ಕರ್ನಾಟಕದಿಂದ ಆಯ್ಕೆಗೊಂಡ ನಾಲ್ಕು ತಂಡಗಳ ಪೈಕಿ ಕರಾವಳಿ ಭಾಗದ ಏಕೈಕ ತಂಡ
ಪುತ್ತೂರು: ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಸಂಗೀತ ನೃತ್ಯಾ ಅಕಾಡೆಮಿ ಜಂಟಿಯಾಗಿ ನಡೆಸಿದ ’ವಂದೇ ಭಾರತ’ ನೃತ್ಯ ಆನ್‌ಲೈನ್ ನೃತ್ಯ ಸ್ಪರ್ಧೆಯಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರ್ ಅಕಾಡೆಮಿಯ ಹಿರಿಯ ಮೂವರು ಶಿಷ್ಯರು ಆಯ್ಕೆಗೊಂಡು ಜ.26ರಂದು ನವದಹೆಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ 1 ಸಾವಿರಕ್ಕೂ ಮಿಕ್ಕಿ ಸ್ಪರ್ಧೆಯಲ್ಲಿ ಕರ್ನಾಟಕದಿಂದ ನಾಲ್ಕು ತಂಡಗಳು ಆಯ್ಕೆಗೊಂಡು ಅದರಲ್ಲಿ ಕರಾವಳಿ ಭಾಗದ ಏಕೈಕ ತಂಡವಾಗಿ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಮೂವರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಅವರ ಶಿಷ್ಯಂದಿರಾದ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಶಿಕ್ಷಕಿ ಸ್ವಾತಿ ಎನ್.ಬಿ, ವಿವೇಕಾನಂದ ಪದವಿ ಕಾಲೇಜಿನ 2ನೇ ವರ್ಷದ ಬಿಸಿಎ ವ್ಯಾಸಾಂಗ ಮಾಡುತ್ತಿರುವ ಕು.ಪ್ರಣಮ್ಯ , ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ 3ನೇ ವರ್ಷದ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿರುವ ಕು.ಶಮಾ ಚಂದುಕೂಡ್ಲು ಅವರು ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಲು ಆಯ್ಕೆಗೊಂಡಿದ್ದು, ಜ.26ರಂದು ಅವರು ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕು ಸ್ವಾತಿ ಎನ್ ಬಿ ಅವರು ವಸಂತ ಸುವರ್ಣ, ಲತಾ ವಿ ಸುವರ್ಣ ಅವರ ಪುತ್ರಿ, ಕು. ಪ್ರಣಮ್ಯ ಅವರು ಗಣಪತಿ ನಾಯಕ್ ಮತ್ತು ಸುಲೋಚನಾ ಅವರ ಪುತ್ರಿ, ಕು. ಕ್ಷಮಾ ಅವರು ಗಣೇಶ್ ಚಂದುಕೂಡ್ಲು ಮತ್ತು ರವಿಕಲಾ ಚಂದುಕೂಡ್ಲು ಅವರ ಪುತ್ರಿ, ಈಗಾಗಲೇ ಅವರು ದೆಹಲಿಗೆ ತೆರಳಿದ್ದು, ಅಲ್ಲಿ ಒಂದು ತಿಂಗಳ ತರಬೇತಿಯಲ್ಲಿ ಪಾಲ್ಗೊಂಡು ಬಳಿಕ ನೃತ್ಯ ಪ್ರದರ್ಶನ ನೀಡಲಿದ್ದಾರೆ.