ಪುತ್ತೂರು: ಆಯುರ್ವೇದ ಪಂಚಕರ್ಮ ವಿಭಾಗದಲ್ಲಿ ತಜ್ಞ ವೈದ್ಯೆಯಾದ ಡಾ.ದಿವ್ಯಾ ಬಿ.ರವರು ಮಂಡಿಸಿದ “A comparative clinical study to evaluate the efficacy of Vaitarana Basti and Vaitarana Basti with Amalgamated Agnilepa in the management of Amavata w.s.r to Rheumatoid Arthritis” ಎಂಬ ಮಹಾಪ್ರಬಂಧಕ್ಕೆ ಗುಜರಾತ್‌ನ ವಡೋದರದಲ್ಲಿರುವ ಪಾರುಲ್ ವಿಶ್ವವಿದ್ಯಾಲಯ 6ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪುತ್ತೂರು ಬನಾರಿ ನಿವಾಸಿಯಾಗಿರುವ ಶ್ಯಾಂ ಭಟ್ ಮತ್ತು ಗೌರಿ ದಂಪತಿಯ ಪುತ್ರಿ ಹಾಗೂ ಡಾ.ಸಚಿನ್‌ದೇವರವರ ಪತ್ನಿಯಾಗಿರುವ ಡಾ.ದಿವ್ಯಾ ಬಿ.ರವರು ಪಾರುಲ್ ಆಯುರ್ವೇದ ಕಾಲೇಜು ಮತ್ತು ಹಾಸ್ಪಿಟಲ್‌ನಲ್ಲಿ ವೈದ್ಯೆಯಾಗಿದ್ದಾರೆ.