈಕ, ಜಗದೀಶ್ ಮುಂಡಾಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here