ಉಪ್ಪಿನಂಗಡಿ ಕಾಳಿಕಾಂಬಾ ಭಜನಾ ಮಂಡಳಿಯ ‘60 ರ ಸಂಭ್ರಮ’-ಭಜನೋತ್ಸವ ಮತ್ತು ಧಾರ್ಮಿಕ ಸಭೆ

0

ಭಜನಾ ಮಂಡಳಿಯು ಸಾಮಾಜಿಕ ಕಾರ್ಯಕ್ಕೂ ಮುಂದಾಗಬೇಕು: ಅರ್ಪಿತಾ ಪ್ರಶಾಂತ್
ಉಪ್ಪಿನಂಗಡಿ: ಭಕ್ತಿ ಭಾವವನ್ನು ಮೂಡಿಸುವ ಮತ್ತು ಪ್ರಸರಿಸುವ ಭಜನಾ ಮಂಡಳಿಯೊಂದು ಸಾಮಾಜಿಕ ಸಾಮರಸ್ಯದ ಕಾರ್ಯಕ್ಕೆ ಮುಂದಾಗಿರುವುದು ಈಗಿನ ಅವಶ್ಯಕ ನಡೆಯಾಗಿದ್ದು, ಇಡೀ ಹಿಂದೂ ಸಮಾಜಕ್ಕೆ ಇದು ಪ್ರೇರಣಾದಾಯಿಯಾಗಿದೆ ಎಂದು ಉಡುಪಿ ಸಮೂಹ ಸಂಸ್ಥೆ ಮಣಿಪಾಲ ಇಲ್ಲಿನ ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಶ್ಲಾಘಿಸಿದರು.


ಉಪ್ಪಿನಂಗಡಿ ಕಾಳಿಕಾಂಬಾ ಭಜನಾ ಮಂಡಳಿಯ ‘60 ರ ಸಂಭ್ರಮ’ ಕಾರ್ಯಕ್ರಮದ ಅಂಗವಾಗಿ ಭಾನುವಾರ ರಾತ್ರಿ ಇಲ್ಲಿನ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದಲ್ಲಿ ನಡೆದ ಭಜನೋತ್ಸವ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


ದೇವಾಲಯ ಮತ್ತು ಅಲ್ಲಿನ ವಿಧಿ ವಿಧಾನಗಳ ಹಿಂದೆ ವೈಜ್ಞಾನಿಕ ಮಹತ್ವವಿದೆ. ನಿತ್ಯ ಜೀವನದಲ್ಲಿನ ಸಂಸ್ಕಾರಗಳ ಬಗ್ಗೆಯೂ ವೈಜ್ಞಾನಿಕ ಮಹತ್ವವಿದೆ. ಅದನ್ನು ತಿಳಿಸುವ ವ್ಯವಸ್ಥೆ ಮಾಡದಿರುವುದರಿಂದ ಅದರ ಬಗ್ಗೆ ನಿರ್ಲಕ್ಷ್ಯ ನೀತಿ ವ್ಯಕ್ತವಾಗುತ್ತಿರುವುದು ಖೇದಕರ ವಿದ್ಯಾಮಾನ. ನಮ್ಮ ಜೀವನ ಮೌಲ್ಯಗಳ ಮಹತ್ವವನ್ನು ತಿಳಿಸುವ ಕಾರ್ಯದತ್ತ ಸಮಾಜ ವಿಶೇಷವಾಗಿ ಗಮನ ಹರಿಸಬೇಕು ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ಭಜನಾ ಮಂಡಳಿಯೊಂದು ಸಮಾಜದ ಮುಖ್ಯ ವಾಹಿನಿಯಲ್ಲಿದ್ದುಕೊಂಡು ಸಾಮಾಜಿಕ ಸಾಮರಸ್ಯದ ಬೆಸುಗೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದರು.
೬೦ ರ ಸಂಭ್ರಮ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಶ್ರೀರಾಮ ಶಾಲಾ ಸಂಚಾಲಕ ಯು.ಜಿ. ರಾಧ ಮಾತನಾಡಿ, ಪ್ರಚಾರವನ್ನು ಬಯಸಬಾರದಾದರೂ ಸಮಾಜಕ್ಕೆ ಉತ್ತಮ ಕಾರ್ಯವನ್ನು ಪ್ರೇರೇಪಿಸಲು ಮಾಡಿದ ಉತ್ತಮ ಕಾರ್ಯವನ್ನು ದಾಖಲೀಕರಣ ಮಾಡುವುದು ಅತ್ಯವಶ್ಯಕವೆಂದರು.


