





ಸವಣೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಪುತ್ತಿಲ ಪರಿವಾರ ಪುತ್ತೂರು ಇದರ ಆಶ್ರಯದಲ್ಲಿ ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮ ಡಿ.24 ಮತ್ತು 25ರಂದು ಪುತ್ತೂರು ಮಹಾಲಿಂಗೇಶ್ವರ ದೇವರ ದೇವರಮಾರು ಗದ್ದೆಯಲ್ಲಿ ನಡೆಯಲಿರುವುದರಿಂದ ಸವಣೂರು ವಲಯದ ಪೂರ್ವಭಾವಿ ಸಭೆ ಸವಣೂರು ಯುವಕ ಮಂಡಲದಲ್ಲಿ ನಡೆಯಿತು.



ಈ ಸಂಧರ್ಭದಲ್ಲಿ ಶ್ರೀ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು. ಸಂಚಾಲಕ ರವಿಕುಮಾರ್ ರೈ ಕೆದಂಬಾಡಿ ಮಠ ಕಾರ್ಯಕ್ರಮದ ರೂಪುರೇಷಗಳ ಬಗ್ಗೆ, ಕಾರ್ಯಕರ್ತರು ಪ್ರತೀ ಹಿಂದೂಗಳ ಮನೆಗಳಿಗೆ ಆಮಂತ್ರಣ ಪತ್ರಿಕೆ ವಿತರಿಸುವ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ವೇದಿಕೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ನವೀನ್ ರೈ, ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್ ಉಪಸ್ಥಿತರಿದ್ದರು.






ಈ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸವಣೂರು ವಲಯದ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ವೆಂಕಟೇಶ್ ಭಟ್ ಕೊಯಿಕುಡೆ, ಸಂಚಾಲಕರಾಗಿ ಪುಷ್ಪರಾಜ ಆರೇಲ್ತಡಿ, ಅಧ್ಯಕ್ಷರಾಗಿ ದೇವಿಪ್ರಸಾದ್ ಪಂಚೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೌಶಿಕ್ ಶಾಂತಿನಗರ, ಕಾರ್ಯದರ್ಶಿಗಳಾಗಿ ಶ್ರೀಧರ ಸುಣ್ಣಾಜೆ, ಮೋಕ್ಷಿತ್ ಇಡ್ಯಾಡಿ, ದಿಲೀಪ್ ಹೆಗ್ಡೆ, ಪ್ರಖ್ಯಾತ್ ಪಂಚೋಡಿ, ಚೇತನ್ ಇಡ್ಯಾಡಿ, ಪ್ರಶಾಂತ್ ನೂಜಾಜೆ, ಮಿಥುನ್ ಅಗರಿ, ದಯಾನಂದ, ಸುರೇಶ್ ಬಂಬಿಲ, ಮನು ಸವಣೂರು, ರಾಮಚಂದ್ರ ಕುಮಾರಮಂಗಲ, ಉಪಾಧ್ಯಕ್ಷರಾಗಿ ಹರಿಪ್ರಸಾದ್ ಅಂಗಡಿಮೂಲೆ, ಪ್ರಕಾಶ್ ನೂಜಾಜೆ, ಗಂಗಾಧರ ಇಡ್ಯಾಡಿ, ಕರುಣಾಕರ ಸಾರಕೆರೆ ಹಾಗೂ ಸದಸ್ಯರುಗಳ ಸಮಿತಿಯನ್ನು ರಚಿಸಲಾಯಿತು.





