*ಗ್ರಾಮ ಸಾಹಿತ್ಯ ಸಂಭ್ರಮ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ – ಮಿತ್ರಂಪಾಡಿ ಜಯರಾಮ ರೈ.
*ನೀಡಿದ ಪರಿಷತ್ ಜವಾಬ್ದಾರಿಯನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ- ಸಂಜೀವ ಮಠoದೂರು
ಪುತ್ತೂರು:ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಲ್ಪಡುವ ಗ್ರಾಮ ಸಾಹಿತ್ಯ ಸಂಭ್ರಮವು ಅಂತರ್ಜಾಲಗಳ ಮೂಲಕ ವಿದೇಶಗಳಲ್ಲೂ ವ್ಯಾಪಕ ಪ್ರಚಾರವನ್ನು ಪಡೆಯುತ್ತಿದೆ ಹಾಗೂ ಹೊರನಾಡ ಕನ್ನಡಿಗರಿಂದ ಮುಕ್ತ ಕಂಠದ ಪ್ರಶಂಸನೆಗೆ ಪಾತ್ರವಾಗುತ್ತಿದೆಯೆಂದು ಗ್ರಾಮ ಸಾಹಿತ್ಯ ಸಂಭ್ರಮದ ಮಹಾ ಪೋಷಕ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಹೇಳಿದರು.
ಅವರ ಹಿರೇಬಂಡಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕ ಸಾ ಪ ಪುತ್ತೂರು ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಹಿರೇಬಂಡಾಡಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ “ಸಾಹಿತ್ಯದ ನಡೆಗೆ ಗ್ರಾಮದ ಕಡೆಗೆ” ಎಂಬ ಘೋಷ ವಾಕ್ಯದಲ್ಲಿ ನಡೆಯುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮದ 11ನೇ ಸರಣಿ ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಪಂಚಾಯತ್ ಅಧ್ಯಕ್ಷ ಸದಾನಂದ ಶೆಟ್ಟಿ “ಇಂದು ಸಾಹಿತ್ಯದ ಮೂಲಕ ಮತ್ತೊಮ್ಮೆ ಮಕ್ಕಳನ್ನ ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸಲು ಹೊರಟ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ಅಭಿನಂದನೀಯವೆಂದರು.ಮಾಜಿ ಶಾಸಕ ಸಂಜೀವ ಮಠಂದೂರು ಸಮ್ಮೇಳನಾಧ್ಯಕ್ಷರಿಗೆ ಕನ್ನಡ ಪೇಟ ತೊಡಿಸಿ ಮೆರವಣಿಗೆಗೆ ಚಾಲನೆ ನೀಡಿ, ಯುವ ಜನತೆಗೆ ಸಾಹಿತ್ಯ ಪರಿಷತ್ ಜವಾಬ್ದಾರಿ ನೀಡಿರುವ ಕಾರಣ ಅದಕ್ಕೊಂದು ಹೊಸ ಆಯಾಮವನ್ನೇ ನೀಡಿರುತ್ತಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಗ್ರಾಮೀಣ ಮಟ್ಟದಲ್ಲಿ ಮಕ್ಕಳನ್ನ ಸಾಹಿತ್ಯ ಮತ್ತು ಪುಸ್ತಕದ ಓದಿನ ಕಡೆಗೆ ಕೊಂಡೊಯ್ಯುವ ಹಾಗೂ ರಾಜ್ಯಾಧ್ಯಕ್ಷ ಡಾ ಮಹೇಶ್ ಜೋಶಿ ಅವರ ಆಶಯದಂತೆ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಪ್ರಯತ್ನ ಇದಾಗಿದೆ ಎಂದರು.
ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಗಣರಾಜ ಕುಂಬ್ಳೆ, ನಿವೃತ್ತ ಶಿಕ್ಷಕ ಉಮೇಶ್ ಗೌಡ ಬಂಡಾಡಿ, ಪಾಡ್ದನ ಕಲಾವಿದೆ ಕಲ್ಯಾಣಿ, ಕ್ರೀಡಾ ಕ್ಷೇತ್ರದ ವಿಶೇಷ ಸಾಧಕಿ ಮಾನ್ಯ, ನಾಟಿ ವೈದ್ಯ ಕೃಷ್ಣಪ್ಪ ಕಜೆ, ಕಟೀಲು ಮೇಳದ ಯಕ್ಷಗಾನ ಕಲಾವಿದ ಶೇಖರ್ ಕೊರಂಬಾಡಿಯವರನ್ನು ಸನ್ಮಾನಿಸಲಾಯಿತು. ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪ್ರಿಯಾಂಕ ಸರ್ವಾಧ್ಯಕ್ಷರಾಗಿ 9ನೇ ತರಗತಿಯ ವಿದ್ಯಾರ್ಥಿನಿ ಸಾಜಿದ ಸಮಾರೋಪ ಭಾಷಣಗಾರ್ತಿಯಾಗಿ ಜನರ ಗಮನ ಸೆಳೆದರು.
ಸಭಾ ಕಾರ್ಯಕ್ರಮದಲ್ಲಿ ಸ. ಪ್ರೌಢಶಾಲೆ ಹಿರೇಬಂಡಾಡಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.ಸ. ಪ್ರೌಢಶಾಲೆ ಹಿರೇಬಂಡಾಡಿ ಮುಖ್ಯಗುರು ಹರಿಕಿರಣ್. ಕೆ ಸ್ವಾಗತಿಸಿ,ಗ್ರಾಮ ಪಂಚಾಯತ್ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು ,ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸ್ಥಾಪಕಾಧ್ಯಕ್ಷ ಚಂದ್ರಮೌಳಿ ಕಡಂದೇಲು ವಂದಿಸಿದರು. ಸ. ಪ್ರೌಢಶಾಲೆ ಹಿರೇಬಂಡಾಡಿ ಶಿಕ್ಷಕಿ ಮಲ್ಲಿಕಾ ಐ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲದೇ ಸಾರ್ವಜನಿಕ ವಿಭಾಗದಲ್ಲಿ ಕವಿಗೋಷ್ಠಿ ನಡೆಯಿತು.ಅಡೆಕಲ್ ಶಾಲಾ ಶಿಕ್ಷಕಿ ಶ್ರೇಯ ಶೆಟ್ಟಿ ಬಾಲಕವಿಗೋಷ್ಠಿ ಅಧ್ಯಕ್ಷತೆ, ಸ. ಪ್ರೌಢ ಶಾಲೆ ಹಿರೇಬಂಡಾಡಿ ಶಿಕ್ಷಕಿ ಲಲಿತಾ. ಕೆ. ಬಾಲ ಕಥಾಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ವಿಭಾಗದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ್ರಕಾಶ್ ರೈ ಬೆಳ್ಳಿಪ್ಪಾಡಿ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾಂಭವಿ ,ಹಾಗೂ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಸುನೀತಾ ಶ್ರೀರಾಮ್, ಮಲ್ಲಿಕಾ ಐ, ಲಲಿತಾ ಕೆ, ಪೂರ್ಣಿಮಾ ಪೆರ್ಲಂಪಾಡಿ, ಸುಪ್ರೀತಾ ಚರಣ್ ಪಾಲಪ್ಪೆ ಕಡಬ, ಸುರೇಶ ಚಾರ್ವಾಕ, ಚಂದ್ರಹಾಸ ಕುಂಬಾರ ಬಂದಾರು, ಪ್ರಿಯಾ ಸುಳ್ಯ, ಶ್ರೇಯ ಮಿಂಚಿನಡ್ಕ, ಶ್ರೇಯ ಶೆಟ್ಟಿ ಭಾಗವಹಿಸಿದ್ದರು. ವಿವಿಧ ಗೋಷ್ಠಿಗಳ ನಿರ್ವಹಣೆಯನ್ನು ಚೈತ್ರಾ ಮಾಯಿಲಕೊಚ್ಚಿ, ನವ್ಯ ಪ್ರಸಾದ್ ನೆಲ್ಯಾಡಿ, ಪ್ರಿಯಾ ಸುಳ್ಯ, ಶ್ರೇಯಾ ಮಿಂಚಿನಡ್ಕ ನಿರ್ವಹಿಸಿದರು.