ಕೆಐಸಿ ನಾಲ್ಕನೇ ಸನದು ದಾನ ಮಹಾ ಸಮ್ಮೇಳನಕ್ಕೆ ಚಾಲನೆ

0

ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಂಸ್ಥೆಗಳಿಂದ ದೇಶಪ್ರೇಮಿಗಳ ಸೃಷ್ಟಿ-ಯು.ಟಿ.ಖಾದರ್

ಪುತ್ತೂರು: ದೇಶ ಪ್ರೇಮವೆಂದರೆ ಬೀದಿಯಲ್ಲಿ ನಿಂತು ಯಾರನ್ನಾದರೂ ಬಯ್ಯುವುದಲ್ಲ, ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಬಾಳಿ, ನಾಡು ಕಟ್ಟುವ ಕೆಲಸ ಮಾಡುವುದು ನಿಜವಾದ ದೇಶಪ್ರೇಮ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.


ಡಿ.20ರಂದು ಕೆಐಸಿ ನಾಲ್ಕನೇ ಸನದು ದಾನ ಮಹಾ ಸಮ್ಮೇಳನದ ಫಿಕ್ಹ್ ಸೆಮಿನಾರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಆಗಮಿಸಿ ಸಾಹಿತ್ಯ ರಚನೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಜಾತ್ಯಾತೀತ ತತ್ವವನ್ನು ಅಳವಡಿಸಿಕೊಂಡು ಪರಸ್ಪರ ಸಹೋದರತೆಯಿಂದ ಬಾಳಿದರೆ ಇಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ, ಆದ್ದರಿಂದ ಮಕ್ಕಳಿಗೆ ಅಂತಹ ಶ್ರೇಷ್ಠ ಮೌಲ್ಯಗಳನ್ನು ಹೇಳಿಕೊಟ್ಟು ಅವರ ವ್ಯಕ್ತಿತ್ವ ರೂಪಿಸುವ ಕೆಲಸ ಆಗಬೇಕು ಎಂದು ಹೇಳಿದ ಯು.ಟಿ.ಖಾದರ್, ಇಂದು ಕೆ.ಐ.ಸಿ.ಯಂತಹ ವಿದ್ಯಾಸಂಸ್ಥೆಗಳು ಮಕ್ಕಳಿಗೆ ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣವನ್ನು ನೀಡಿ ಅವರನ್ನು ದೇಶಪ್ರೇಮಿಗಳಾಗಿ ರೂಪಿಸುವ ಕೆಲಸವನ್ನು ಮಾಡುತ್ತಿವೆ. ಕೆ.ಪಿ.ಅಹ್ಮದ್ ಹಾಜಿ ಆಕರ್ಷಣ್‌ರಂಥ ಸಮರ್ಥ ನಾಯಕತ್ವದಿಂದ ಕೆಐಸಿಯಂತಹ ಹಲವು ಸುಜ್ಞಾನ ನೀಡುವ ವಿದ್ಯಾಸಂಸ್ಥೆಗಳು ಇಲ್ಲಿ ಬೆಳೆದು ನಿಂತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಮ್ಮಂತೆ ವಿದ್ಯಾರ್ಥಿಯಾಗಿ ಅಂದು ಭಾಷಣಗಳನ್ನು ಕೇಳುತ್ತಿದ್ದ ನಾನು ಇಂದು ಸರ್ವರ ಸಹಕಾರದಿಂದ ವಿಧಾನ ಸಭೆಯ ಅಧ್ಯಕ್ಷನಾಗಿ ಮಾತನಾಡುವ ಅವಕಾಶ ದೊರೆತಿದೆ. ನೀವು ಕೂಡಾ ಶ್ರಮ ವಹಿಸಿ ಕಲಿತು ಬದುಕಲ್ಲಿ ಸಾಧಿಸುವ ಕನಸನ್ನು ಕಾಣಬೇಕೆಂದು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಪೀಕರ್ ಯು.ಟಿ.ಖಾದರ್ ಕಿವಿಮಾತು ಹೇಳಿದರು.


ಕರ್ಮಶಾಸ್ತ್ರದ ಕಲಿಕೆಗೆ ಉಲಮಾಗಳು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು-ಶೈಖುನಾ ತೊಟ್ಟಿ ಉಸ್ತಾದ್:
ಪಿಕ್ಹ್ ಸೆಮಿನಾರ್ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶೈಖುನಾ ಮಾಹಿನ್ ಮುಸ್ಲಿಯಾರ್ ತೊಟ್ಟಿರವರು ಮಾತನಾಡಿ, ಪ್ರತಿಯೊಬ್ಬ ಮುಸ್ಲಿಂ ಅಲ್ಲಾಹನಿಗೆ ನಡೆಸುವ ಆರಾಧನೆಯ ಬಗೆಗಿನ ಸಮಗ್ರ ವಿವರಣೆ ಪಡೆಯಬೇಕಿದ್ದರೆ ಧರ್ಮದ ಕರ್ಮಶಾಸ್ತ್ರದ ಬಗ್ಗೆ ತಿಳಿದಿರುವುದು ಅಗತ್ಯ. ಆದ್ದರಿಂದ ಸಮುದಾಯಕ್ಕೆ ನೇತೃತ್ವ ನೀಡುವ ಉಲಮಾಗಳು ಕರ್ಮಶಾಸದ ಕಲಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಕೇವಲ ಕುರ್ ಆನ್ ಗ್ರಂಥವನ್ನು ಕಂಠಪಾಠ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೆಚ್ಚಿನ ಧಾರ್ಮಿಕ ವಿದ್ಯೆಯನ್ನು ಕಲಿಯಬೇಕು, ವಿದ್ಯೆ ಇಸ್ಲಾಮಿನ ಜೀವನಾಡಿಯಾಗಿದೆ ಎಂದು ಶೈಖುನಾ ತೊಟ್ಟಿ ಉಸ್ತಾದ್ ಹೇಳಿದರು.


ಇಸ್ಲಾಮ್ ಸತ್ಯ, ಶಾಂತಿ, ಪರಿಶುದ್ಧತೆಯ ಬೆಳಕು-ಕೆ.ಸಿ.ಮೊಹಮ್ಮದ್ ಬಾಖವಿ:
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕೇರಳದ ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಪ್ರಾಧ್ಯಾಪಕ ಕೆ.ಸಿ.ಮುಹಮ್ಮದ್ ಬಾಖವಿ ಮಲಪ್ಪುರಂ ಅವರು, ‘ಇಸ್ಲಾಂ ಮತ್ತು ಪ್ರವಾದಿಯವರ ಕುರಿತು ತಪ್ಪು ಕಲ್ಪನೆಗಳ ನಿವಾರಣೆ’ ಎಂಬ ವಿಷಯ ಮಂಡಿಸಿ ಮಾತನಾಡಿ, ಪವಿತ್ರ ಖುರ್ ಅನ್, ಧರ್ಮದ ಆಚಾರ, ವಿಚಾರ ಹಾಗೂ ಪ್ರವಾದಿಯವರ ನಡೆ, ನುಡಿಗಳ ಬಗ್ಗೆ ಸರಿಯಾಗಿ ತಿಳಿಯದ ಕೆಲವರು ತಪ್ಪು ಕಲ್ಪನೆಗೊಳಗಾಗಿ ಧರ್ಮವನ್ನು ಅಪಾರ್ಥ ಮಾಡಿಕೊಂಡು ಅಪಪ್ರಚಾರ ಮಾಡುತ್ತಾರೆ. ಆದರೆ ಅದರಿಂದ ಧರ್ಮಕ್ಕೆ ಯಾವುದೇ ಧಕ್ಕೆಯಿಲ್ಲ, ಇಸ್ಲಾಮಿನ ಸತ್ಯ, ಶಾಂತಿ, ಪರಿಶುದ್ಧತೆಯ ಬೆಳಕು ಎಂದೂ ಪ್ರಜ್ವಲಿಸುತ್ತದೆ ಎಂದರು.


ಇಸ್ಲಾಮ್‌ನ ತತ್ವ ಸಂಹಿತೆ ಸಮಗ್ರವೂ ಮನುಷ್ಯ ಬದುಕಿಗೆ ಪೂರಕ-ಡಾ.ಜಾ-ರ್ ಹುದವಿ:
‘ಆಧುನಿಕ ಆರ್ಥಿಕತೆ ಮತ್ತು ವೈಧ್ಯಕೀಯ ವಿಧಾನಗಳ ಕರ್ಮಶಾಸ ವಿಧಿ’ ಎಂಬ ವಿಷಯ ಮಂಡಿಸಿ ಮಾತನಾಡಿದ ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಪ್ರಾಧ್ಯಾಪಕ ಡಾ.ಜಾ-ರ್ ಹುದವಿ ಚೆಮ್ಮಾಡ್ ಅವರು, ಇಸ್ಲಾಮಿನ ತತ್ವ ಸಂಹಿತೆ ಸಮಗ್ರವೂ ಮನುಷ್ಯ ಬದುಕಿಗೆ ಪೂರಕವಾದದ್ದಾಗಿದೆ. ಧರ್ಮವು ಕೇವಲ ಆರಾಧನೆಗೆ ಮಾತ್ರ ಸೀಮಿತವಲ್ಲ, ಮನುಷ್ಯ ಬದುಕಿಗೆ ಅವಶ್ಯಕವಾದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು, ಒಳ್ಳೆಯ ಹಾದಿಯಲ್ಲಿ ಹಣ ಸಂಪಾದನೆಯ ಮಾರ್ಗ ಹುಡುಕುವುದು ಮೊದಲಾದವುಗಳಿಗೆ ಧರ್ಮವು ಪ್ರೋತ್ಸಾಹವನ್ನು ನೀಡುತ್ತದೆ, ಆದರೆ ಅವುಗಳಿಗೆ ಧರ್ಮದಲ್ಲಿ ಸ್ಪಷ್ಟವಾದ ಮಾರ್ಗದರ್ಶನವಿದೆ, ಅದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಕೆಡುಕು, ವಂಚನೆ, ಬಡ್ಡಿ ವ್ಯವಹಾರಗಳಿಗೆ ಇಸ್ಲಾಮಿನಲ್ಲಿ ಕಿಂಚಿತ್ತೂ ಆಸ್ಪದವಿಲ್ಲ ಎಂದು ಹೇಳಿದರಲ್ಲದೆ, ಜೂಜಾಟದಿಂದ ಬರುವ ಹಣವನ್ನು ಒಳಿತಿಗೆ ವಿನಿಯೋಗಿಸುವುದಾದರೂ ಇಸ್ಲಾಮಿನಲ್ಲಿ ಅಂಥದ್ದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಬ್ರ ಕೆಐಸಿ ಮುದರ್ರಿಸ್ ಅಬೂಬಕ್ಕರ್ ಮದನಿರವರು ನೆರವೇರಿಸಿ ಮಾತನಾಡಿ, ಫಿಕ್ಹ್ ಶಾಸವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು. ದ.ಕ. ಜಿಲ್ಲಾ ಖಾಝಿ ತ್ವಾಖಂ ಅಹ್ಮದ್ ಮುಸ್ಲಿಯಾರ್‌ರವರು ದುಃವಾ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಸೈಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಬಳ್ ದಾರುಸ್ಸಲಾಂ ಬೆಳ್ತಂಗಡಿ, ಸೈಯ್ಯದ್ ಅಸ್ಟರ್ ಅಲಿ ತಂಳ್ ಕೋಲ್ಪೆ, ಸೈಯ್ಯದ್ ಅನಸ್ ತಂಳ್ ಅಲ್ ಹಾದಿ ಕರುವೇಲು, ಸೈಯ್ಯದ್ ಜುನೈದ್ ಜಿಫ್ರಿ ತಂಳ್ ಆತೂರು, ಸೈಯ್ಯದ್ ಅಕ್ರಂ ಅಲಿ ತಂಳ್ ಕರಾವಳಿ, ಕೆ.ಆರ್. ಹುಸೈನ್ ದಾರಿ ರೆಂಜಲಾಡಿ, ಹೈದರ್ ದಾರಿಮಿ ಕರಾಯ
ಅಬ್ದುಲ್ ಮಜೀದ್ ದಾರಿಮಿ ಪೈವಳಿಕೆ, ಅಹ್ಮದ್ ರಫೀಕ್ ಹುದವಿ ಕೋಲಾರ, ಅಬ್ಬಾಸ್ -ಝಿ ಪುತ್ತಿಗೆ, ಸಂಶುದ್ದೀನ್ ದಾರಿಮಿ ಪಮ್ಮಲೆ, ಉಮ್ಮರ್ ದಾರಿಮಿ ಸಾಲ್ಮರ ಉಪಸ್ಥಿತರಿದ್ದರು.

