ಪಡುವನ್ನೂರು ಕಜಮೂಲೆ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯಗಳ ರಾಶಿ-ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

0

ಬಡಗನ್ನೂರುಃ ಪಡುವನ್ನೂರು ಗ್ರಾಮದ ಪದಡ್ಕ, ಕಜೆಮೂಲೆ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಕೋಳಿ ಮತ್ತು ಇತರ ತ್ಯಾಜ್ಯವನ್ನು ಮೂಟೆ ಮೂಟೆ ಹೊತ್ತು ತಂದು ರಾತ್ರಿ ವೇಳೆ ಹಾಕುತ್ತಿದ್ದು, ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿದ್ದು, ಜನರು ವಾಸನೆಯಿಂದ ದಿನ ಕಳೆಯುವ ಪರಿಸ್ಥಿತಿ ಬಂದಿದೆ. ಕಜೆಮೂಲೆ ಅರಣ್ಯ ಪ್ರದೇಶದಲ್ಲಿ ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಉಳಿಯುವ ಆಹಾರ, ಪ್ಲಾಸ್ಟಿಕ್ ಲೋಟ ಇನ್ನಿತರ ವೆಸ್ಟ್ ವಸ್ತು ಗಳನ್ನು ಮತ್ತು ಕೋಳಿ ತ್ಯಾಜ್ಯವನ್ನು ಈ ಅರಣ್ಯ ಪ್ರದೇಶಕ್ಕೆ ಸುರಿಯುವುದರಿಂದ ಪರಿಸರಕ್ಕೆ ಹಾಗು ಸ್ಥಳೀಯರಿಗೆ ತೊಂದರೆಯುಂಟಾಗುವ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾ.ಪಂ ಅಧಿಕಾರಿಗಳು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ.

ಈ ಮೊದಲು ಬಡಗನ್ನೂರು ಗ್ರಾ.ಪಂ ನ ವತಿಯಿಂದ ಪದಡ್ಕ ಹಾಗೂ ಕನ್ನಡ್ಕ ಬಸ್ ತಂಗುದಾಣದ ಬಳಿ ಒಣ ತ್ಯಾಜ್ಯ ಸಂಗ್ರಹಣೆಗೆ ತೊಟ್ಟಿ ಇಟ್ಟಿದ್ದರು ಆದರೆ ಈ ತೊಟ್ಟಿಯಲ್ಲಿ ಒಣ ಹಾಗೂ ಹಸಿ ಮತ್ತು ಕೋಳಿ ಮತ್ತು ಇತರ ತ್ಯಾಜ್ಯ ಹಾಕಿ ಕೊಳೆತು ಹುಣ್ಣಾಗಿ ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳಲು ಕಷ್ಟಕರ ಪರಿಸ್ಥಿತಿಯಲ್ಲಿದ್ದಾಗ ತೊಟ್ಟಿಯನ್ನು ತೆರವುಗೊಳಿಸಲಾಯಿತು.ಹಾಗಾಗಿ ಇದಕ್ಕೆ ಗ್ರಾ,ಪಂ ಕಸ ಸಂಗ್ರಹಕ್ಕೆಂದು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಗ್ರಾ.ಪಂ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ತ್ಯಾಜ್ಯ ಸುರಿದು ಪರಿಸರ ನಾಶ ಪಡಿಸಲು ಪ್ರಯತ್ನಿಸುತ್ತಿದ್ದಾರೆ. ತ್ಯಾಜ್ಯ ಎಸೆಯುವ ಪ್ರಮುಖ ಸ್ಥಳದಲ್ಲಿ  ತ್ಯಾಜ್ಯ ಎಸೆದವರ ಮಾಹಿತಿ ನೀಡಿದವರಿಗೆ ಗ್ರಾ.ಪಂ ವತಿಯಿಂದ ಬಹುಮಾನ ನೀಡುವ ಬಗ್ಗೆ ನಾಮಫಲಕ ಅಳವಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಕಿದವರಿಗೆ 5 ಸಾವಿರದಿಂದ 10 ಸಾವಿರದವರೆಗೆ ದಂಡ ವಿಧಿಸಲಾಗುವುದು.ಈ ಬಗ್ಗೆ ಸಾರ್ವಜನಿಕರು ಗ್ರಾ  ಪಂ ಗೆ ಮಾಹಿತಿ ನೀಡಿ ಸಹಕರಿಸುವಂತೆ ತಿಳಿಸಲಾಗಿದೆ.
ವಸೀಮ ಗಂಧದ ಅಭಿವೃದ್ಧಿ ಅಧಿಕಾರಿ ಬಡಗನ್ನೂರು ಗ್ರಾ.ಪಂ.

ಗ್ರಾ.ಪಂ ವತಿಯಿಂದ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಿ ಕಸ ವಿಲೇವಾರಿ ಕ್ರಮ
ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಎಸೆದು ಪರಿಸರ ವಿಕೃತಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ತ್ಯಾಜ್ಯ ಎಸೆದವರರ ಕುರಿತು ಗಮನಕ್ಕೆ ಕಂಡುಬಂದಲ್ಲಿ  ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ  ತ್ಯಾಜ್ಯ ಹಾಕಿದ ಕಜಮೂಲೆ ಅರಣ್ಯ ಪ್ರದೇಶದಲ್ಲಿ ದುರ್ವಾಸನೆ ನಿರ್ವಹಣೆಗೆ ಮಣ್ಣು ಮುಚ್ಚುವ ವ್ಯವಸ್ಥೆ ಮಾಡಲಾಗುವುದು.
ಪ್ರಕಾಶ್ ರೈ ಪಾಣಾಜೆ ವಲಯ ಉಪ ಅರಣ್ಯಾಧಿಕಾರಿ.

LEAVE A REPLY

Please enter your comment!
Please enter your name here