ರೋಟರಿ ಕ್ಲಬ್ ಪುತ್ತೂರುನಿಂದ ಕುಟುಂಬ ಸಮ್ಮಿಲನ

0

*ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕ್ಲಬ್ ಸದಸ್ಯರಿಗೆ ಸಹಕರಿಸಿದ ಈರ್ವರಿಗೆ ಸನ್ಮಾನ

*ವಲಯ ಸಾಂಸ್ಕೃತಿಕ, ಕ್ರೀಡಾಕ್ಷೇತ್ರದ ಸಾಧಕರಿಗೆ ಅಭಿನಂದನೆ

*ಕ್ಲಬ್ ಚಟುವಟಿಕೆಗಳನ್ನು ಪವರ್ ಪಾಯಿಂಟ್ ಮುಖೇನ ಪ್ರಸ್ತುತಪಡಿಸುವಿಕೆ

ಪುತ್ತೂರು: ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ಇದರ ವತಿಯಿಂದ ಕ್ಲಬ್ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಡಿ.1ರಂದು ಬೊಳ್ವಾರು ಮಹಾವೀರ ವೆಂಚರ್ಸ್ ನ ರೂಫ್ ಟಾಪ್ ಸಭಾಂಗಣದಲ್ಲಿ ಸಂಜೆ ನೆರವೇರಿತು.
ಗೌರವ ಅತಿಥಿಯಾಗಿ ಭಾಗವಹಿಸಿದ ರೋಟರಿ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈಯವರು ಮಾತನಾಡಿ, ರೋಟರಿ ಕುಟುಂಬಕ್ಕೆ ಸೇರ್ಪಡೆಯಾದ ಬಳಿಕ ಪರಸ್ಪರ ಆತ್ನೀಯತೆ, ಸಹಾಯಹಸ್ತ, ಸ್ನೇಹ, ಗೆಳೆತನ, ಪ್ರೀತಿ ಲಭಿಸಿದೆ. ಎಲ್ಲರೂ ಜೊತೆಗೂಡಿ ಒಗ್ಗಟ್ಟಾಗಿ ಹೆಜ್ಜೆ ಇಟ್ಟಾಗ ಜೀವನ ಕೂಡ ಫಲಪ್ರದವಾಗುತ್ತದೆ ಎಂದರು.

ಸ್ಪರ್ಧಾ ವಿಜೇತರಿಗೆ ಅಭಿನಂದನೆ:
ವಲಯ ಮಟ್ಟದ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಬಹುಮಾನ ವಿಜೇತರಾದ ಅಧ್ಯಕ್ಷ ಜೈರಾಜ್ ಭಂಡಾರಿ, ದತ್ತಾತ್ರೇಯ ರಾವ್, ಸುಜಿತ್ ರೈ, ಗಣೇಶ್ ರೈ, ದಾನೋದರ್, ಕಿಶನ್ ಬಿ.ವಿ, ಪ್ರೇಮಾನಂದ್, ಪರಮೇಶ್ವರ್, ಜಗದೀಶ್, ಮನೋಜ್ ಟಿ.ವಿ, ಜಯದೀಪ್, ಸುಬ್ಬಪ್ಪ ಕೈಕಂಬ, ಆನ್ ಗಳಾದ ಶ್ರೀಲತಾ, ಕೃಷ್ಣವೇಣಿ, ಅನಸೂಯಾ, ಸವಿತ, ಕವಿತ, ಗೀತಾ ಗಂಗಾಧರ್, ಆನೆಟ್ ಗಳಾದ ಪ್ರಾರ್ಥನಾ ಬಿ, ಅನಘ, ಆರಾಧನಾ, ಅನ್ವಿತ್, ತೇಜಸ್, ವೈಭವ್ ಎಸ್.ಕೆ, ಸ್ವಾಧಿ, ಜ್ಞಾನ, ರಾಷ್ಟ್ರೀಯ ಕರಾಟೆ ಚಾಂಪಿಯನ್‌ ಶಿಪ್ ಕಂಚಿನ ಪದಕ ಗಳಿಸಿದ ವೈಭವ್ ಎಸ್.ಕೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿರುವ ಜಗದೀಶ್, ಅನಸೂಯ ಜಗದೀಶ್, ಯಶಸ್ ರವರನ್ನು ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.
ರೋಟರ್ಯಾಕ್ಟ್ ಡಿ.ಆರ್.ಆರ್ ರಾಹುಲ್ ಆಚಾರ್ಯರವರು ಕ್ಲಬ್ ಪ್ರದರ್ಶಿಸಿದ ಸಾಂಸ್ಕೃತಿಕ ಚಟುವಟಿಕೆಗಳ ವಿಡಿಯೋವನ್ನು ಈ ಸಂದರ್ಭದಲ್ಲಿ ಪವರ್ ಪಾಯಿಂಟ್ ಮುಖೇನ ಪ್ರಸ್ತುತ ಪಡಿಸಿದರು.

