ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ಮತ್ತು ಪ್ರಸಾದ್ ನೇತ್ರಾಲಯ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಭಾರತ ಸರ್ಕಾರ (NOTTO) ಇದರ ಸಂಯೋಗದೊಂದಿಗೆ ಅಂಗಾಂಗ ದಾನ ನೋಂದಾಣಿಕೆ ಮಾಹಿತಿ ಶಿಬಿರ ಡಿ.19 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ರಾಧಾಕೃಷ್ಣ ಬಿಲ್ಡಿಂಗ್ ನಲ್ಲಿನ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ಮತ್ತು ಪ್ರಸಾದ್ ನೇತ್ರಾಲಯದಲ್ಲಿ ನಡೆಯಿತು.
ನೇತ್ರ ತಜ್ಞೆ ಡಾ.ಅಂಬಿಕಾರವರು ಫಲಾನುಭವಿಗಳಿಗೆ ಉಚಿತ ನೇತ್ರ ತಪಾಸಣೆನ್ನು ನಡೆಸಿಕೊಟ್ಟರು. ಸೋಟೊ(State organ and tissue transplant organization)ಕರ್ನಾಟಕ ಇದರ ಅಂಗಾಂಗ ದಾನ ಸಂಯೋಜಕಿ ಲವೀನ ಹಾಗೂ ಪದ್ಮಾವತಿ ಅಂಗಾಂಗ ದಾನ ನೋಂದಾಣಿಕೆಯನ್ನು ನಡೆಸುವಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ಕಾರ್ಯದರ್ಶಿ ಸುಜಿತ್ ಡಿ.ರೈ, ಸಮುದಾಯ ಸೇವಾ ನಿರ್ದೇಶಕ ಸೋಮಶೇಖರ್ ರೈ, ನಿರ್ಗಮನ ಅಧ್ಯಕ್ಷ ಉಮಾನಾಥ್ ಪಿ.ಬಿ, ದತ್ತಾತ್ರೇಯ ರಾವ್, ಪ್ರಭಾಕರ ಮುಗೇರು ಸಹಿತ ಹಲವರು ಉಪಸ್ಥಿತರಿದ್ದರು.
25 ಮಂದಿ ಅಂಗಾಂಗ ದಾನಕ್ಕೆ ನೋಂದಣಿ
ರೋಟರಿ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ಸಮುದಾಯ ಸೇವಾ ನಿರ್ದೇಶಕ ಸೋಮಶೇಖರ್ ರೈ ಸಹಿತ 25 ಮಂದಿ ತಮ್ಮ ಮರಣದ ಬಳಿಕ ಅಂಗಾಂಗ ದಾನಕ್ಕೆ ನೋಂದಾಣಿಕೆ ಮಾಡಿರುತ್ತಾರೆ.