ಕಾರ್ಯಕ್ರಮದ ಅಂಗವಾಗಿ ನಡೆದ ಭಜನೋತ್ಸವದಲ್ಲಿ ವಿವಿಧ ಭಜನಾ ತಂಡಗಳಿಂದ ಮನಮೋಹಕ ನೃತ್ಯ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿಜ್ಞಾನ ಸಂಶೋಧನಾ ವಿಭಾಗದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಂಡಳಿಯ ಭಜಕ ಹೃಷಿಕೇಶ್ ನಾಯಕ್ ರವರನ್ನು ಸನ್ಮಾನಿಸಲಾಯಿತು. ಹಾಗೂ ಹಿರಿಯ ಭಜಕರಾದ ಡ್ರೈವರ್ ಕೃಷ್ಣಪ್ಪ, ಎಂ ವರದರಾಜ, ಚಂದ್ರಶೇಖರ್, ವಿಶ್ವನಾಥ್ ಟೈಲರ್, ಐ. ಕೃಷ್ಣ ನಾಯಕ್, ಯು. ಕೃಷ್ಣ , ಸುಂದರ ಆದರ್ಶನಗರ, ಐ. ಕೇಶವ ನಾಯಕ್, ಹರಿರಾಮಚಂದ್ರ, ಐ. ಜನಾರ್ದನ ನಾಯಕ್, ಸೀತಾರಾಮ ಸುರ್ಯರವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಕಾಳಿಕಾಂಬ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಭಜಕಿ ಶಕೀಲಾ ಕುಂದರ್ ಮುಂಬೈ, ಶ್ರೀ ಮಾಧವ ಶಿಶು ಮಂದಿರದ ಸ್ಥಾಪಕ ಸಹಾಯಕ ಮಾತಾಜಿ ಚಂದ್ರಾವತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಕಾಮಾಕ್ಷಿ ಜಿ. ಹೆಗ್ಡೆ, ಸುಜಾತ ಕೃಷ್ಣ ಆಚಾರ್ಯ, ಅಶೋಕ್ ರೈ ಅರ್ಪಿಣಿಗುತ್ತು, ಪ್ರಶಾಂತ್, ಕೆ. ಜಗದೀಶ್ ಶೆಟ್ಟಿ, ಉಷಾ ಮುಳಿಯ, ರಾಧಾ, ಯತೀಶ್ ಶೆಟ್ಟಿ, ಪುಷ್ಪಲತಾ ಜನಾರ್ದನ, ವಿನೋದ್, ಎನ್. ಹರೀಶ್ ನಾಯಕ್, ಸುಗಂಧಿ, ಶಶಿಕಲಾ , ಲೋಲಾಕ್ಷಿ, ನಿತೀಶ್, ಜಯಂತ ಪೋರೊಳಿ, ಹರಿಣಿ, ರಾಧಾಕೃಷ್ಣ ಬೊಳ್ಳಾವು, ಹರೀಶ್ ಭಂಡಾರಿ, ಬೊಮ್ಮಯ್ಯ ಬಂಗೇರ, ವಿದ್ಯಾಧರ ಜೈನ್, ಕೈಲಾರ್ ರಾಜಗೋಪಾಲ ಭಟ್, ದೇವರಾಜ್, ಶಶಿಧರ್, ಡಾ. ಯತೀಶ್ ಶೆಟ್ಟಿ, ಬಾಲಕೃಷ್ಣ ರೈ, ಡಾ. ನಿರಂಜನ್ ರೈ, ಎನ್. ಉಮೇಶ್ ಶೆಣೈ, ಸುರೇಶ್ ಅತ್ರಮಜಲು, ಪುಷ್ಪಾಕರ್, ಮಾಧವಿ ರೈ, ಅನುರಾಧ ಆರ್. ಶೆಟ್ಟಿ, ರವೀಂದ್ರ ದರ್ಬೆ, ಬೇಬಿ ಎಸ್. ಶೆಟ್ಟಿ ಮತ್ತಿತ್ತರರು ಭಾಗವಹಿಸಿದ್ದರು.
ಕೆ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಪ್ರಜ್ಞಾ ಪ್ರಾರ್ಥಿಸಿದರು. ಎನ್. ಗೋಪಾಲ ಹೆಗ್ಡೆ ಸ್ವಾಗತಿಸಿದರು. ಭಜನಾ ಮಂಡಳಿಯ ಕಾರ್ಯದರ್ಶಿ ಮಾಧವ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here