ಇರ್ದೆ ಶಾಲಾ ಸಹಶಿಕ್ಷಕಿ ನಾಗರತ್ನ ಸೇವಾ ನಿವೃತ್ತಿ

0

ನಿಡ್ಪಳ್ಳಿ; ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಇರ್ದೆ ಉಪ್ಪಳಿಗೆ ಇಲ್ಲಿ ಕಳೆದ 24 ವರ್ಷಗಳ ಕಾಲ ಸಹಶಿಕ್ಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ  ನಾಗರತ್ನ ಇವರು ನ.30 ರಂದು ತನ್ನ ಸೇವಾ ನಿವೃತ್ತಿ ಹೊಂದಿದರು.

  ಮಂಗಳೂರಿನ ಡಿ.ಶ್ರೀನಿವಾಸ ಭಟ್ ಲಕ್ಷ್ಮೀ ದಂಪತಿಗಳ ಪುತ್ರಿಯಾದ ಇವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವಿಕ್ಟೋರಿಯಾ ಗರ್ಲ್ ಹೈಸ್ಕೂಲ್ ಲೇಡಿ ಹಿಲ್ ಮಂಗಳೂರು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಕಾರಿ ಮಹಿಳಾ ತರಬೇತಿ ಸಂಸ್ಥೆ ಬಲ್ಮಠ ಮಂಗಳೂರು ಇಲ್ಲಿ ಪಡೆದರು. ನಂತರ ಕೆಲವು ವರ್ಷಗಳ ಕಾಲ ತಾನು ಕಲಿತ ಶಾಲೆಯಲ್ಲೇ ಗೌರವ ಶಿಕ್ಷಕಿಯಾಗಿ, ತದನಂತರ 10 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿದ್ದರು.

ನಂತರ 1999 ರ ಜನವರಿಯಲ್ಲಿ ಇರ್ದೆ ಉಪ್ಪಳಿಗೆ ಶಾಲೆಗೆ ಸಹಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರಿ ಅಂದಿನಿಂದ ನಿವೃತ್ತಿಯವರೆಗೂ ಸೇರಿದ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಇವರು ನಲಿಕಲಿ ತರಗತಿ ಶಿಕ್ಷಕಿಯಾಗಿ ನಲಿಕಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು.ಶಾಲೆಗೆ ಹಲವಾರು ಕೊಡುಗೆ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ತನ್ನ ಸಹಕಾರ ನೀಡಿದ್ದರು.

 ಇವರು ಭಾರತ ಸರಕಾರದ ವಾಯುಸೇನೆಯಲ್ಲಿ ಮೆಕ್ಯಾನಿಕಲ್ ಡಿಪಾರ್ಟ್‌ಮೆಂಟ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ಎನ್.ಗಣೇಶರವರ ಪತ್ನಿೈಆಗಿ ಪುತ್ತೂರಿನ ಸಂಪ್ಯದಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here