ಸುದಾನದಲ್ಲಿ ಮೇಳೈಸಿತು “ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ”

0

ಪುತ್ತೂರು : ನಾಟಕ ಕಲೆ ಜನಮಾನಸವನ್ನು ಸುಲಭವಾಗಿ, ಪರಿಣಾಮಕಾರಿಯಾಗಿ ತಲುಪುವ ಕಲೆಯಾಗಿದ್ದು ಶಾಲಾ ಕಾಲೇಜುಗಳಲ್ಲಿಯೂ ಈ ಕುರಿತಾದ ಅಭಿರುಚಿಗೆ ಪ್ರೇರಣೆ ನೀಡಬೇಕಾಗಿದೆ ಎಂದು ರೋಟರಿ ಜಿಲ್ಲೆ 3181ರ ವಲಯ ನಾಲ್ಕರ ನಿಕಟಪೂರ್ವ ಸಹಾಯಕ ಗವರ್ನರ್‌ ಮಂಜುನಾಥ ಆಚಾರ್ಯ ಹೇಳಿದರು.
ಸಂಸಾರ ಜೋಡುಮಾರ್ಗ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ರೋಟರಿ ಪುತ್ತೂರು ಎಲೈಟ್ ಸಹಭಾಗಿತ್ವದಲ್ಲಿ ಪುತ್ತೂರು ಮಂಜಲ್ಪಡ್ಪು ಸುದಾನ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ಎಡ್ವರ್ಡ್ ಹಾಲ್ ನಲ್ಲಿ ನಡೆದ ಮೂರು ದಿನಗಳ ನಿರತ ನಿರಂತ -ಬಹುವಚನಂ ಆಯೋಜನೆಯ “ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ” ವನ್ನು ಉದ್ಘಾಟಿಸಿ ಮಾತನಾಡಿದರು.


ರೋಟರಿ ಪುತ್ತೂರು ಎಲೈಟ್‌ ಅಧ್ಯಕ್ಷ ಅಬ್ದುಲ್‌ ರಝಾಕ್‌ ಕಬಕಕಾರ್ಸ್‌ ಅಧ್ಯಕ್ಷತೆ ವಹಿಸಿದ್ದರು. ನಿರತ ನಿರಂತದ ಐಕೆ ಬೊಳುವಾರು ರವರು ಮಾತನಾಡಿ, ಕಳೆದ 23 ವಷಗಳ ಹಿಂದೆ ರಂಗ ಸಂಸಾರ ಎಂಬ ಶೀರ್ಷಿಕೆಯಲ್ಲಿ ಆರಂಭಗೊಂಡಿದ್ದ ಅಟ್ಟಾಮುಟ್ಟಾ ನಾಟಕೋತ್ಸವವನ್ನು ನಿರತ ನಿರಂತ ಬಹುವಚನಂ ಸಂಸ್ಥೆ ನಡೆಸಿಕೊಂಡು ಬಂದಿದೆ, ಈ ವರ್ಷ ಸಂಸಾರ ಜೋಡುಮಾರ್ಗ ಹಾಗೂ ರೋಟರಿ ಪುತ್ತೂರು ಎಲೈಟ್‌ ಈ ಅಟ್ಟಾಮುಟ್ಟಾ ಆಯೋಜನೆಯ ನೇತೃತ್ವ ವಹಿಸಿಕೊಂಡಿರುವುದು ಸಂತಸದ ಸಂಗತಿ ಎಂದರು.


ಸಭಾ ಕಾಯಕ್ರಮದ ಬಳಿಕ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಪೆರಾಜೆ ಇಲ್ಲಿಯ ವಿದ್ಯಾರ್ಥಿಗಳಿಂದ, ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮ ನಿರ್ದೇಶನದ ‘ಆರೋಗ್ಯ ಸಿರಿ” ನಾಟಕ ಹಾಗೂ ಪುತ್ತೂರು ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳಿಂದ ಮೌನೇಶ ವಿಶ್ವಕರ್ಮ ನಿರ್ದೇಶನದ ‘ರೋಗಗಳ ಮಾಯದಾಟ’ ನಾಟಕ ಪ್ರದರ್ಶನಗೊಂಡಿತು.
ಅಟ್ಟಾಮುಟ್ಟಾ ನಾಟಕೋತ್ಸವದ ಎರಡನೇ ದಿನ ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೆ|ವಿಜಯ ಹಾರ್ವಿನ್‌ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಐಕೆ ಬೊಳುವಾರು ಹಾಗೂ ಡಾ.ಶ್ರೀಶಕುಮಾರ್‌ ಅವರ ಕಾಳಜಿಯ ಅಟ್ಟಾಮುಟ್ಟಾ ನಾಟಕೋತ್ಸವ ಸುದಾನ ಆವರಣದಲ್ಲಿ ಆಯೋಜನೆಯಾಗಿರುವುದು ಸಂತೋಷ ತಂದಿದೆ ಎಂದರು. ರೋಟರಿ ಜಿಲ್ಲೆ ೩೧೮೧ರ ರೋಡ್‌ ಸೇಫ್ಟೀ ಚೇರ್‌ಮೆನ್‌ ಡಾ.ಹರ್ಷ ಕುಮಾರ್‌ ರೈ ಮಾತನಾಡಿ, ಪುತ್ತೂರಿನಲ್ಲಿ ಕಲೆ, ಸಂಸ್ಕೃತಿ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಸುದಾನ ವಿದ್ಯಾ ಸಂಸ್ಥೆ ಹಾಗೂ ರೋಟರಿ ಎಲೈಟ್‌ ನ ಕೊಡುಗೆ ಅಪಾರವಾಗಿದ್ದು, ಇತರರಿಗೆ ಮಾದರಿ ಎಂದರು. ಬಹವಚನಂ ನ ಡಾ,ಶ್ರೀಶ ಕುಮಾರ್‌ ಮಾತನಾಡಿ, ಅಟ್ಟಾಮುಟ್ಟಾ ಆಯೋಜನೆಯ ನೇತೃತ್ವ ವಹಿಸಿಕೊಂಡ ಸಂಸಾರ ಜೋಡುಮಾರ್ಗ ಹಾಗೂ ರೋಟರಿ ಪುತ್ತೂರು ಎಲೈಟ್‌ ಅನ್ನು ಅಭಿನಂದಿಸಿದರು. ಸಭಾ ಕಾಯಕ್ರಮದ ಬಳಿಕ ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ಅಭಿಜ್ಞಾನ ಮಕ್ಕಳ ನಾಟಕ ಬಳಗದಿಂದ ರಂಗಕರ್ಮಿ ಐಕೆ ಬೊಳುವಾರು ನಿರ್ದೇಶನದ ‘ಕಾರಂತಜ್ಜನಿಗೊಂದು ಪತ್ರ” ನಾಟಕ ಹಾಗೂ ರೋಟರಿ ಪುತ್ತೂರು ಎಲೈಟ್ ಇದರ ಸದಸ್ಯರಿಂದ ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮರವರ ನಿರ್ದೇಶನದ “ಅಯ್ಯೋಯ್ಯೋ ಮಾನವ..!” ನಾಟಕ ಪ್ರದರ್ಶನ ಗೊಂಡಿತು.


