ಕಡಬ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯು ಪುತ್ತೂರಿನಿಂದ ಕಡಬ ತಾಲೂಕಿಗೆ ನ.30ರಂದು ಆಗಮಿಸಿತು.
ಕಡಬಕ್ಕೆ ತಂದ ಮಂತ್ರಾಕ್ಷತೆಯನ್ನು ಚೆಂಡೆ ವಾದನ, ಕುಣಿತ ಭಜನೆಯೊಂದಿಗೆ ಮೆರವಣಿಗೆಯ ಮೂಲಕ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತಂದು ಇರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಮಂತ್ರಾಕ್ಷತೆಯನ್ನು ಬರಮಾಡಿಕೊಂಡರು. ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರ.ಶಿಕ್ಷಣ ಪ್ರಕೋಷ್ಟ ಜಿಲ್ಲಾ ಪ್ರಮುಖ್ ಕೃಷ್ಣ ಶೆಟ್ಟಿ ಕಡಬ, ಕಡಬ ಪ್ರಖಂಡ ಅಧ್ಯಕ್ಷ, ರಾಧಾಕೃಷ್ಣ ಕೋಲ್ಪೆ, ಉಪಾಧ್ಯಕ್ಷ ಸಂತೋಷ್ ಸುವರ್ಣ ಕೋಡಿಬೈಲ್ ಕಾರ್ಯದರ್ಶಿ ಜಯಂತ ಕಲ್ಲುಗುಡ್ಡೆ, ಜತೆ ಕಾರ್ಯದರ್ಶಿ ಪ್ರಮೀಳಾಲೋಕೇಶ್, ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ಹಿಂ.ಜಾವೇ. ಪ್ರಾಂತ ನಿಧಿ ಪ್ರಮುಖ್ ರವಿರಾಜ ಶೆಟ್ಟಿ, ಮಾತೃಶಕ್ತಿ ಸಹ ಪ್ರಮುಖ್ ವೀಣಾರಮೇಶ್ ಕೊಲ್ಲೆಸಾಗು,ವಿ.ಹಿಂ.ಪ ನಗರ ಅಧ್ಯಕ್ಷ ಸತ್ಯನಾರಾಯಣ ಹೆಗ್ಡೆ,ವಿ.ಹಿಂ.ಪ. ಜಿಲ್ಲಾ ಗೋ ರಕ್ಷಕ್ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಂ. ಮಾತೃಶಕ್ತಿ ಜಿಲ್ಲಾ ಸಹ ಪ್ರಮುಖ್ ಗೀತಾ ಅಮೈ ಕೇವಳ, ಪ್ರಮುಖರಾದ ಪ್ರಮೋದ್ ರೈ ನಂದುಗುರಿ, ಮಹೇಶ್ ಬಜತ್ತೂರು, ಮೂಲಚಂದ್ರ ಕಾಂಚನ, ಮೋನಪ್ಪ ಗೌಡ ನಾಡೋಳಿ, ಆಶಾತಿಮ್ಮಪ್ಪ, ಮೇದಪ್ಪ ಗೌಡ ಡೆಪ್ಪುಣಿ,ಚಂದ್ರಶೇಖರ ಹಳೆನೂಜಿ, ವಾಸುದೇವಾ ಕೊಲ್ಲೆಸಾಗು,ಸುರೇಶ್ ಕೋಟೆಗುಡ್ಡೆ,ರಮೇಶ್ ಕಲ್ಪುರೆ, ರಘುಚಂದ್ರ ಮನೆಜಾಲು, ಸುಂದರ ಗೌಡ ಬಿಳಿನೆಲೆ, ಹರೀಶ್ ಕೊಡಂದೂರು, ಮಹೇಶ್ ರೈ ಕುಂಟೋಡಿ,ಅಜಿತ್ ರೈ ಆರ್ತಿಲ, ಪ್ರೀತ ಕುಂಡಿಲು, ಗಂಗಾಕನಕ, ಯಶೋಧಾರವಿರಾಜ ಶೆಟ್ಟಿ, ಸವಿತಾ ಪ್ರಕಾಶ್, ಗಿರೀಶ್ ಎ.ಪಿ. ಅಮರನಾಥ ಶೆಟ್ಟಿ, ಸತೀಶ್ ರೈ ಮರ್ದಾಳ, ಮೊದಲಾದವರು ಉಪಸ್ಥಿತರಿದ್ದರು.