ಅತಿಥಿಗಳಾಗಿ ಅಶ್ರಫ್ ಫೈಝಿ ಮಿತ್ತಬೈಲ್, ಇಸ್ಮಾಯಿಲ್ ಫೈಝಿ ಕರಾಯ, ಖಾಸಿಂ ದಾರಿಮಿ ಕಿನ್ಯ, ಅಬ್ದುಲ್ ಸಲಾಂ -ಝಿ ಎಡಪ್ಪಾಳ್, ಅನ್ಸಾರ್ ಫೈಝಿ ಬುರ್ಹಾನಿ ಅಡ್ಯಾರ್, ಶರೀಫ್ ಫೈಝಿ ಕಡಬ, ಅಶ್ರಫ್ ಬಾಖವಿ ಚಾಪಳ್ಳ, ಯಾಕೂಬ್ ದಾರಿಮಿ ಕರಾಯ, ಹಮೀದ್ ದಾರಿಮಿ ಸಂಪ್ಯ, ’ಮೊಹಿಯುದ್ದೀನ್ ಫೈಝಿ ಕುಂತೂರು, ಮೂಸಾ ದಾರಿಮಿ ಕಕ್ಕಿಂಜೆ, ಅಝೀಝ್ ದಾರಿಮಿ ಕೊಡಾಜೆ, ಉನೈಸ್ ಫೈಝಿ ಕೂರ್ನಡ್ಕ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಇಬ್ರಾಹಿಂ ದಾರಿಮಿ ಕಡಬ, ರಿಯಾಝ್ ರಹ್ಮಾನಿ ಕಿನ್ಯ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಅಬ್ಬಾಸ್ ಮದನಿ ಪಣೆಮಜಲು, ನಝೀರ್ ಅಝರಿ ಪಾಲ್ಯತ್ತಡ್ಕ, ಶೈಖ್ ಮುಹಮ್ಮದ್ ಇ-ನಿ ಕಬಕ, ಹುಸೈನ್ ರಹ್ಮಾನಿ ಕಾಶಿಪಟ್ನ, ಜಮಾಲುದ್ದೀನ್ ದಾರಿಮಿ ಕೈಕಂಬ, ಉಮ್ಮರ್ ದಾರಿಮಿ ಮುಫತ್ತಿಸ್, ತಮ್ಮಿಕ್ ದಾರಿಮಿ ಕೊಡಗು, ಸ್ವದಖತುಲ್ಲಾಹ್ -ಝಿ ಅಡ್ಡಿರು, ಉಸ್ಮಾನ್ ರಾಝಿ ಬಾಖವಿ, ಹನೀಫ್ ಮುಸ್ಲಿಯಾರ್ ಮುಫತ್ತಿಸ್, ಖಾಸಿಂ ಮುಸ್ಲಿಯಾರ್ ಮುಫತ್ತಿಸ್, ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ, ಅಬೂಸ್ವಾಲಿಹ್ ಮುಸ್ಲಿಯಾರ್ ಆಲಡ್ಕ, ಶಾಫಿ ಇಫನಿ ಕಲ್ಲೇಗ, ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ, ಅಬ್ದುಲ್ ಕರೀಂ ದಾರಿಮಿ ಕು೦ಬ್ರ, ಅಬ್ದುಲ್ ಹಮೀದ್ ಲತೀಫಿ ಶೇಖಮಲೆ, ಇಸ್ಮಾಯಿಲ್ ಸಅದಿ ಬದ್ರಿಯಾ ನಗರ, ಇಸ್ಹಾಕ್ ಫೈಝಿ ಕುಕ್ಕಿಲ, ಅಬ್ದುಲ್ ಹಮೀದ್ ಕುನಿಯ, ಇಬ್ರಾಹಿಂ ಕುನಿಯ, ಅಬ್ದುಲ್ ಖಾದರ್ ಬೈತ್ತಡ್ಕ ನೂರ್ ಮುಹಮ್ಮದ್ ನೀರ್ಕಜೆ, ಅಬ್ದುಲ್ ಲತೀಫ್ ಮರಕ್ಕಿಣಿ, ನಿಝಾಂ ಅರಾಂಡ, ಪ್ರ.ಕಾರ್ಯದರ್ಶಿ ಕೆಐಸಿ ಜಿಸಿಸಿ, ಖಲಂದರ್, ಎಂಡಿ ಈಸ್ಟರ್ನ್ ಗ್ರೂಪ್ ಬೆಂಗಳೂರು, ಇಸ್ಮಾಯಿಲ್ ಕೂರ್ನಡ್ಕ ಕೆಐಸಿ ಜುಬೈಲ್, ಇಟ್ಬಾಲ್ ಕೋಲ್ಪೆ ಕೆಐಸಿ ಜುಬೈಲ್, ಆಸಿಫ್ ಪರ್ಲಡ್ಕ ಕೆಐಸಿ ಜುಬೈಲ್, ಉಮರಬ್ಬ ಹಾಜಿ ಏರ್‌ಲೈನ್ಸ್, ಅಬ್ದುಲ್ ಖಾದರ್ ಹಾಜಿ ಬಾಯ೦ಬಾಡಿ, ಅಬೂಬಕ್ಕರ್ ಹಾಜಿ ಮಂಗಳ, ತಾಹಿರ್ ಸಾಲ್ಮರ ಕೆಐಸಿ ಜುಬೈಲ್, ಅಬ್ದುಲ್ ಸತ್ತಾರ್ ಕುಂತೂರು ಕೆಐಸಿ ಜುಬೈಲ್, ಅಶ್ರಫ್ ಪರ್ಲಡ್ಕ ಒಮಾನ್, ಬಶೀರ್ ಚೆಡವು, ಅಬ್ದುಲ್ ಖಾದರ್ ಚೆಡವು ಉಪಸ್ಥಿತರಿದ್ದರು. ‌

