ಕಡಬ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕಡಬ ಘಟಕದ ಪದಗ್ರಹಣ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ ಕಾರ್ಯಕ್ರಮವು ಡಿ.10ರಂದು ಕಡಬ ಶ್ರೀ ದುಗಾಂಬಿಕಾ ಅಮ್ಮನವರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸತೀಶ್ ಕುಮಾರ್ ಕೆಡೆಂಜಿ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಯುವ ವಾಹಿನಿ ಕಡಬ ಘಟಕದ ಅಧ್ಯಕ್ಷ ಕೃಷ್ಣಪ್ಪ ಅಮೈ ವಹಿಸಿದರು. ನೂತನ ತಂಡಕ್ಕೆ ಪ್ರತಿಜ್ಞಾ ಬೋಧನೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ರಾಜೇಶ್ ಬಿ. ನೆರೆವೇರಿಸಿದರು., ವೇದಿಕೆಯಲ್ಲಿ ಲಿಂಗಪ್ಪ ಪೂಜಾರಿ ಕೆ. ಕೇಪುಳು, ಚಂದ್ರಶೇಖರ್ ಸನಿಲ್ ಉಪ್ಪಿನಂಗಡಿ, ಸುಂದರ ಪೂಜಾರಿ ಕರ್ಕೇರ, ಘಟಕದ ಕಾರ್ಯದರ್ಶಿ ಪ್ರಶಾಂತ್ ಎನ್.ಎಸ್.ಕಡಬ, ಉಪಸ್ಥಿತರಿದ್ದರು.
ನೂತನ ಸಮಿತಿ ರಚನೆ:
ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕಡಬ ಘಟಕದ 2023-24ನೇ ಸಾಲಿನ ಅಧ್ಯಕ್ಷರಾಗಿ ಸುಂದರ ಪೂಜಾರಿ ಅಂಗಣ, ಉಪಾಧ್ಯಕ್ಷರಾಗಿ ಪ್ರಶಾಂತ್ ಎನ್.ಎಸ್. ಕಡಬ, ಕಾರ್ಯದರ್ಶಿ ಜಯಪ್ರಕಾಶ್ ದೋಳ, ಜತೆ ಕಾರ್ಯದರ್ಶಿಯಾಗಿ ನಯನ ಅಮೈ, ರವಿ ಮಾಯಿಲ್ಗ, ಮತ್ತು 11 ವಿವಿಧ ನಿರ್ದೇಶಕರಾಗಿ, 3 ಸಂಘಟನಾ ಕಾರ್ಯದರ್ಶಿಯಾಗಿ, ಪ್ರತಿಜ್ಞಾ ಬೋಧನೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರು ಮಾತನಾಡಿ ಕಡಬ ಘಟಕವು ವಿಭಿನ್ನ ರೀತಿಯ ಕಾರ್ಯಕ್ರಮ ನೀಡುತ್ತಾ ಸುಮಾರು 5 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಹಾಗೂ ಮುಂದಿನ ತಂಡಕ್ಕೂ ಶುಭಾಶಯ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರವೀಣ್ ಒಂಕಲ್, ಸಂಘಟನಾ ಕಾರ್ಯದರ್ಶಿ ಕೇಂದ್ರ ಸಮಿತಿ ಮಂಗಳೂರು, ಶಿವಪ್ರಸಾದ್ ನೂಚಿಲ ಕ್ರೀಡಾ ನಿರ್ದೇಶಕರು ಕೇಂದ್ರ ಸಮಿತಿ ಮಂಗಳೂರು, ಸತೀಶ್ ಕೆ, ವಸಂತ ಪೂಜಾರಿ ಬದಿಬಾಗಿಲು, ಅಶೋಕ್ ಕುಮಾರ್ ಉಪ್ಪಿನಂಗಡಿ, ದಯಾನಂದ ಕರ್ಕೇರ, ಹಾಗೂ ವಿವಿಧ ಘಟಕದ ಅಧ್ಯಕ್ಷರು, ಕಾರ್ಯದರ್ಶಿ ಉಪಸ್ಥಿತರಿದ್ದರು.