ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಪುತ್ತೂರು ತಾಲೂಕು ಮಟ್ಟದ ಜ್ಞಾನಶರಧಿ/ ಜ್ಞಾನವಾರಿಧಿ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ವಿವಿಧ ಸ್ಪರ್ಧೆಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಸಹಯೋಗದಲ್ಲಿ ಡಿ.4ರಂದು ನಡೆಯಿತು. ಪ್ರಾಥಮಿಕ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾನ್ವಿ. ಎಸ್ ಭಾಷಣ ಪ್ರಥಮ, ಆಧ್ಯನ್. ಆರ್ ಚಿತ್ರಕಲೆ ಪ್ರಥಮ, ಅನನ್ಯ ಎನ್ ಪ್ರಬಂಧ ದ್ವಿತೀಯ, ನಾಗಭೂಷಣ ಕಿಣಿ ಶ್ಲೋಕ ಕಂಠಪಾಠ ದ್ವಿತೀಯ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಅಮೋಘ ಕೃಷ್ಣ.ಕೆ ಶ್ಲೋಕ ಕಂಠಪಾಠ ಪ್ರಥಮ ಹಾಗೂ ನಿಲಿಷ್ಕ. ಕೆ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ.