ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮದಾರರಿಗೆ ಝೆಡ್ ಪ್ರಮಾಣ ಪತ್ರದ ಅರಿವು, ಪ್ರಯೋಜನಗಳ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಗ್ಲೋಬಲ್ ಇನ್‌ಸ್ಟಿಟ್ಯೂಟ್ ಫಾರ್ ಎಜುಕೇಶನ್ ಆ್ಯಂಡ್ ರೀಸರ್ಚ್ ಫೌಂಡೇಶನ್ ಕರ್ನಾಟಕ, ಅರಿವು ಕೃಷಿ ಕೇಂದ್ರ ಪುತ್ತೂರು ಹಾಗೂ ಎಂಎಸ್‌ಎಂಇ ಡಿಎಫ್‌ಒ ಮಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ದ.ಕ. ಇವರ ಸಹಬಾಗಿತ್ವದಲ್ಲಿ ಸೂಕ್ಷ್ಮ, ಸಣ್ಣ, ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಗೆ ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಇಲಾಖೆಗಳ ಸಚಿವಾಲಯದ ಅಡಿಯಲ್ಲಿ ನಡೆಯುತ್ತಿರುವ ZED(ಶೂನ್ಯ ಪರಿಣಾಮ ಮತ್ತು ಕೊರತೆ) ಪ್ರಮಾಣಪತ್ರ ಬಗ್ಗೆ ಅರಿವು ಮತ್ತು ಪ್ರಯೋಜನಗಳ ಕುರಿತು ಮಾಹಿತಿ ಕಾರ್ಯಾಗಾರ ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ಹಾಲ್‌ನಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾದ ಎಂಎಸ್‌ಎಂಇ ಜಂಟಿ ನಿರ್ದೇಶಕ ದೇವರಾಜ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಝೆಡ್ ಪ್ರಮಾಣಪತ್ರ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಉದ್ಯಮಗಳಿಗೆ ಸರಕಾರ ನೀಡುತ್ತಿರುವ ಉತ್ತೇಜನ ಸೌಲಭ್ಯಗಳನ್ನು ತಿಳಿಸಿದರು. ಅಂತರ್ರಾಷ್ಟ್ರೀಯ ಯೋಜನೆ ಅಡಿಯಲ್ಲಿ ರೂ.3.5 ಲಕ್ಷಗಳವರೆಗೆ ಸ್ಟಾಲ್ ಬಾಡಿಗೆ, ರೂ.1.75 ಲಕ್ಷಗಳವರೆಗೆ ವಿಮಾನ ಪ್ರಯಾಣ ವೆಚ್ಚ, ರೂ.75 ಸಾವಿರ ವರೆಗೆ ಸಾಗಾಣಿಕೆ ವೆಚ್ಚ, ದೇಶದಲ್ಲಿ ಉತ್ಪಾದಿಸಿದ ವಸ್ತುಗಳನ್ನು ಭಾರತೀಯ ರೈಲ್ವೆ ಮೂಲಕ ಸಾಗಾಣಿಕೆ ಮಾಡಿದರೆ, ಸಾಗಾಣಿಕೆ ವೆಚ್ಚದ ಮೇಲೆ 45ಶೇ.ರಿಯಾಯಿತಿ, ದೇಶದ ವಿವಿಧ 14 ಬ್ಯಾಂಕ್‌ಗಳ ಮೂಲಕ ಪಡೆಯುವ ಸಾಲ ಸೌಲಭ್ಯಕ್ಕೆ ಬಡ್ಡಿದರದಲ್ಲಿ ೦.5ಶೇ.ದಿಂದ 2ಶೇ.ವರೆಗೆ ಕಡಿತ, ಸಾಲ ಸೌಲಭ್ಯಗಳ ಸಂಸ್ಕರಣ ಶುಲ್ಕಗಳ ಮೇಲೆ ಶೇ.25 ರಿಂದ ಶೇ.50ರವರೆಗೆ ರಿಯಾಯಿತಿ ಹಾಗೂ ಇತರೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.


ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಮಾತನಾಡಿ, ಉದ್ಯಮದಾರರಿಗೆ ಸರಕಾರ ಸಬ್ಸಿಡಿ, ಮಾರ್ಗದರ್ಶನ, ಸೌಲಭ್ಯ ಕೊಡುತ್ತದೆ. ಝೆಡ್ ಪ್ರಮಾಣಪತ್ರ ಲೋಕಲ್ ಟು ವೋಕಲ್‌ಗೆ ಸಹಕಾರಿಯಾಗುತ್ತದೆ. ಎಲ್ಲರೂ ತಮ್ಮ ವ್ಯವಹಾರವನ್ನು ಅಕೌಂಟಿಂಗ್‌ ಗೆ ಒಳಪಡಿಸಬೇಕು. ನಾವು ಸರಕಾರಕ್ಕೆ ಟ್ಯಾಕ್ಸ್ ನೀಡಿದರೆ ಸರಕಾರ ನಮಗೆ ಸೌಲಭ್ಯಗಳನ್ನು ನೀಡುತ್ತದೆ ಎಂದು ಹೇಳಿ ಅರಿವು ಕೃಷಿ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದರು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಯು.ಪಿ.ಶಿವಾನಂದ ಮಾತನಾಡಿ, ಲೋಕಲ್‌ನ್ನು ಗ್ಲೋಬಲ್ ಆಗಿ ಮಾಡುವುದು ಇದರ ಉದ್ದೇಶವಾಗಿದೆ. ಝೆಡ್ ಪ್ರಮಾಣಪತ್ರದ ಬಗ್ಗೆ ಯಾವುದೇ ಮಾಹಿತಿ ಬೇಕಾದರು ಅರಿವು ಕೃಷಿಕೇಂದ್ರದಿಂದ ನೀಡುತ್ತೇವೆ. ಗ್ಲೋಬಲ್ ಸಂಸ್ಥೆಯು ಕೂಡ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ತರಬೇತಿ ನೀಡಲು ವ್ಯವಸ್ಥೆ ಮಾಡುತ್ತದೆ. ಮುಂದಿನ ಮಾರ್ಚ್ ತಿಂಗಳ ಮೊದಲು ಪ್ರಮಾಣಪತ್ರ ಪಡೆದುಕೊಳ್ಳಿ. ಪುತ್ತೂರು ತಾಲೂಕಿನ ಎಲ್ಲಾ ಉದ್ದಿಮೆದಾರರೂ ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.

ಗ್ಲೋಬಲ್ ಇನ್‌ಸ್ಟಿಟ್ಯೂಟ್ ಫಾರ್ ಎಜುಕೇಶನ್ ಆಂಡ್ ರೀಸರ್ಚ್ ಫೌಂಡೇಶನ್‌ನ ಆಶಿಷ್ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯಮದಾರರಿಗೆ ಝೆಡ್ ಪ್ರಮಾಣಪತ್ರ ಮಾಡಿಕೊಡುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ. ಇದಕ್ಕೆ ದ.ಕ.ಜಿಲ್ಲೆಯಾದ್ಯಂತ ಉದ್ಯೋಗಿಗಳನ್ನು ನೇಮಕ ಮಾಡಲಾಗಿದೆ. ಅವರು ಉದ್ಯಮಗಳಿಗೆ ಭೇಟಿ ನೀಡಲಿದ್ದಾರೆ. ಲೋಕಲ್ ಟು ವೋಕಲ್‌ಗೆ ಸರ್ಟಿಫೈ ಮಾಡಿಕೊಡಲಾಗುತ್ತದೆ. ಇದರಲ್ಲಿ ಬ್ರೋನ್ಜ್, ಸಿಲ್ವರ್ ಹಾಗೂ ಗೋಲ್ಡ್ ಪ್ರಮಾಣಪತ್ರಗಳಿವೆ. ಪ್ರತೀ ಉತ್ಪಾದನೆಯನ್ನು ಬೆಸ್ಟ್ ಪ್ರೊಡಕ್ಟ್ ಆಗಿ ಮಾಡಲು ಸಹಕಾರಿಯಾಗುತ್ತದೆ. ಉದ್ಯಮದ ಐದು ಪಾರಾಮೀಟರ್‌ಗಳನ್ನು ಅವಲೋಕಿಸಿ ಪ್ರಮಾಣಪತ್ರ ನೀಡಲಾಗುತ್ತದೆ ಎಲ್ಲರೂ ಸಹಕರಿಸಿ ಎಂದರು.

