ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ-ಲಿಟ್ಲ್ ಫ್ಲವರ್ ಶಾಲಾ ಬಾಲಕಿಯರ ತಂಡ ಪ್ರಥಮ

0

ಪುತ್ತೂರು: ಸುಳ್ಯ ತಾಲೂಕಿನ ಗುತ್ತಿಗಾರು ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.


ಶಾಲಾ‌ ವಿದ್ಯಾರ್ಥಿಗಳಾದ ಜುವೆನ್ನಾ ಡ್ಯಾಝಲ್ ಕುಟಿನ್ಹಾ ಸವ್ಯಾಸಾಚಿ ಆಟಗಾರ್ತಿಯಾಗಿ ಹಾಗೂ ಜೆನಿಟಾ ಸಿಂಧು ಪಸನ್ನ ಅತ್ತ್ಯುತಮ ಹಿಡಿತಗಾರ್ತಿಯಾಗಿ ಪ್ರಶಸ್ತಿಯನ್ನು ಪಡೆದುಕೊಂಡರು . ತಂಡವನ್ನು ಸನ್ನಿಧಿ, ಜಸ್ಮಿತಾ, ಫಾತಿಮತ್ ಶೈಮಾ, ಹಾರ್ದಿಕ, ನಿಶ್ಮಿತಾ, ದೃಶಾ,ಫಾತಿಮತ್ ಅಫ್ರ ಹಾಗೂ ಸುಶ್ರಾವ್ಯ ಪ್ರತಿನಿಧಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ವೆನಿಶಾ ಬಿ ಎಸ್ ಮಾರ್ಗದರ್ಶನದಲ್ಲಿ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್, ಸುಚೇತ್ ದುರ್ಗಾನಗರ ಹಾಗೂ ಶಿಲ್ಪ ಮರಿಯಾ ಸೋಜ ತರಬೇತಿಯನ್ನು ನೀಡಿದ್ದಾರೆ. ಶಾಲಾ ಇದೆ ತಂಡವು ಆಂದ್ರಪ್ರದೇಶದಲ್ಲಿ ಶಿಕ್ಷಣ ಇಲಾಖೆಯಿಂದ ನಡೆಯಲಿರುಚ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಆಯ್ಕೆಯಾಗಿದೆ.

LEAVE A REPLY

Please enter your comment!
Please enter your name here