ಕರ್ನಾಟಕ ಇಸ್ಲಾಮಿಕ್‌ ಅಕಾಡೆಮಿ – ಡಿ.20 ರಿಂದ 23ರ ವರೆಗೆ ಕೆಐಸಿ 4ನೇ ಸನದುದಾನ ಮಹಾಸಮ್ಮೇಳನ

0

ಪುತ್ತೂರು: ಕಳೆದ 27 ವರ್ಷಗಳಿಂದ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕುಂಬ್ರದ ಕರ್ನಾಟಕ ಇಸ್ಲಾಮಿಕ್‌ ಅಕಾಡೆಮಿಯಲ್ಲಿ 4ನೇ ಸನದುದಾನ ಮಹಾ ಸಮ್ಮೇಳನವು ಡಿ.23ರಂದು ನಡೆಯಲಿದ್ದು, ಇದರ ಅಂಗವಾಗಿ ಡಿ.20ರಿಂದ 23ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಸಂಘಟನಾ ಕಾರ್ಯದರ್ಶಿ ಮತ್ತು ಸ್ವಾಗತ ಸಮಿತಿ ಸಂಚಾಲಕ ಅನೀಸ್‌ ಕೌಸರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೆಮಿನಾರ್‌ :
ಡಿ.20ರಂದು ಬೆಳಿಗ್ಗೆ ಸಂಸ್ಥೆಯ ಅಧ್ಯಕ್ಷ ಕೆ ಪಿ ಅಹ್ಮದ್‌ ಹಾಜಿ ಆಕರ್ಷಣ್‌ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು, ಬೆಳಿಗ್ಗೆ 10 ಗಂಟೆಗೆ ಪ್ರವಾದಿ ಸ.ಅ ರವರ ಮತ್ತು ಇಸ್ಲಾಮಿನ ಕುರಿತ ತಪ್ಪು ಕಲ್ಪನೆಗಳ ನಿವಾರಣೆ ಹಾಗೂ ಆಧುನಿಕ ಆರ್ಥಿಕ ಮತ್ತು ವೈದ್ಯಕೀಯ ವಿಧಾನಗಳ ಕರ್ಮಶಾಸ್ತ್ರ ವಿಧಿ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಸಂಸ್ಥೆಯ ನಿರ್ದೇಶಕರಾದ ಮಾಹಿನ್‌ ಮುಸ್ಲಿಯಾರ್‌ ತೊಟ್ಟಿ ಅಧ್ಯಕ್ಷತೆಯಲ್ಲಿ ಸಯ್ಯದ್‌ ಅಲೀ ತಂಞಳ್‌ ಕುಂಬೋಳ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ದಾರುಲ್‌ ಹುದಾ ಇಸ್ಲಾಮಿಕ್‌ ಯುನಿರ್ವಸಿಟಿ ಫ್ರೊ.ಕೆ ಸಿ ಮೊಹಮ್ಮದ್‌ ಬಾಖವಿ ಮತ್ತು ಜಾಫರ್‌ ಹುದವಿ ವಿಷಯ ಮಂಡಿಸಲಿದ್ದಾರೆ. ಅಪರಾಹ್ನ 2.30ಕ್ಕೆ ಮಾದರಿ ಮೊಹಲ್ಲ ನಿರ್ಮಾಣ ಮತ್ತು ದುಷ್ಚಟ ಮುಕ್ತಗೊಳಿಸುವ ಬಗ್ಗೆ ತರಬೇತಿ ನಡೆಯಲಿದ್ದು ತೃಕರಿಪುರ ಮುನೀರ್‌ ಹುದವಿ, ಅಬೂಬಕ್ಕರ್‌ ಸಿದ್ದೀಕ್‌ ಜಲಾಲಿ ವಿಷಯ ಮಂಡಿಸಲಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಕೆ ಎಂ ಬಾವಾ ಹಾಜಿ ಅಧ್ಯಕ್ಷತೆಯಲ್ಲಿ ಎಸ್‌ ಬಿ ಮೊಹಮ್ಮದ್‌ ದಾರಿಮಿ ಉದ್ಘಾಟನೆ ನಿರ್ವಹಿಸಲಿದ್ದಾರೆ.

ನವೀಕೃತ ಲೈಬ್ರರಿ, ಸಿವಿಲ್ ಸರ್ವೀಸ್ ತರಬೇತಿ ಕೊಠಡಿ ಉದ್ಘಾಟನೆ:
ಡಿ. 21ರಂದು ಸಂಜೆ 3:30ಕ್ಕೆ ನವೀಕೃತ ಲೈಬ್ರರಿ ಹಾಗೂ ಸಿವಿಲ್ ಸರ್ವೀಸ್ ತರಬೇತಿ ಕೊಠಡಿ ಉದ್ಘಾಟನೆ ಕಾರ್ಯಕ್ರಮ ಮೇನಾಲ ಯೂಸುಫ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸೆಯ್ಯದ್ ಅಲಿ ತಂಜಳ್ ಕುಂಬೋಲ್, ಸ್ವಾಬಿಖಲಿ ಶಿಹಾಬ್ ತಂಬಳ್ ಪಾಣಕ್ಕಾಡ್, ಯುಟಿ ಇಫ್ತಿಕಾರ್ ಫರೀದ್, ಶಾಹಿದ್ ತಿರುವಳ್ಳೂರ್, ಮುಸ್ತಫಾ ಭಾರತ್, ಜಿ.ಎ ಬಾವಾ ಸಹಿತ ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಜಲಾಲಿಯ್ಯತ್ ರಾತೀಬು, ಧಾರ್ಮಿಕ ಪ್ರವಚನ:
ಡಿ. 21ರಂದು ಸಂಜೆ ಗಂಟೆ 6:30ರಿಂದ ಇಬ್ರಾಹಿಂ ಬಾತಿಷಾ ತಂಙಳ್ ಅನೆಕ್ಕಲ್ ಇವರ ನೇತೃತ್ವದಲ್ಲಿ ಜಲಾಲಿಯ್ಯತ್ ರಾತೀಬು ಹಾಗೂ ಅಬೂಬಕ್ಕರ್ ಸಿದ್ದೀಖ್ ಅಝ್ಹ್‌ರಿಯವರ ಧಾರ್ಮಿಕ ಪ್ರವಚನ ನಡೆಯಲಿದೆ.

ಸ್ನೇಹ ಸಂಗಮ:
ಡಿ.22 ಸಂಜೆ ಸಂಜೆ 6:30ರಿಂದ ಸ್ನೇಹ ಸಂಗಮ ಕಾರ್ಯಕ್ರಮ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್ ಮಸೂದ್‌ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕರಾದ ಪ್ರದೀಪ್ ಈಶ್ವರ್, ಎನ್.ಎ ಹ್ಯಾರಿಸ್‌, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ವಿವಿಧ ಸಾಮಾಜಿಕ. ಧಾರ್ಮಿಕ, ರಾಜಕೀಯ ಪ್ರಮುಖರು ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 9:೦೦ ಕ್ಕೆ ಬಹು.ರಹ್ಮತುಲ್ಲಾ ಖಾಸಿಮಿ ಮುತ್ತೇಡಂ ಇವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ.

ಕುಟುಂಬ ಸಂಗಮ- ಸನದುದಾನ ಮಹಾಸಮ್ಮೇಳನ:
ಡಿ.23 ಮಧ್ಯಾಹ್ನ ಗಂಟೆ 2:೦೦ರಿಂದ ಕೆ.ಪಿ ಮುಹಮ್ಮದ್ ಸ್ವಾದಿಖ್ ಅಧ್ಯಕ್ಷತೆ ಕುಟುಂಬ ಸಂಗಮ ನಡೆಯಲಿದೆ. ಟ್ರಸ್ಟಿ ಸದಸ್ಯರುಗಳಾದ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಅತಿಥಿಗಳನ್ನು ಸ್ವಾಗತಿಸಲಿದ್ದು ಆದೂರು ಆದಂ ದಾರಿಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಜು ಶಮೀರ್ ಅಝ್ಹರಿ, ರಫೀಕ್ ಮಾಸ್ಟರ್ ಆತೂರು ವಿಷಯ ಮಂಡನೆ ಮಾಡಲಿದ್ದಾರೆ.

ಸಂಜೆ ಗಂಟೆ 5:30ರಿಂದ ಸನದುದಾನ ಮಹಾಸಮ್ಮೇಳನ ನಡೆಯಲಿದ್ದು, 98 ವಿದ್ವಾಂಸರಿಗೆ ಸಮಸ್ತ ಕೇರಳ ಜಂಈಯ್ಯತುಲ್ ಉಲಮಾ ಇದರ ಅಧ್ಯಕ್ಷ ಸೆಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಞಳ್ ಸನದು ಪ್ರದಾನ ಮಾಡಲಿದ್ದಾರೆ. ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್, ರಾಜ್ಯ ವಕ್ಫ್ ಹಾಗೂ ವಸತಿ ಸಚಿವ ಬಿ.ಝೆಡ್ ಝಮೀರ್ ಅಹ್ಮದ್ ಖಾನ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷ ಸೆಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ದುವಾ ನಿರ್ವಹಿಸಲಿದ್ದು, ಸಂಸ್ಥೆಯ ನಿರ್ದೇಶಕ ‌ಕುಂಬೋಳ್ ಸೆಯ್ಯದ್ ಅಲಿ ತಂಞಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಅಬ್ದುಲ್ ಸಲಾಂ ಬಾಖವಿ ಮುಖ್ಯ ಪ್ರಭಾಷಣ ನೀಡಲಿದ್ದು, ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಷಾ ಮಾಂತೂರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಸಮಸ್ತದ ಕೇಂದ್ರ ಮುಶಾವರ ಸದಸ್ಯರುಗಳಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ, ಕೊಡಗು ಖಾಝಿ ಅಬ್ದುಲ್ಲಾ ಫೈಝಿ, ಉಸ್ಮಾನುಲ್ ಫೈಝಿ ತೋಡಾರು, ಸೆಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಇರ್ಷಾದ್ ದಾರಿಮಿ ಅಲ್ ಅಝ್ಹರಿ, ಕೆ.ಆರ್ ಹುಸೈನ್ ದಾರಿಮಿ, ಇನಾಯತ್ ಅಲಿ ಮುಲ್ಕಿ, ಡಾ.ಅಬ್ದುಲ್ ಬಶೀರ್, ಅಬ್ದುಲ್ ಲತೀಫ್ ಗುರುಪುರ, ಬಸೀರ್ ಕಿನ್ನಿಂಗಾರ್, ಅಬ್ದುಲ್ ಲತೀಫ್ ಉಪ್ಪಳ, ಮುಶ್ತಾಕ್ ಕದ್ರಿ, ನಾಸಿರ್ ಹುಸೈನ್ ಸೇರಿದಂತೆ ಹಲವು ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಸಂಚಾಲಕ ಅನೀಸ್‌ ಕೌಸರಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕುಂಬ್ರ ಕೆಐಸಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಬಾವಾ ಹಾಜಿ ಕೂರ್ನಡ್ಕ, ಕೆಐಸಿ ಪ್ರಾಧ್ಯಾಪಕ ಅಝ್ಮತುಲ್ಲಾ ಹುದವಿ, ಕೆಐಸಿ ವ್ಯವಸ್ಥಾಪಕ ಅಬ್ದುಲ್‌ ಸತ್ತಾರ್‌ ಕೌಸರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here