ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಡಿ.9 ರಂದು ನಡೆಯುವ ಲಕ್ಷ ದೀಪೋತ್ಸವ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಡಿ.3 ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್ ಪ್ರಾಸ್ತಾವಿಕ ಮಾತನಾಡಿ, ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎರಡು ಗ್ರಾಮದ ಪ್ರತಿ ಮನೆಗೂ ಆಮಂತ್ರಣ ಪತ್ರಿಕೆ ತಲುಪಿಸುವ ವ್ಯವಸ್ಥೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಅರಿಯಡ್ಕ ವಲಯದ ಸಹಕಾರದಿಂದ ನಡೆಯಲಿದೆ. ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಮುಂದೆ ದೇವಸ್ಥಾನದ ಸ್ವಚ್ಚತೆ ಕಾರ್ಯ ನಡೆಯಬೇಕಿದೆ ತಮ್ಮೆಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು. ಬಳಿಕ ಸಭೆಯಿಂದ ಸಲಹೆ ಸೂಚನೆಗಳನ್ನು ಪಡೆದು ಕಾರ್ಯಕ್ರಮದ ರೂಪುರೇಷೆಗಳನ್ನು ತಯಾರಿಸಲಾಯಿತು.
ಲಕ್ಷ ದೀಪೋತ್ಸವ ಸಮಿತಿ ಗೌರವಾಧ್ಯಕ್ಷ ಮಾಧವ ರೈ ಹೊಸಮನೆ ಕರ್ಪುಡಿಕಾನ ಮಾತನಾಡಿ, ಯಾವುದೇ ಕಾರ್ಯ ಮನಸ್ಪೂರ್ತಿಯಿಂದ ಮಾಡಿದಾಗ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ತಾವೆಲ್ಲರೂ ದೇವರ ಕಾರ್ಯದಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ ಎಂದು ಹೇಳಿ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಭಟ್ ಪಟ್ಟೆ, ಲಕ್ಷ ದೀಪೋತ್ಸವ ವಿಶೇಷ ರೀತಿಯಲ್ಲಿ ನಡೆಯುವ ನಿಟ್ಟಿನಲ್ಲಿ ದೇವಸ್ಥಾನದ ಗರ್ಭಗುಡಿಗೆ ಮತ್ತು ಗೋಪುರ ವಿಶೇಷ ಹೂವಿನ ಅಲಂಕಾರ ಮತ್ತು ಹೊರಭಾಗದಲ್ಲಿ ಅಂಕಣದಲ್ಲಿ ಹೂವಿನ ರಂಗೋಲಿ ಮತ್ತು ಹಸಿರು ತೋರಣದಿಂದ ಶೃಂಗಾರ ಮಾಡಲಾಗುವುದು ಎಂದು ಹೇಳಿ ಕಾರ್ಯಕ್ರಮದ ವಿವಿಧ ವ್ಯವಸ್ಥೆಯ ಜವಾಬ್ದಾರಿ ಸಮಿತಿಗೆ ಹಂಚಿದರು. ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಅರಿಯಡ್ಕ ವಲಯ ಮಲ್ವಿಚಾರಕ ಹರೀಶ್ ಕುಮಾರ್, ಉಪಸ್ಥಿತರಿದ್ದರು.
ಸಭೆಯಲ್ಲಿ ಲಕ್ಷ ದೀಪೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಆಳ್ವ ಗಿರಿಮನೆ, ನವರಾತ್ರಿ ಉತ್ಸವ ಅಧ್ಯಕ್ಷ ಚಂದ್ರಶೇಖರ ಅಳ್ವ ಗಿರಿಮನೆ, ಆಯುಧ ಪೂಜೆ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಮಂಗಳಾದೇವಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು, ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ, ರಾಜೇಶ್ ಮೇಗಿನಮನೆ, ಕುಮಬ್ರ ಕೃ ಪ.ಸ.ಸಂಘದ ನಿರ್ದೇಶಕ ರಘುರಾಮ ಪಾಟಾಳಿ ಶರವು, ಪಡುಮಲೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪಾಟಾಳಿ, ಪಟ್ಟೆ ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಶಂಕರಿ ಪಟ್ಟೆ, ಉಲ್ಲಾಸ್ ಭಟ್ ಪಡ್ಪು, ಪುರಂದರ ರೈ ಸೇನೆರಮಜಲು, ಕಿರಣ್ ರೈ ಮೈಂದನಡ್ಕ, ಮತ್ತಿತರರು ಉಪಸ್ಥಿತರಿದ್ದರು. ಉತ್ತಮ್ ಭಟ್ ಸ್ವಾಗತಿಸಿ ವಂದಿಸಿದರು.