ರಾಮನಗರ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಕುತ್ಯಾಳ ಕಿಟ್ಟಣ್ಣ ರೈ ಯವರ ಶ್ರದ್ದಾಂಜಲಿ ಸಭೆ

0

ಆಲಂಕಾರು:ರಾಮನಗರ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪೆರಾಬೆ ಗ್ರಾಮದ ಅವನಿ ನಿಲಯದ ಕುತ್ಯಾಳ ಕಿಟ್ಟಣ್ಣ ರೈ ಯವರು ನ.18 ನಿಧನರಾಗಿದ್ದು ಅವರ ಶ್ರದ್ದಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.

ಆಲಂಕಾರು ವಲಯ ಬಂಟರ ಸಂಘದ ಪ್ರದಾನ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ ನುಡಿನಮನ ಸಲ್ಲಿಸಿ .ಮೃತರು ಬೆಂಗಳೂರು ರಾಮನಗರ ಜಿಲ್ಲೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಪರಿವಿಕ್ಷಣಾಧಿಕಾರಿಯಾಗಿ,ರಾಜ್ಯ ದೈಹಿಕ ಶಿಕ್ಷಣಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ರಾಜ್ಯ ಸದಸ್ಯರಾಗಿ ಹಾಗು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಮೃತರು ಕಬಡ್ಡಿ ಪಟು ಹಾಗು ಕುಸ್ತಿಪಟುವಾಗಿ ರಾಮನಗರ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದರು.ದಿ.ಕಿಟ್ಟಣ್ಣ ರೈಯವರು ನಮಗೆಲ್ಲ ಹಿರಿಯರಾಗಿ ,ಮಾರ್ಗದರ್ಶಕರಾಗಿ,ಅದರ್ಶ ಜೀವನ ನಡೆಸಿದವರು ಅವರ ಅತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸಿದರು ನಂತರ ಮೃತರ ಅತ್ಮಕ್ಕೆ ಚಿರಶಾಂತಿ ದೊರೆಯಲೆಂದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


ವೇದಿಕೆಯಲ್ಲಿ ದಿ.ಕಿಟ್ಟಣ್ಣ ರೈಯವೆ ಪತ್ನಿ ಸರೋಜಿನಿ ಮಗಳಂದಿರಾದ ಅಮರವಾತ್ಸಲ್ಯ,ಪ್ರಾಜ್ವಲ್ಯ,ಅಹಲ್ಯ ಮತ್ತು ಅಳಿಯಂದಿರಾದ ದಿನೇಶ್ ಶೆಟ್ಟಿ, ಪ್ರಸಾದ್ ಆಳ್ವ,ಹರಿಪ್ರಸಾದ್ ರೈ ಮತ್ತು ರಾಧಾಕೃಷ್ಣ ರೈ ಮನವಳಿಕೆ,ಸುಭಾನು ರೈ ಮರುವಂತಿಲ ಸುದೀರ್ ರೈ ಮನವಳಿಕೆ, ಹಾಗು ಕುಟುಂಬಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here