ಪುತ್ತೂರು: ಆದಿ ಸುಬ್ರಹ್ಮಣ್ಯದಲ್ಲಿ ಹುತ್ತಕ್ಕೆ ಪೂಜೆ ಸಲ್ಲುವಂತೆ ಪುತ್ತೂರು ತಾಲೂಕಿನಲ್ಲೂ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ದಿನನಿಗದಿಯಾಗಿದ್ದು, ಪೂರ್ವಭಾವಿಯಾಗಿ ಡಿ.10ರಂದು ಸಂಜೆ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿ ಪೆರ್ಲಂಪಾಡಿ ಇದರ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಅವರು, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕೊಳ್ತಿಗೆ ಗ್ರಾಮದ ಗಡಿಯಲ್ಲಿದ್ದು ಈ ನಿಟ್ಟಿನಲ್ಲಿ ಕೊಳ್ತಿಗೆ ಗ್ರಾಮದ ಕೇಂದ್ರವಾಗಿರುವ ಪೆರ್ಲಂಪಾಡಿಯಿಂದಲೂ ಭಕ್ತಾದಿಗಳು ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಸಭೆಯಲ್ಲಿ ವಿವಿಧ ಸಲಹೆ ಸೂಚನೆಗಳನ್ನು ಪ್ರಮುಖರು ನೀಡಿದರು. ಪೆರ್ಲಂಪಾಡಿ ಭಾಗದಿಂದ ಫೆ.20ರಂದು ಹಸಿರು ಹೊರೆಕಾಣಿಕೆ ಸಂಗ್ರಹಿಸಿ ಬಾಯಂಬಾಡಿ ಷಣ್ಮುಖದೇವ ದೇವಸ್ಥಾನದಿಂದ ಹೊರಟು ನಳೀಲು ದೇವಸ್ಥಾನಕ್ಕೆ ತರುವುದಾಗಿ ತಿಳಿಸಿದರು. ಪೆರ್ಲಂಪಾಡಿ ಭಾಗದಲ್ಲಿ ಆಮಂತ್ರಣ ಹಂಚುವ ಕುರಿತು ಪಟ್ಟಿ ತಯಾರಿಸಲಾಯಿತು.
ಸಭೆಯಲ್ಲಿ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟರಮಣ ಕೆ.ಎಸ್.,ಕೊಳ್ತಿಗೆ ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನೇಮಿರಾಜ ಪಾಂಬಾರು, ಎಪಿಎಂಸಿ ಮಾಜಿ ನಿರ್ದೇಶಕ ತೀರ್ಥಾನಂದ ದುಗ್ಗಳ , ಕೊಳ್ತಿಗೆ ಗ್ರಾ.ಪಂ.ಸದಸ್ಯರಾದ ಯತೀಂದ್ರ ಕೊಚ್ಚಿ,ಪವನ್ ಡಿ.ಜಿ.ದೊಡ್ಡಮನೆ,ಮಾಜಿ ಸದಸ್ಯರಾದ ಭರತ್ ಕೆಮ್ಮಾರ ,ಎಸ್.ಪಿ.ಮುರಳೀಧರ ಕೆಮ್ಮಾರ, ಹರಿಪ್ರಸಾದ್ ಕೆ.ಬಿ.,ಸತ್ಯಪ್ರಕಾಶ್ ಕುಂಟಿಕಾನ,ಶಿವರಾಮ ಪೂಜಾರಿ, ಸತೀಶ್ ಎನ್.ವಿ.ನೂಜಿ, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಭರತ್ ರಾಜ್ ಕೆ.,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ರೈ ,ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ರೈ ,ಸಮಿತಿ ಪದಾಧಿಕಾರಿಗಳಾದ ಸುಧಾಕರ ರೈ ಪಾಲ್ತಾಡಿ ಹೊಸಮನೆ,ಜಗನ್ನಾಥ ರೈ ಮಣಿಕ್ಕರ,ಪ್ರವೀಣ್ ಚೆನ್ನಾವರ ಉಪಸ್ಥಿತರಿದ್ದರು. ಸುಂದರ ಪೂಜಾರಿ ಮಣಿಕ್ಕರ ಸ್ವಾಗತಿಸಿ, ವಂದಿಸಿದರು.