ವೇದಿಕೆಯಲ್ಲಿ ಕೆಐಸಿ ಅಧ್ಯಕ್ಷ ಕೆ.ಪಿ.ಅಹಮ್ಮದ್ ಹಾಜಿ ಆಕರ್ಷಣ್, ಸ್ವಾಗತ ಸಮಿತಿ ಚೆಯರ್‌ಮ್ಯಾನ್ ಅಶ್ರಫ್ ಶಾ ಮಾಂತೂರು, ಸಂಘಟನಾ ಕಾರ್ಯದರ್ಶಿ ಉಸ್ತಾದ್ ಹನೀಸ್ ಕೌಸರಿ,‌ ವ್ಯವಸ್ಥಾಪಕ ಸತ್ತಾರ್ ಕೌಸರಿ, ಗಲ್ ಕೆಐಸಿ ಕಮಿಟಿ ಕೋ ಆರ್ಡಿನೇಟ ನೂರ್ ಮೊಹಮ್ಮದ್ ನೀರ್ಕಜೆ, ನಿಝಾಮ್ ಆರಂಡ, ಕೆಐಸಿಯ ಕಾರ್ಯದರ್ಶಿ ಕೆ.ಎಮ್ ಭಾವ ಹಾಜಿ ಕೂರ್ನಡ್ಕ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅಬ್ದುಲ್ ರಹಿಮಾನ್ ಅಝಾದ್ ದರ್ಬೆ, ಯು.ಮೊಹಮ್ಮದ್ ಹಾಜಿ ಪಡೀಲ್ ಮೊದಲಾದವರು ಉಪಸ್ಥಿತರಿದ್ದರು.