ಲಘು ಉದ್ಯೋಗ ಭಾರತಿಯ ಕಾರ್ಯದರ್ಶಿ ವೆಂಕಟೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಯು.ಪಿ.ಶಿವಾನಂದ ಸ್ವಾಗತಿಸಿದರು. ಪುತ್ತೂರು ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಶಿವಶಂಕರ ಭಟ್ ವಂದಿಸಿದರು. ಸುದ್ದಿ ಚಾನೆಲ್‌ನ ಉಮೇಶ್ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

ಗೀತಾ ಪಡ್ನೂರು, ಸಾಜಿ ಮಾಧವ ಪುತ್ತೂರು, ಅಬ್ದುಲ್ ರಹಿಮಾನ್ 34-ನೆಕ್ಕಿಲಾಡಿ, ಮೋಹನ್ ಕುಮಾರ್ ಬೊಳ್ಳಾಡಿ, ರೇಖಾ ಪುರುಷರಕಟ್ಟೆ, ಮೋಕ್ಷಿತ್ ಕಬಕ, ವೆಂಕಟಕೃಷ್ಣ ಕಾವು, ಉಸ್ಮಾನ್ ಕೆ. ಕೆಮ್ಮಿಂಜೆ, ಗಂಗಾಧರ್ ಕೆ. ಸುಳ್ಯ, ಬಾಲಕೃಷ್ಣ ಆಚಾರ್ಯ ಪುತ್ತೂರು, ಪುಷ್ಪಾ ಮುಕ್ವೆ, ಮುರಳೀಧರ ಕೆದಿಲ, ಶಂಕರ್ ಭಟ್ ವಿ.ಎಸ್. ಪುತ್ತೂರು, ಜಯಂತಿ ಪುತ್ತೂರು, ಆರ್.ವಿ. ರವೀಂದ್ರನ್ ಪುತ್ತೂರು, ಹರ್ಷ ಕುಮಾರ್ ರೈ ಮಂಗಳೂರು, ಚಂದ್ರಶೇಖರ್ ಸುಳ್ಯ, ಶಿವಪ್ರಕಾಶ್ ಪುತ್ತೂರು, ಮೇಘನಾ ಪಾಣಾಜೆ, ಪುತ್ತೂರು, ಡಾ. ಭಾಸ್ಕರ್ ಎಸ್. ಸಿಟಿ ಹಾಸ್ಪಿಟಲ್ ಪುತ್ತೂರು, ಡಾ.ಪಿ.ಕೆ.ಎಸ್.ಭಟ್ ಮೊಟ್ಟೆತಡ್ಕ, ರೂಪೇಶ್ ನಾಯ್ಕ್ ಪುತ್ತೂರು, ಗಿರೀಶ್ ಕೆ.ಎನ್. ಪುತ್ತೂರು, ವಿಶ್ವೇಶ್ವರ ಭಟ್ ಉಪ್ಪಿನಂಗಡಿ, ಸತ್ಯನಾರಾಯಣ ಭಟ್ ಉಪ್ಪಿನಂಗಡಿ, ವಿಶ್ವಪ್ರಸಾದ್ ಸೇಡಿಯಾಪು, ಶೇಖರ ಪೂಜಾರಿ ಪುತ್ತೂರು, ಆಶ್ಲೇಷ್ ಡಿ’ಸೋಜಾ, ಡಾ.ಮನುಜೇಶ್ ಬಿ.