ಕೊಣಾಜೆ: ಆನೆ ದಾಳಿ ಶಂಕೆ-ದನ ಸಾವು

0

ಕಡಬ: ಕೊಣಾಜೆಯ ಸಿ ಆರ್ ಸಿ ಕಾಲೋನಿ ಬಳಿ ದನವೊಂದು ರಾತ್ರಿ ವೇಳೆ ತೋಟದಲ್ಲಿ ಗಾಯಗೊಂಡು ಮೃತಪಟ್ಟಿದ್ದು ಆನೆ ದಾಳಿ ನಡೆಸಿದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕೊಣಾಜೆ ದೊಡ್ಡಮನೆಯ ಅಶೋಕ ಎಂಬವರಿಗೆ ಸೇರಿದ ದನ ಮೇಯಲು ಬಿಟ್ಟಿದ್ದು ಸಂಜೆ ಮನೆಯವರಿಗೆ ಸಿಗಲಿಲ್ಲ, ಇಂದು ಬೆಳಿಗ್ಗೆ ಹುಡುಕಾಡಿದಾಗ ತೋಟವೊಂದರಲ್ಲಿ ಗಾಯಗೊಂಡು ಸತ್ತು ಬಿದ್ದಿದೆ. ತೋಟದಲ್ಲಿ ಪೈಪ್ ಗಳು ಹಾನಿಯಾಗಿದ್ದು ನಿನ್ನೆ ರಾತ್ರಿ ಆನೆ ಬಂದಿರುವ ಬಗ್ಗೆಯೂ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಸ್ವಷ್ಟ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.

LEAVE A REPLY

Please enter your comment!
Please enter your name here