ಮಹಾಲಿಂಗೇಶ್ವರನ ಸೇವೆ ಮಾಡುವ ಅವಕಾಶವು ಸಿಗಲಿ- ಡಾ.ಎಂ.ಕೆ.ಪ್ರಸಾದ್
ನಾಯಕತ್ವಕ್ಕೆ ಸಮರ್ಥ ವ್ಯಕ್ತಿ – ಸುಜೀಂದ್ರ ಪ್ರಭು
ಎಲ್ಲರಿಗೂ ಸಹಕಾರ ನೀಡುವ ವ್ಯಕ್ತಿ- ದಾಮೋದರ್ ಪಾಟಾಳಿ
ಎಲ್ಲರನ್ನು ಸಮಾನವಾಗಿ ನೋಡುವುದೇ ನನ್ನ ನಡೆ -ರವೀಂದ್ರ ಶೆಟ್ಟಿ ನುಳಿಯಾಲು
ಪುತ್ತೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರಾಗಿರುವ ರವೀಂದ್ರ ಶೆಟ್ಟಿ ನುಳಿಯಾಲು ಅವರಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಡಿ.3ರಂದು ಪುತ್ತೂರು ಆದರ್ಶ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ಮಹಾಲಿಂಗೇಶ್ವರನ ಸೇವೆ ಮಾಡುವ ಅವಕಾಶವು ಸಿಗಲಿ:
ರವೀಂದ್ರ ಶೆಟ್ಟಿ ನುಳಿಯಾಲು ಅವರಿಗೆ ಹಾರ, ಪೇಟ, ಫಲಪುಷ್ಪ, ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಅವರು ಮಾತನಾಡಿ, ನನಗೂ ರವೀಂದ್ರ ನುಳಿಯಾಲು ಅವರಿಗೆ ಬಹಳ ವರ್ಷದ ಸಂಬಂಧವಿದೆ. ಹೆಚ್ಚಿನ ದೇವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶದಲ್ಲಿ ಸಹಕಾರ ನೀಡಿದ ಅವರು ಸಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ. ಅಂತಹ ಧರ್ಮಪ್ರಜ್ಞೆಯುಳ್ಳ ಅವರಿಗೆ ಮುಂದೆ ಮಹಾಲಿಂಗೇಶ್ವರ ದೇವಸ್ಥಾನದ ಸೇವೆಯ ಭಾಗ್ಯವು ಒದಗಲಿ ಎಂದ ಅವರು ನೇರ ನಡೆನುಡಿಯ ಅವರ ಮಾತು ಸ್ವಲ್ಪ ಗಟ್ಟಿ. ಅಂತಹವರು ಗಣೇಶೋತ್ಸವದಲ್ಲಿ ಇದ್ದರೆ ನಮಗೂ ಶಕ್ತಿ ಬರುತ್ತದೆ ಎಂದರು.
ನಾಯಕತ್ವಕ್ಕೆ ಸಮರ್ಥ ವ್ಯಕ್ತಿ:
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು ಅವರು ಮಾತನಾಡಿ, ಎಲ್ಲಾ ಸಂಘ ಸಂಸ್ಥೆಗಳಲ್ಲೂ ತಮ್ಮಿಂದಾದ ಉತ್ತಮ ಸೇವೆ ನೀಡುತ್ತಿರುವ ರವೀಂದ್ರ ಶೆಟ್ಟಿಯವರು ಉತ್ತಮ ನಾಯಕತ್ವಕ್ಕೆ ಸಮರ್ಥ ವ್ಯಕ್ತಿ. ಗಣೇಶೋತ್ಸವ ಸಂದರ್ಭ ಅವರ ಕೆಲಸ ಕಾರ್ಯ ನಾವೆ ಕಂಡಿದ್ದೇವೆ ಎಂದರು.
ಎಲ್ಲರಿಗೂ ಸಹಕಾರ ನೀಡುವ ವ್ಯಕ್ತಿ:
ಸಾಮಾಜಿಕ ಕಾರ್ಯಕರ್ತ ದಾಮೋದರ್ ಪಾಟಾಳಿ ಅವರು ಅಭಿನಂದನಾ ನುಡಿಯನ್ನಾಡಿದರು. ರವೀಂದ್ರ ಶೆಟ್ಟಿಯವರು ಧಾರ್ಮಿಕ ಕ್ಷೇತ್ರವಲ್ಲದೆ ಶೈಕ್ಷಣಿಕ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ನಿಡ್ಪಳ್ಳಿಯ ಮುಂಡೂರು ಶಾಲಾ ಸಮಿತಿಯಲ್ಲಿ ಹಲವು ಸೇವೆ ನೀಡಿದ ಅವರು ಶಾಂತದುರ್ಗಾ ದೇವಸ್ಥಾನ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಶ್ರಮವಹಿಸಿದ ಅವರು ದೂರ ಊರಿಗೂ ದೇವಸ್ಥಾನವನ್ನು ಪರಿಚಯಿಸಿದ್ದಾರೆ. ಸಹಕಾರಿ ಕ್ಷೇತ್ರ, ಸಾಮಾಜಿಕ ಕ್ಷೇತ್ರದಲ್ಲೂ ಹಲವು ಸೇವೆ ನೀಡಿದ ಅವರು ಕೋವಿಡ್ ಸಂದರ್ಭದಲ್ಲಿ ಅವರ ಮನೆಯ ಮಂದೆ ಬಡವರಿಗೆ ಧಾನ್ಯ ನೀಡಿದ ಅವರ ಹಸಿವನ್ನು ನೀಗಿಸಿದವರು. ಇಂತಹ ದಾನಿಗಳಿಗೆ ಪ್ರಶಸ್ತಿ ಲಭಿಸಿರುವುದು ಪುತ್ತೂರಿಗೆ ಸಂದ ಗೌರವವಾಗಿದೆ ಎಂದರು.
ಎಲ್ಲರನ್ನು ಸಮಾನವಾಗಿ ನೋಡುವುದೇ ನನ್ನ ನಡೆ:
ಸನ್ಮಾನ ಸ್ವೀಕರಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಅವರು ಮಾತನಾಡಿ, ಎಲ್ಲರನ್ನು ಸಮಾನವಾಗಿ ನೋಡುವುದು ನನ್ನ ನಡೆಯಾಗಿದೆ. ಹಾಗಾಗಿ ನಾನು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ದೇವರ ಮತ್ತು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದೇನೆ. ಮಂಡಲ ಪಂಚಾಯತ್ ಇರುವ ಸಂದರ್ಭ ಹಲವು ಕೆಲಸ ನಿರ್ವಹಿಸಿದ್ದೆ. ನನ್ನನ್ನು ಗಣೇಶೋತ್ಸವ ಸಮಿತಿಯಲ್ಲಿ ಪದಾಧಿಕಾರಿಯನ್ನಾಗಿ ಮಾಡಿದ ಆದರ್ಶ ಆಸ್ಪತ್ರೆಯ ಯಜಮಾನ ಪ್ರಸಾದ್ ಭಂಡಾರಿಯವರ ಕಾಲಿಗೆ ನಮಸ್ಕಾರ ಮಾಡಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ವೇದಿಕೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಶ್ರೀನಿವಾಸ್, ಆದರ್ಶ ಆಸ್ಪತ್ರೆಯ ದಯಾನಂದ ಪಿ ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಭ್ಳೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ನೀಲಂತ್ ವಂದಿಸಿದರು. ಈ ಸಂದರ್ಭ ಸಮಿತಿ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.