ಬರೆಪ್ಪಾಡಿಯಲ್ಲಿ ವಿ.ವಿ ರೆಸಿಡೆನ್ಸಿ, ವಿ.ವಿ ಬಾರ್ & ರೆಸ್ಟೋರೆಂಟ್ ಶುಭಾರಂಭ

0

ಪುತ್ತೂರು: ಪಂಜ, ಹರಿಹರಪಲ್ಲತ್ತಡ್ಕದಲ್ಲಿ ಉತ್ತಮ ಗ್ರಾಹಕ ಸೇವೆ ನೀಡುತ್ತಿರುವ ವಿ.ಕೆ ಗ್ರೂಪ್ಸ್ ಇದರ ಸಹ ಸಂಸ್ಥೆ ವಿ.ವಿ ರೆಸಿಡೆನ್ಸಿ ಮತ್ತು ವಿ.ವಿ ಬಾರ್ & ರೆಸ್ಟೋರೆಂಟ್ ಕಡಬ ತಾಲೂಕಿನ ಕುದ್ಮಾರು ಬರೆಪ್ಪಾಡಿಯಲ್ಲಿ ದ.4 ರಂದು ಸಂಜೆ ಶುಭಾರಂಭಗೊಂಡಿತು.


ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿರವರು ದೀಪ ಬೆಳಗಿಸಿ ಚಾಲನೆ ನೀಡಿ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು. ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ವಕೀಲರ ಸಂಘದ ಮಾಜಿ ಅಧ್ಯಕ್ಷ ಶೀನಪ್ಪ ಗೌಡರವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ.ಪಿ ವರ್ಗೀಸ್, ಉದ್ಯಮಿ ಶಿವರಾಂ ಆಳ್ವ ಬಳ್ಳಮಜಲುಗುತ್ತು, ಬಾಬು ಪೂಜಾರಿ ಕೆಲೆಂಬೀರಿ, ಪ್ರವೀಣ್ ಕುಮಾರ್ ಕೆಡೆಂಜಿ, ನಾಗೇಶ್ ರೈ ಮಾಲ, ವೇಣುಗೋಪಾಲ ಶೆಟ್ಟಿ, ಪ್ರವೀಣ್ ಕುಂಟ್ಯಾನ, ಕಿರಣ್ ಎಂಟರ್ ಪ್ರೈಸಸ್ ನ ಕೇಶವ್, ಕೃಷಿ ಇಲಾಖೆಯ ಕೃಷ್ಣಪ್ರಸಾದ್ ಭಂಡಾರಿ, ಪಿಡಬ್ಕ್ಯೂಡಿ ಕಾಂಟ್ರಾಕ್ಟರ್ ಹರೀಶ್ ಕುಮಾರ್, ರಾಘವೇಂದ್ರ ಕೆಳಗಿನಕೇರಿ, ತೇಜಸ್ ವಿ.ಸೊರಕೆ, ಎ.ಪಿ ಮೋಹನ್, ಸಂದೇಶ್ ಅಂಬುಳ, ರಾಧಾಕೃಷ್ಣ ಪೈಕ ಸಹಿತ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು.


ಉತ್ತಮ ಗುಣಮಟ್ಟದ ಮದ್ಯವನ್ನು ಮಿತದರದಲ್ಲಿ ಪೂರೈಸುತ್ತಿದ್ದು ಮಾತ್ರವಲ್ಲ ಶುಚಿ-ರುಚಿಯಾದ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳು ದೊರೆಯುವುದೊಂದಿಗೆ ಉತ್ತಮ ರೆಸಿಡೆನ್ಸಿ ಕೂಡ ಹೊಂದಿದ್ದು ಗ್ರಾಹಕರು ಸಹಕರಿಸುವಂತೆ ವಿ.ಕೆ ಗ್ರೂಪ್ಸ್ ಸಂಸ್ಥೆಯ ವಿಜಯಕುಮಾರ್ ಸೊರಕೆ ಹಾಗೂ ಪಾಲುದಾರರಾದ ಎಂ.ವಿಶ್ವನಾಥ್ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here