ಧ್ವಜಾರೋಹಣ:
ಬೆಳಿಗ್ಗೆ ಕುಂಬ್ರ ಕೆಐಸಿ ಸಂಸ್ಥೆಯ ಅಧ್ಯಕ್ಷ ಕೆ.ಪಿ.ಅಹಮ್ಮದ್ ಹಾಜಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ನಾಲ್ಕು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಪ್ಪಳಿಗೆ ಮಸ್ಜಿದುನ್ನೂರು ಖತೀಬ್ ಸಿರಾಜುದ್ದೀನ್ ಫೈಝಿ ಸ್ವಾಗತಿಸಿ, ಮೌಂಟನ್ ವ್ಯೂ ಅಸ್ವಾಲಿಹಾ ಕಾಲೇಜಿನ ಉಸ್ತಾದ್ ಕೆಎಮ್‌ಎ ಕೊಡುಂಗೈ ಕಾರ್ಯಕ್ರಮ ನಿರ್ವಹಿಸಿದರು.

ಕಾವ್ಯ ರಚನಾ ಬಿಡುಗಡೆ:

ವಿವಿಧ ಕಾವ್ಯ ರಚನೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಬಿಡುಗಡೆಗೊಳಿಸಿ ಕೆಐಸಿ ಅಧ್ಯಕ್ಷ ಕೆ.ಪಿ.ಅಹಮ್ಮದ್ ಹಾಜಿ ಅವರಿಗೆ ಹಾಗು ಸ್ವಾಗತ ಸಮಿತಿ ಚೇರ್‌ಮ್ಯಾನ್ ಅಶ್ರಫ್ ಶಾ ಮಾಂತುರು ಅವರಿಗೆ ಕವನ ಪುಸ್ತಕ ನೀಡಿದರು.

ಮಾದರಿಯುತ ಮೊಹಲ್ಲಾಗಳಿಗಾಗಿ ಮೊಹಲ್ಲಾ ಸಂಗಮ…
ಕೆ.ಐ.ಸಿ ನಾಲ್ಕನೇ ಸನದುದಾನ ಮಹಾ ಸಮ್ಮೇಳನದ ಅಂಗವಾಗಿ ಸಂಜೆ ಮೊಹಲ್ಲಾ ಸಂಗಮ ನಡೆಯಿತು.ಎಸ್.ಬಿ ಮಹಮ್ಮದ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಸೀದಿ ವ್ಯಾಪ್ತಿಯ ಮದ್ರಸಗಳನ್ನು ಮುಚ್ಚಿಡದೇ ಕನಿಷ್ಟ ಎಲ್‌ಕೆಜಿ, ಯುಕೆಜಿ ಮಕ್ಕಳಿಗಾಗಿ ಶಾಲೆಯಾಗಿ ಅದನ್ನು ಸದ್ಬಳಕೆ ಮಾಡುವಂತೆ ಸಲಹೆ ನೀಡಿದರು.‌ ಮುನೀರ್ ಹುದವಿ ವಿಚಾರ ಮಂಡಿಸಿದರು. ಸಯ್ಯದ್ ಶಮೀನ್ ತಂಳ್ ಕುಂಬೋಲ್ ದುಆಃ ಆಶಿರ್ವಚನ ನೀಡಿದರು. ಮೊಹಲ್ಲಾ ಪದಾಧಿಕಾರಿಗಳು ಮೊಹಲ್ಲಾದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು. ಪ್ರತಿ ಮೊಹಲ್ಲಾದಿಂದಲೂ ಸರ್ಕಾರಿ ನೌಕರರನ್ನು ಸೃಷ್ಟಿಸುವಲ್ಲಿ ಮೊಹಲ್ಲಾ ನಾಯಕರು ಎಚ್ಚೆತ್ತುಕೊಳ್ಳಬೇಕೆಂದು ಮುನೀರ್ ಹುದವಿ ತೃಕರೀಪುರ ಸಂದೇಶ ನೀಡಿದರು. ಫಾರೂಕ್ ಸಂಟ್ಯಾರ್ ಸ್ವಾಗತಿಸಿದರು. ವೇದಿಕೆಯಲ್ಲಿ ಕೆ.ಎಂ. ಬಾವಾ ಹಾಜಿ ಕೂರ್ನಡ್ಕ ಸಹಿತ ಹಲವಾರು ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here