ಕ್ಲಬ್ ನಿಕಟಪೂರ್ವ ಅಧ್ಯಕ್ಷ ಉಮಾನಾಥ್ ಪಿ.ಬಿ, ಪೂರ್ವ ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರವರು ಮುಖ್ಯ ಅತಿಥಿ ನರಸಿಂಹ ಪೈಯವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಕು|ಪ್ರಾರ್ಥನಾ ಬಿ ಪ್ರಾರ್ಥಿಸಿದರು. ಕಾರ್ಯದರ್ಶಿ ಸುಜಿತ್ ರೈ ವರದಿ ಮಂಡಿಸಿದರು. ವಿವಾಹ ವಾರ್ಷಿಕೋತ್ಸವ ಆಚರಿಸಿರುವ ಕ್ಲಬ್ ಕೋಶಾಧಿಕಾರಿ ಸಂಕಪ್ಪ ರೈ ದಂಪತಿ ಪರಸ್ಪರ ಕೊರಳಿಗೆ ಶಾಲು ಹಾಕುವ ಮೂಲಕ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಹಿರಿಯ ಸದಸ್ಯ ಸುರೇಶ್ ಶೆಟ್ಟಿರವರು ಗೌರವ ಅತಿಥಿ ನರಸಿಂಹ ಪೈಯವರ ಪರಿಚಯ ಮಾಡಿದರು. ಸನ್ಮಾನಿತರ ಪರಿಚಯವನ್ನು ಸದಸ್ಯರಾದ ಕಿಶನ್ ಬಿ.ವಿ ಹಾಗೂ ಸುಬ್ಬಣ್ಣ ಕೈಕಂಬರವರು ನೀಡಿದರು. ಪರಮೇಶ್ವರ ಗೌಡ ವಂದಿಸಿದರು. ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರೂಪಿಸಿದರು.

ಕ್ಲಬ್ ಸಮಾಜಕ್ಕೆ ಶಾಶ್ವತ ಕೊಡುಗೆಗಳನ್ನು ನೀಡಿದೆ…
ರೋಟರಿ ಕ್ಲಬ್ ಪುತ್ತೂರು ಸಮಾಜಕ್ಕೆ ಅನೇಕ ಶಾಶ್ವತ ಕೊಡುಗೆಗಳನ್ನು ನೀಡಿದ್ದು, ಈ ಸಾಲಿಗೆ ನಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ಕಣ್ಣಿನ ಆಸ್ಪತ್ರೆಯೂ ಸೇರಿದೆ. ಕಣ್ಣಿನ ಆಸ್ಪತ್ರೆಯ ಲೋಕಾರ್ಪಣೆಯ ಅಂಗವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ಕಣ್ಣಿನ ಆಸ್ಪತ್ರೆಯ ಸೇವೆಯು ಸಮಾಜದ ಎಲ್ಲಾ ವರ್ಗದ ಜನರಿಗೆ ಎಟಕುವ ಹಾಗೆ ನಾವು ಕಾರ್ಯಪೃವೃತ್ತರಾಗೋಣ.
-ಜೈರಾಜ್ ಭಂಡಾರಿ,
ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು

ಈರ್ವರಿಗೆ ಸನ್ಮಾನ..
ಸಾಂಸ್ಕೃತಿಕ ಕ್ಷೇತ್ರದಲ್ಲಿ ರೋಟರಿ ಕ್ಲಬ್ ಪುತ್ತೂರು ಸಮೂಹ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆಯಲು ಕಾರಣಕರ್ತರಾದ ನೃತ್ಯ ನಿರ್ದೇಶಕ ರಾಕೇಶ್ ಆಚಾರ್ಯ ಹಾಗೂ ಕ್ಲಬ್ ಸದಸ್ಯರು ಪ್ರದರ್ಶಿಸಿದ ಪ್ರಹಸನ ಹಾಗೂ ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದ ಸಂಗೀತ ನಿರ್ದೇಶಕ ಹಾಗೂ ಕೊಳಲುವಾದಕ ಶೀನ ನಾಡೋಳಿರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶೀನ ನಾಡೋಳಿರವರು ಅನಿಸಿಕೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here