ಜ.6: ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ನೇಮೋತ್ಸವ

0

ನುಡಿಗಟ್ಟಿನಲ್ಲಿ ಬರುವಂತೆ ಚಿನ್ನದ ಮಣ್ಣಾಗಿಸಿದ ಗ್ರಾಮದೈವ, ಸಪರಿವಾರ ದೈವಗಳು !

ಪುತ್ತೂರು: ಪಾಂಗಳಾಯಿ ಮಣ್ಣನ್ನು ಚಿನ್ನದ ಮಣ್ಣು ಮಾಡುತ್ತೇನೆಂಬ ದೈವದ ನುಡಿಗಟ್ಟಿನಲ್ಲಿ ಬರುವಂತೆ ಪುತ್ತೂರು ನಗರದ ಹೃದಯಭಾಗದಲ್ಲಿರುವ ಪರ್ಲಡ್ಕ ಪಾಂಗಳಾಯಿ ಕಾರಣಿಕ ಕ್ಷೇತ್ರ ಶ್ರೀ ಅರಸು ಮುಂಡ್ಯತ್ತಾಯ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಜ.6ರಂದು ಜರುಗಲಿದೆ ಎಂದು ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದ ಇದರ ಅಧ್ಯಕ್ಷ ತಾರಾನಾಥ ರೈ ಬಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಜ.5ರಂದು ಸಂಜೆ ದೇವತಾ ಪ್ರಾರ್ಥನೆ ಮತ್ತು ದುರ್ಗಾ ನಮಸ್ಕಾರ ಪೂಜೆಯು ನಡೆಯಲಿರುವುದು ಮತ್ತು ಜ.6ರಂದು ಬೆಳಿಗ್ಗೆ ಗಂಟೆ 7.30ರಿಂದ ಗಣಹೋಮ ಸಾಮೂಹಿಕ ಆಶ್ಲೇಷ ಬಲಿ ಮತ್ತು ಶ್ರೀ ದೈವಗಳಿಗೆ ಕಲಶತಂಬಿಲ ಪೂಜೆಯು ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಜರಗಲಿರುವುದು. ತದನಂತರ ಮಧ್ಯಾಹ್ನ ಮಹಾಪೂಜೆ. ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ. ಸಂಜೆ ಗಂಟೆ 5 ರಿಂದ ದೈವಗಳ ಭಂಡಾರ ತೆಗೆದು ನೇಮೋತ್ಸವವು ಜರಗಲಿರುವುದು. ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು.


ನಂಬಿದ ಭಕ್ತರಿಗೆ ಇಂಬು ಕೊಡುವ ದೇವರು:
ಶ್ರೀ ಅರಸು ಮುಂಡ್ಯತ್ತಾಯ ದೈವ ಹಾಗೂ ಪರಿವಾರ ದೈವಗಳ ಮತ್ತು ನಾಗಸನ್ನಿಧಿಯು ಕಳೆದ 15 ವರ್ಷಗಳ ಹಿಂದೆ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳರವರ ನೇತೃತ್ವದಲ್ಲಿ ಪ್ರತಿಷ್ಠಾಕಲಶ ನೇಮೋತ್ಸವವು ವಿಜೃಂಭಣೆಯಿಂದ ಜರುಗಿಕೊಂಡು ಬರುತ್ತಿದೆ. ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪುರಾಣ ಇತಿಹಾಸಕ್ಕೆ ಸಂಬಂಧಿಸಿ ಶ್ರೀ ಅರಸು ಮುಂಡ್ಯತ್ತಾಯ ದೈವವು ಮೂರು ದಿಕ್ಕಿನಿಂದ ಮಾನವ ರೂಪದಲ್ಲಿ ಪಾಂಗಳಾಯಿ ಮಣ್ಣಿನಲ್ಲಿ ನೆಲೆಯಾಯಿತೆಂದು ನುಡಿಕಟ್ಟಿನಲ್ಲಿ ತಿಳಿಸುವ ದೈವವು ಶಿವಾಂಶ ಸಂಭೂತವಾಗಿದ್ದು, ಸಾಕ್ಷಾತ್ ದೇವ ಸ್ವರೂಪ ಹೊಂದಬಲ್ಲನೆಂದು ಹೇಳುತ್ತದೆ. ನಂಬಿದ ಭಕ್ತರಿಗೆ ಇಂಬು ಕೊಡುವ ನಮ್ಮ ನಾಗದೇವರು, ಅರಸು ಮುಂಡ್ಯತ್ತಾಯ ಮತ್ತು ಪರಿವಾರ ದೈವಗಳು ಅಪಘಾತ, ದುರ್ಮರಣ, ಬೆಂಕಿ, ಆಕಸ್ಮಿಕಾದಿ ಸರ್ವ ಅವಘಡಗಳಿಂದ ಸಂಪೂರ್ಣ ರಕ್ಷಣೆ ನೀಡುವ ದೈವ ಶ್ರೀ ನಾಗದೇವರ ಸನ್ನಿಧಿಯೊಂದಿಗೆ ರಕ್ತಶ್ವರಿಯನ್ನು ನಾಗರಕೇಶ್ವರಿ ಎಂದು ಕರೆಯಲ್ಪಟ್ಟು ಪರಿವಾರ ದೈವಗಳೊಂದಿಗೆ ಪಾಂಗಳಾಯಿಯ ಪುತ್ತೂರು ನಗರ ಕೇಂದ್ರದಲ್ಲಿ ನೆಲೆಯಾಗಿ ನಮ್ಮೆಲ್ಲರನ್ನು ರಕ್ಷಿಸುತ್ತಿದ್ದಾರೆ ಎಂದು ತಾರಾನಾಥ ರೈ ಹೇಳಿದರು. ಈ ಭಾರಿ ಭಂಡಾರವನ್ನು ಮೆರವಣಿಗೆಯ ಮೂಲಕ ತರುವುದು ಎಂದು ನಿಶ್ಚಯಿಸಲಾಗಿದೆ ಎಂದು ಸಮಿತಿ ಸದಸ್ಯ ಪಿ.ಯಸ್ ರಾಜಗೋಪಾಲ ಶಗ್ರಿತ್ತಾಯ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಸೂರಪ್ಪ ಗೌಡ ಪಾಂಗಳಾಯಿ, ಉಪಾಧ್ಯಕ್ಷ ಪ್ರಶಾಂತ್ ಪಾಂಗಳಾಯಿ, ಸದಸ್ಯರಾದ ಪುರುಷೋತ್ತಮ ಪಾಂಗಳಾಯಿ, ಗೋಪಾಲಕೃಷ್ಣ ನಾಯ್ಕ್ ಎ, ವರದರಾಜ್ ನಾಯಕ್ ಇಂದಾಜೆ, ಕರುಣಾಕರ ಆಲೆಟ್ಟಿ, ಸುಪ್ರೀತ ಪಾಂಗಳಾಯಿ ಉಪಸ್ಥಿತರಿದ್ದರು.

