ಪುತ್ತೂರು:ಪುರುಷರಕಟ್ಟೆಯ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಆಯೋಜನೆಯಲ್ಲಿ ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ಸಹಯೋಗದೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ಕೇಶವ ತಂತ್ರಿ, ಕೆಮ್ಮಿಂಜೆ ಕೃಷ್ಣ ತಂತ್ರಿ ಹಾಗೂ ಕೆಮ್ಮಿಂಜೆ ಸುಬ್ರಹ್ಮಣ್ಯ ತಂತ್ರಿಗಳ ಸ್ಮರಣಾರ್ಥವಾಗಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು ಡಿ.10ರಂದು ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ವಠಾರದಲ್ಲಿ ನಡೆಯಲಿದೆ.
ಶಿಬಿರವನ್ನು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳು ಉದ್ಘಾಟಿಸಲಿದ್ದಾರೆ. ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ಅಧ್ಯಕ್ಷ ಶ್ರೀಪಾಲ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಮಧುಮೇಹ ತಜ್ಞೆ ಡಾ.ಅನನ್ಯ ಲಕ್ಷ್ಮೀ ಸಂದೀಪ್, ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನ ಮುಖ್ಯ ಫಿಸಿಷಿಯನ್ ಹಾಗೂ ಆಯುರ್ವೇದ ತಜ್ಞ ಡಾ. ಸುಜಯ್ ತಂತ್ರಿ ಕೆಮಿಂಜೆ ಉಪಸ್ಥಿತಿಯಿರಲಿದ್ದಾರೆ.
ಶಿಬಿರದಲ್ಲಿ ಮಧುಮೇಹ ತಪಾಸಣೆ, ರಕ್ತದ ಒತ್ತಡ(ಬಿ.ಪಿ) ತಪಾಸಣೆ, ಇಸಿಜಿ, ನೆಬುಲೈಸರ್ ಹಾಗೂ ಆಯ್ದ ಔಷಧಿಗಳನ್ನು ವಿತರಿಸಲಾಗುವುದು. ಶಿಬಿರವು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರ ತನಕ ನಡೆಯಲಿದೆ. ಭಜನಾ ಮಂದಿರದ ಭಕ್ತಾದಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಹಾಗೂ ನಂದಿಕೇಶ್ವರ ಭಜನಾ ಮಂದಿರದ ಪ್ರಕಟಣೆ ತಿಳಿಸಿದೆ.