ಜೆ, ವಿವೇಕಾನಂದ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಪುತ್ತೂರು, ಜಿ. ಗೋಪಕುಮಾರ್ ಪುತ್ತೂರು, ಕೆ. ವಸಂತ ಸುವರ್ಣ ಬನ್ನೂರು, ಕೆ.ಎಮ್.ಇಬ್ರಾಹಿಂ ಕೆಮ್ಮಿಂಜೆ, ನರೇಶಕೃಷ್ಣ ಕೆ., ಯತಿರಾಜ್ ಕೆದಿಲ, ರಾಜಗೋಪಾಲ ಪಿ.ಎಸ್.ಪುತ್ತೂರು, ಅಕ್ಷಯ್ ಎಸ್.ಕೆ., ಕಿಶೋರ್ ಕುಮಾರ್ ಮಾಸ್ಟರ್ ಪ್ಲಾನರಿ ಪುತ್ತೂರು, ಇಸ್ಮಾಯಿಲ್ ಕಲ್ಲರ್ಪೆ, ಮಾಧವ ಪೂಜಾರಿ ಮುಕ್ರಂಪಾಡಿ, ಡಾಲ್ಫಿ ಡಿ’ಸೋಜಾ ಪುರುಷರಕಟ್ಟೆ, ಮೋಹನ್, ಮೋಹನ್ ಗ್ರಾಫಿಕ್ಸ್ ಪುತ್ತೂರು, ಮಂಜುನಾಥ ಪುತ್ತೂರು, ಸಂತಫಿಲೋಮಿನಾ ಕಾಲೇಜು ವಿದ್ಯಾರ್ಥಿಗಳು, ಗ್ಲೋಬಲ್ ಸೌತ್‌ಹೆಡ್‌ನ ರಾಮಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಸುದ್ದಿ ಚಾನೆಲ್ ಸಿಇಒ ಸೃಜನ್ ಊರುಬೈಲು, ಬೆಳ್ತಂಗಡಿ ಸುದ್ದಿ ಬಿಡುಗಡೆ ಸಿಇಒ ಸಿಂಚನ ಊರುಬೈಲು, ಪುತ್ತೂರು ಸುದ್ದಿಬಿಡುಗಡೆ ಸಿಬಂದಿಗಳಾದ ರಾಜೇಶ್ ಎಂ.ಎಸ್. ಶಿವಕುಮಾರ್ ಈಶ್ವರಮಂಗಲ, ಚಂದ್ರಕಾಂತ್ ಉರ್ಲಾಂಡಿ, ಕುಶಾಲಪ್ಪ ಅಗಳಿ, ಪ್ರಶಾಂತ್ ಮಿತ್ತಡ್ಕ, ಹೊನ್ನಪ್ಪ, ಸಚಿನ್ ಶೆಟ್ಟಿ, ಚೈತ್ರ, ರಕ್ಷಾ ಸಹಕರಿಸಿದರು. ಬೆಳ್ತಂಗಡಿ ಸುದ್ದಿಬಿಡುಗಡೆಯ ಜಾಹೀರಾತು ವಿಭಾಗದ ಮುಖ್ಯಸ್ಥ ಸಂದೀಪ್ ಶೆಟ್ಟಿ, ವರದಿಗಾರರಾದ ನಿಶಾನ್ ಬಂಗೇರ, ರೂಪೇಶ್, ಸುಳ್ಯ ಸುದ್ದಿಬಿಡುಗಡೆಯ ದಯಾನಂದ ಕೊರತ್ತೋಡಿ, ಹಸೈನಾರ್ ಜಯನಗರ, ಈಶ್ವರ್ ವಾರಣಾಸಿ, ಶಿವಪ್ರಸಾದ್ ಆಲೆಟ್ಟಿ, ರಮ್ಯಾ ಸತೀಶ್ ಕಳಂಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here