ಡಿ.23, 24, 25ರಂದು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ ’ರೋಟರಿ ಬ್ಯುಸಿನೆಸ್ ಎಕ್ಸ್‌ಪೋ ’

0

ಪುತ್ತೂರು: ರೋಟರಿ ಸಂಸ್ಥೆಯವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರಾಗಿದ್ದು, ಅವರು ತಮ್ಮ ವ್ಯವಹಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ’ರೋಟರಿ ಬ್ಯುಸಿನೆಸ್ ಎಕ್ಸ್‌ಪೋ’ ಎಂಬ ವಿಶೇಷ ಕಾರ್ಯಕ್ರಮ ಡಿ.23ರಿಂದ 25ರ ತನಕ ಪುತ್ತೂರು ಬೈಪಾಸ್ ರಸ್ತೆಯಲ್ಲಿರುವ ಸಮೃದ್ಧಿ ಸಂಕೀರಣದಲ್ಲಿ ಜರುಗಲಿದೆ ಎಂದು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಅಧ್ಯಕ್ಷ ರಾಜೇಶ್ ಬೆಜ್ಜಂಗಳ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಮೂರು ದಿನದ ಕಾರ್ಯಕ್ರಮದಲ್ಲಿ 100 ಸ್ಟಾಲ್‌ಗಳಿದ್ದು ಇಲ್ಲಿ ಒಂದು ವಸ್ತು, ಒಂದು ಸ್ಟಾಲ್ ರೂಪದಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ. ಫುಡ್ ಕೋರ್ಟ್ ಇರುತ್ತದೆ. ಪರಸ್ಪರ ವ್ಯವಹಾರ ವೃದ್ಧಿಗೆ ವೇದಿಕೆ ಕಲ್ಪಿಸಲಾಗುವುದು. ಡಿ. 24ರಂದು ಮಧ್ಯಾಹ್ನ ಆದರ್ಶ ದಂಪತಿ ಸ್ಪರ್ಧೆ ನಡೆಯಲಿದ್ದು ಈ ಸ್ಪರ್ಧೆಯಲ್ಲಿ ಸಾರ್ವಜನಿಕರಿಗೂ ಅವಕಾಶವಿದೆ. ಅದೇ ದಿನ ಶಿವಮೊಗ್ಗದಿಂದ ಕಾಮಿಡಿ ಕಿಲಾಡಿ ಖ್ಯಾತಿಯ ಕವಿತಾ ಸುಧೀಂದ್ರ ಭಾಗವಹಿಸಲಿದ್ದಾರೆ. ಪುತ್ತೂರಿನ ವಿವಿಧ ಉದ್ಯಮ ಸಂಸ್ಥೆಗಳು ತಮ್ಮ ವಿಶೇಷ ಗಿಪ್ಟ್ ಕೂಪನ್‌ಗಳನ್ನು ಇಲ್ಲಿ ನೀಡುವ ಅವಕಾಶವಿದೆ. ಪ್ರತಿದಿನ ಆಕರ್ಷಕ ಬಹುಮಾನಗಳು, ಮೂರು ದಿನವೂ ವೈದ್ಯಕೀಯ ಶಿಬಿರ, ರಕ್ತ ಪರಿಶೋಧನ ಶಿಬಿರ, ವ್ಯವಹಾರಗಳಿಗೆ ವಿಚಾರ ಸಂಕಿರಣ, ನೂತನ ಉತ್ಪನ್ನಗಳ ಬಿಡುಗಡೆಗೆ ವೇದಿಕೆ ಕಲ್ಪಿಸಲಾಗುವುದು ಮತ್ತು ’ನಮ್ಮ ವೇದಿಕೆ- ನಿಮ್ಮ ಪ್ರತಿಭೆ’ ಎಂಬ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಬೈಪಾಸ್ ರಸ್ತೆಯ ಅಶ್ಮಿ ಕಂಪರ್ಟ್ಸ್‌ನ ’ಪಂಚಮಿ ಸಭಾಂಗಣ’ ದಲ್ಲಿ ಕಾರ್ಯಕ್ರಮ ನಡೆಯಲಿದ್ದು ಭರತ ನಾಟ್ಯ, ಸುಗಮ ಸಂಗೀತ, ಜನಪದ ಹಾಡು, ವೈಯಕ್ತಿಕ ನೃತ್ಯ. ವೈಯಕ್ತಿಕ ಸಂಗೀತ , ಜನಪದ ನೃತ್ಯ , ಸಮೂಹ ನೃತ್ಯ , ಸಮೂಹ ಗಾನ ಇತ್ಯಾದಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡಲು ಅವಕಾಶ ಇರುತ್ತದೆ. ಧ್ವನಿ ಮತ್ತು ಬೆಳಕು ಒದಗಿಸಲಾಗುವುದು. ಆಸಕ್ತರು 9591452414 ವಾಟ್ಸ್ ಅಪ್ ಸಂಖ್ಯೆ ಡಿ.15ರ ಒಳಗಾಗಿ ಹೆಸರು ನೋಂದಾಯಿಸುವಂತೆ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸ್ಥಾಪಕ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪೂರ್ವಾಧ್ಯಕ್ಷ ರಫೀಕ್ ದರ್ಬೆ, ವಲಯ ಸೇನಾನಿ ನವೀನ್‌ಚಂದ್ರ ನಾಕ್, ಸ್ಟಾಲ್ ಜವಾಬ್ದಾರಿಯ ಶಿವರಾಮ ಎಮ್.ಎಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here