ಸಮಾರೋಪ:
ಅಟ್ಟಾಮುಟ್ಟಾ ನಾಟಕೋತ್ಸವದ ಮೂರನೇ ದಿನ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ರೋಟರಿ ಪುತ್ತೂರು ಎಲೈಟ್‌ ನ ನಿಕಟಪೂರ್ವ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಡಾ|ಪೀಟರ್‌ ವಿಲ್ಸನ್‌ ಪ್ರಭಾಕರ್‌ ಸಮಾರೋಪ ಭಾಷಣ ಮಾಡಿದರು. ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ ರೈಯವರು ಮಾತನಾಡಿ, ಅಟ್ಟಾಮುಟ್ಟಾ ನಾಟಕೋತ್ಸವದ ಅಚ್ಚುಕಟ್ಟಿನ ಆಯೋಜನೆ ಹಾಗೂ ಮೂರೂ ದಿನಗಳಲ್ಲಿಯೂ ಸಭಾಂಗಣ ಪ್ರೇಕ್ಷಕರಿಂದ ತುಂಬಿರುವುದು ನಾಟಕೋತ್ಸವದ ಯಶಸ್ಸಿಗೆ ಸಾಕ್ಷಿ ಎಂದರು. ವೇದಿಕೆಯಲ್ಲಿ ರೋಟರಿ ಸಹಾಯಕ ಗವರ್ನರ್‌ ಗಳಾದ ನರಸಿಂಹ ಪೈ, ಪುರಂದರ ರೈ, ಲಾರೆನ್ಸ್‌ ಗೋನ್ಸಾಲಿಸ್‌ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಇದೇ ವೇಳೆ ಅಟ್ಟಾಮುಟ್ಟಾ ನಾಟಕೋತ್ಸವದ ಆಯೋಜನೆಯಲ್ಲಿ ಮುಖ್ಯಪಾತ್ರ ನಿರ್ವಹಿಸಿದ ಸಂಸಾರ ಜೋಡುಮಾರ್ಗದ ನಿರ್ದೇಶಕ, ರೋಟರಿ ಎಲೈಟ್‌ ಸದಸ್ಯ ಮೌನೇಶ ವಿಶ್ವಕರ್ಮ ಅವರನ್ನು ರೋಟರಿ ಪುತ್ತೂರು ಎಲೈಟ್‌ ವತಿಯಿಂದ ಸನ್ಮಾನಿಸಲಾಯಿತು. ರೋಟರಿ ಪುತ್ತೂರು ಎಲೈಟ್‌ ಅಧ್ಯಕ್ಷ ಅಬ್ದುಲ್‌ ರಝಾಕ್‌ ಕಬಕಕಾರ್ಸ್‌ ಸ್ವಾಗತಿಸಿದರು. ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಪುತ್ತೂರು ಎಲೈಟ್‌ ಕಾರ್ಯದರ್ಶಿ ಆಸ್ಕರ್‌ ಆನಂದ್‌ ವಂದಿಸಿದರು. ಬಾಲು ನಾಯ್ಕ್, ಈಶ್ವರ್‌ ಬೇಡೇಕರ್‌, ರಾಮ ಕೆ. ಸಹಕರಿಸಿದರು.


ಶುಕ್ರವಾರ ಸಂಜೆ ಸಾಗರ ತುಮರಿಯ ಕಿನ್ನರ ಮೇಳದ ಕಲಾವಿದರು ರಂಗ ನಿರ್ದೇಶಕ ಸಾಲಿಯಾನ್ ಉಮೇಶ್ ನಾರಾಯಣ್ ನಿರ್ದೇಶನದಲ್ಲಿ ಅಭಿನಯಿಸುವ ನಾಟಕ “ಅನ್ಯಾಳ ಡೈರಿ’ ಪ್ರದರ್ಶನದೊಂದಿಗೆ ಮೂರು ದಿನಗಳ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವಕ್ಕೆ ತೆರೆಬಿತ್ತು.

LEAVE A REPLY

Please enter your comment!
Please enter your name here