ರಾಮಕುಂಜ ಪ.ಪೂ.ಕಾಲೇಜು ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

0

ರಾಮಕುಂಜ: ಇಲ್ಲಿನ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕ್ರೀಡಾಕೂಟವು ಡಿ.10ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.


ಅಧ್ಯಕ್ಷತೆಯನ್ನು ನವೀನ್ ಕುಮಾರ್ ಕೆ.ರವರು ವಹಿಸಿದ್ದರು. ಶಿಕ್ಷಕ ಪಿ.ಎಸ್. ನಾರಾಯಣರವರು ಕ್ರೀಡಾಕೂಟ ಉದ್ಘಾಟಿಸಿದರು. ಸಂಸ್ಥೆಯ ಪ್ರಾಂಶುಪಾಲ ಕೆ.ಚಂದ್ರಶೇಖರ್‌ ಮಾತನಾಡಿ, ಹಿರಿಯ ವಿದ್ಯಾರ್ಥಿ ಮತ್ತು ಸಂಸ್ಥೆಯ ಒಡನಾಟ ನಿರಂತರ ಇರಲಿ. ಸಂಸ್ಥೆಯ ಏಳಿಗೆಗೆ ಸದಾ ಪ್ರೋತ್ಸಾಹವು ಹಿರಿಯ ವಿದ್ಯಾರ್ಥಿಗಳಿಂದ ದೊರೆಯಲಿ ಎಂದು ಹೇಳಿದರು. ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್ ಸ್ವಾಗತಿಸಿ, ದಿನೇಶ್ ವಂದಿಸಿದರು. ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here