ಪುತ್ತೂರು: ಯೋಗ ಸಂಸ್ಕೃತಮ್ ವಿಶ್ವವಿದ್ಯಾಲಾಯ ಪ್ಲೋರಿಡಾ ಯು ಎಸ್ ಎ. ಬೆಂಗಳೂರು ಇಲ್ಲಿ ದಕ್ಷಿಣಾದಿ ಸಂಗೀತಕ್ಕೆ “ಕರ್ಣಾಟಕ ಸಂಗೀತ” ಎಂಬ ಹೆಸರು ಹೇಗೆ ಪ್ರಾಪ್ತಿಯಾಯಿತು ಎಂಬ ಬಗ್ಗೆ ಒಂದು ಅಧ್ಯಯನಕ್ಕೆ ಸಂಬಂಧಿಸಿದ ಸಂಶೋಧನೆಗೆ ಪುತ್ತೂರಿನ ವಿದುಷಿ ಪವಿತ್ರ ರೂಪೇಶ್ ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.
ಕರ್ಣಾಟಕ ಸಂಗೀತ ಕುರಿತ ಅಧ್ಯಯನಕ್ಕೆ ಸಂಬಂಧಿಸಿ ಬೆಂಗಳೂರಿನ ಡಾ.ಚಂದ್ರಿಕಾ ಡಿ.ಆರ್ ಮತ್ತು ವಿದುಷಿ ಎಮ್ ಎಸ್ ವಿದ್ಯಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದರು. ಈ ಕುರಿತು ಅವರಿಗೆ ಡಿ.3ರಂದು ತಿರುವನಾಮಲ್ಲೈ ಎಸ್ ಕೆ ಪಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಯೋಗ ಸಂಸ್ಕೃತಮ್ ಯುನಿರ್ವಸಿಟಿಯ ವೈಸ್ ಚಾನ್ಸಲರ್ ಡಾ.ಬಿ ವಿ ಕೆ ಶಾಸ್ತ್ರೀ ಮತ್ತು ನಿರ್ದೇಶಕ ಡಾ.ಭಾಗ್ಯ ಕೃಷ್ಣಮೂರ್ತಿ ಅವರು ಡಾಕ್ಟರೇಟ್ ಪ್ರದಾನ ಮಾಡಿದರು. ಪವಿತ್ರ ರೂಪೇಶ್ ಅವರು ಸವಣೂರು ಸರಕಾರಿ ಪ್ರೌಢಶಾಲಾ ಸಂಗೀತ ಶಿಕ್ಷಕಿಯಾಗಿದ್ದು, ಪುತ್ತೂರು ಶೇಟ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕ ರೂಪೇಶ್ ಅವರ ಪತ್ನಿ.
ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ
ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ನಮಗೆ ಗೌರವ ತರುವ ವೃತ್ತಿ, ವಿದ್ಯೆಗೆ ಶ್ರದ್ಧೆಯನ್ನು ತೋರಿದರೆ ಅದು ಯಶಸ್ಸಿನ ಸಾಧನೆಯಾಗುತ್ತದೆ ಇದಕ್ಕೆ ವಿದುಷಿ ಪವಿತ್ರ ರೂಪೇಶ್ ಅವರು ಮಾದರಿಯಾಗಿದ್ದಾರೆ. ತನ್ನ ವಿವಾಹದ ಸಂದರ್ಭದಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದ ಅವರು ವಿವಾಹದ ಬಳಿಕ ಬಿಎಸ್ಸಿ, ಬಿಎಡ್, ಸಂಗೀತದಲ್ಲಿ ವಿದ್ವತ್ ಮಾಡಿರುವ ಅವರು ಇದೀಗ ಡಾಕ್ಟರ್ ಪದವಿ ಲಭಿಸಿರುವುದು ಅವರ ಸಾಧನೆಗೆ ಸಿಕ್ಕಿದ ಫಲವಾಗಿದೆ.