ಅರ್ಧ ಸೆಂಟ್ಸ್‌ನಿಂದ 48 ಸೆಂಟ್ಸ್ ಜಾಗಕ್ಕೆ:
ಆರಂಭದಲ್ಲಿ ದೈವಸ್ಥಾನಕ್ಕೆ ಕೇವಲ ಅರ್ಧ ಸೆಂಟ್ಸ್ ಜಾಗ ಹೊಂದಿದ್ದು, ಪ್ರಸ್ತುತ 84 ಸೆಂಟ್ಸ್ ಜಾಗವನ್ನು ಹೊಂದಿದ್ದು ಈ ಎಲ್ಲಾ ಯಶಸ್ವಿಗೂ ಊರಿನ ಮತ್ತು ಪರವೂರಿನ ಸಹೃದಯಿ ಭಕ್ತರೇ ಕಾರಣ. ಶ್ರೀ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಈ ಬಗ್ಗೆ ಸಂಪನ್ಮೂಲದ ಕ್ರೋಢೀಕರಣವು ಅವಶ್ಯಕವಾಗಿರುತ್ತದೆ. ಆದಾಗ್ಯೂ ಕಳೆದ ಮೂರು ವರ್ಷ ಗಳಿಂದ ಪುತ್ತೂರು ಸೀಮಾಧಿಪತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಲುವಾಗಿ ಜಾತ್ರೆ ಪ್ರಾರಂಭ. ಪೇಟೆ ಸವಾರಿಯ ಮೂರನೇ ದಿನದಂದು ನಮ್ಮ ದೈವಸ್ಥಾನದ “ಶ್ರೀ ದೇವರ ಕಟ್ಟೆ”ಯಲ್ಲಿ ಕಟ್ಟೆಪೂಜೆ ಸ್ವೀಕರಿಸುತ್ತಾರೆ. ಶ್ರೀ ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷದ ಪ್ರತೀ ತಿಂಗಳ ಸಂಕ್ರಮಣ ದಂದು ಪೂಜೆ, ತಂಬಿಲ ಸೇವೆ ನೆರವೇರುತ್ತದೆ. ಅಲ್ಲದೆ ವಿಶೇಷ ದಿನಗಳಾದ ಪತ್ತನಾಜೆ. ನಾಗರಪಂಚಮಿ. ಶ್ರೀಕೃಷ್ಣ ಜನ್ಮಾಷ್ಟಮಿ, ಆಯುಧ ಪೂಜೆ. ದೀಪಾವಳಿಯ ಬಲಿಪಾಡ್ಯಮಿ, ಕಾರ್ಯಕ್ರಮ ನಡೆಯುತ್ತದೆ ಹಾಗೂ ಮಹಿಳಾ ಭಜನೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಹೀಗೆ ಹಲವು ಕಾರ್ಯಕ್ರಮಗಳು ಜರಗುತ್ತಿರುತ್ತವೆ ಎಂದ ತಾರಾನಾಥ ರೈ ಅವರು ದೈವದ ನುಡಿಗಟ್ಟಿನಂತೆ ಪಾಂಗ್ಲಾಯಿ ಮಣ್ಣು ಕೂಡಾ ಚಿನ್ನದ ಮಣ್ಣಾಗಿದೆ. ಇವತ್ತು ಹಿಂದೆ ಎಕ್ರೆಗೆ ನೀಡುತಿದ್ದ ಹಣ ಇವತ್ತು ಸೆಂಟ್ಸ್‌ನ ಮೌಲ್ಯಕ್ಕೆ ಬಂದಿದೆ. ಅದೇ ಪರಿಸರವನ್ನು ಕಾಪಾಡಿಕೊಂಡು ಶೇ.70ರಂದು ಇನ್ನೂ ಹಸಿರಿಕರಣದಲ್ಲೇ ಇದೆ. ದೈವಸ್ಥಾನಕ್ಕೂ ಗದ್ದೆ ಮೀಸಲಿಟ್ಟು ಅಲ್ಲಿ ಬೆಳೆ ಮಾಡಲು ಪಕ್ಕದ ಮನೆಯರಿಗೆ ವಹಿಸಲಾಗಿದೆ ಎಂದು ತಾರಾನಾಥ ರೈ ಹೇಳಿದರು.

LEAVE A REPLY

Please enter your comment!
Please enter your name here