ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ ಪೂಜೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಪದ್ಧತಿಯಂತೆ ಕಾರ್ತಿಕ ಮಾಸದ ಆಚರಣೆಗಳು ಮುಗಿದು, ಧನುಸಂಕ್ರಮಣದಿಂದ ಆರಂಭವಾಗುವ ಧನುರ್ಮಾಸದಲ್ಲಿ ಸಂಕ್ರಮಣದ ಮರುದಿನದಿಂದ ಮುಂದಿನ ಉತ್ತರಾಯಣ ಪುಣ್ಯಕಾಲ ಮಕರಸಂಕ್ರಮಣದವರೆಗೆ ’ಧನುಪೂಜೆ’ ನಡೆಯುತ್ತದೆ. ಡಿ.17 ಧನುಪೂಜೆ ಆರಂಭಗೊಂಡಿದ್ದು ಬೆಳಿಗ್ಗೆ ರುದ್ರ ಪಠಣದ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.


ಪ್ರಾಥಃಕಾಲದ ಮತ್ತು ಧನುರ್ಮಾಸದ ಮೊದಲ ಪೂಜೆಗಾಗಿ ನಸುಕಿನ ಜಾವ ದೇವಸ್ಥಾನದಲ್ಲಿ ಭಕ್ತ ಸಾಗರ ಹರಿದು ಬಂತು. ಬೆಳಿಗ್ಗೆ ಗಂಟೆ 4.15ಕ್ಕೆ ವೇದ ಸಂವರ್ಧನ ಪ್ರತಿಷ್ಠಾನದ ನೇತೃತ್ವದಲ್ಲಿ ರುದ್ರಪಠಣ ಆರಂಭಗೊಂಡಿತ್ತು. ಗಂಟೆ 5.30ಕ್ಕೆ ಧನುಪೂಜೆ ನಡೆಯಿತು. ಪೂಜೆಯ ನಂತರ ನಿತ್ಯ ಬಲಿ ಉತ್ಸವ ನಡೆಯಿತು. ದೇವಳದ ಹೊರಾಂಗಣದಲ್ಲಿ ಭಕ್ತರಿಗೆ ಅವಲಕ್ಕಿ ಪ್ರಸಾದ ವಿತರಣೆ ನಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಮಾಜಿ ಅಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೇದ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ಎಂ.ಟಿ.ಜಯರಾಮ ಭಟ್, ಪ್ರತಿಷ್ಠಾನದ ಉಪಾಧ್ಯಕ್ಷ ಮಣಿಲಾ ಸಿ ಮಹಾದೇವ ಶಾಸ್ತ್ರೀ, ದೇವಳದ ಅರ್ಚಕ ಜಯರಾಮ್ ಜೋಯಿಷ, ವಾಸ್ತು ಇಂಜಿನಿಯರ್ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಧನುಪೂಜೆಯ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ಬಿ.ಐತ್ತಪ್ಪ ನಾಯ್ಕ್, ರಾಮ್‌ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್, ವೇ ಮೂ ವಸಂತ ಕೆದಿಲಾಯ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here