ಉಪ್ಪಿನಂಗಡಿಯಲ್ಲಿ ಸವಿತಾ ಕೆಫೆ ಶುಭಾರಂಭ

0

ಕುಟುಂಬ ಸಮೇತರಾಗಿ ರುಚಿಕರ ಖಾದ್ಯ ಸವಿಯುವ ಸುವರ್ಣಾವಕಾಶ

ಉಪ್ಪಿನಂಗಡಿ: ಸವಿತಾ ಸ್ವೀಟ್ಸ್‌ನವರ ನೂತನ ಸವಿತಾ ಕೆಫೆ ಡಿ.28ರಂದು ಇಲ್ಲಿನ ಪೃಥ್ವಿ ಶಾಪಿಂಗ್ ಮಾಲ್‌ನಲ್ಲಿ ಶುಭಾರಂಭಗೊಂಡಿತು. ಸವಿತಾ ಸ್ವೀಟ್ಸ್ ಮಾಲಕ ಪೂವಪ್ಪ ಗೌಡರ ತಾಯಿ ಯಶೋಧ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.


ಸಚಿನ್ ಜ್ಯೂಸ್ ಸೆಂಟರ್‌ನ ಮಾಲಕ ಸುಂದರ ಗೌಡ ಮಾತನಾಡಿ, ವ್ಯಾಪಾರದಲ್ಲಿ ಶೃದ್ಧೆ ಮುಖ್ಯ. ಶೃದ್ಧೆ, ಪ್ರಾಮಾಣಿಕತೆ ಇದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ಸಚಿನ್ ಜ್ಯೂಸ್ ಸೆಂಟರ್‌ನ ಸುಂದರ ಗೌಡರು ನಮ್ಮ ಆತ್ಮೀಯರಾಗಿದ್ದು, ಅವರ ಕುಟುಂಬದ ಸಂಸ್ಥೆಯಾಗಿ ಇದೀಗ ಸವಿತಾ ಕೆಫೆ ಶುಭಾರಂಭಗೊಂಡಿದೆ. ಇದು ವ್ಯಾಪಾರ ವಲಯದಲ್ಲಿ ಯಶಸ್ಸನ್ನು ಗಳಿಸುವುದರೊಂದಿಗೆ ಐಸ್‌ಕ್ರೀಂ, ಜ್ಯೂಸ್, ಬೇಕರಿ ತಿಂಡಿ- ತಿನಿಸುಗಳ ತಯಾರಿಗಳಿಗೆ ಹೆಸರಾಗಿರುವ ಇವರ ಕುಟುಂಬದಿಂದ ಇನ್ನಷ್ಟು ಸಂಸ್ಥೆಗಳು ಹುಟ್ಟಿಕೊಳ್ಳಲಿ ಎಂದು ಶುಭಹಾರೈಸಿದರು.


ಈ ಸಂದರ್ಭದಲ್ಲಿ ಕೊರಗಪ್ಪ ಗೌಡ ಅರ್ಬಿ, ಬಾಬು ಗೌಡ ಅರ್ಬಿ, ಆನಂದ ಗೌಡ ಅರ್ಬಿ, ರವೀಂದ್ರ ಮುದ್ಯ, ಪ್ರೇಮಾ ರವೀಂದ್ರ, ಯಶವಂತ ಗುಂಡ್ಯ, ಬಾಲಚಂದ್ರ ಗುಂಡ್ಯ, ರವಿ ಗುಂಡ್ಯ, ಮಹೇಶ್ ಅಗಳಿ, ಶ್ರೀಫ್ಯಾನ್ಸಿಯ ರಮೇಶ್, ಶೇಖರ, ಚಿದಾನಂದ ಪಂಚಾಮೃತ, ಶ್ರೀ ದೇವಿ ಡ್ರೆಸ್ಸಸ್‌ನ ಪರಮೇಶ್ವರ ಗೌಡ ನೆಕ್ಕರೆ, ಸೂರಜ್ ಮೆಟಲ್‌ನ ಅಂಕಿತ್, ವೆಂಕಪ್ಪ ಗೌಡ, ರೂಪಕಲಾ ಸ್ಟುಡಿಯೋದ ಬಾಲಕೃಷ್ಣ, ಕೈಲಾರ್ ರಾಜಗೋಪಾಲ ಭಟ್, ಅಶ್ವಿನಿ ಹೋಮ್ ಅಪ್ಲಾಯನ್ಸ್‌ನ ಪ್ರಕಾಶ್, ವಿಶ್ವನಾಥ ಗೌಡ ಪಿಜಕ್ಕಲ ಮತ್ತಿತರರು ಉಪಸ್ಥಿತರಿದ್ದರು.
ಸವಿತಾ ಕೆಫೆಯ ಮಾಲಕ ಪೂವಪ್ಪ ಗೌಡ ಸ್ವಾಗತಿಸಿ, ಅತಿಥಿಗಳನ್ನು ಬರಮಾಡಿಕೊಂಡರು. ಪತ್ರಕರ್ತ ಉದಯಕುಮಾರ್ ಯು.ಎಲ್. ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಸಚಿನ್ ಬೇಕ್ ಮತ್ತು ಐಸ್‌ಕ್ರೀಂನ ಮಾಲಕ ಸಚಿನ್ ಮಾತನಾಡಿ, ನಮ್ಮಲ್ಲಿ ಜನಪ್ರಿಯ ತಿನಸುಗಳಾದ ಫಿಝಾ, ರೋಲ್ಸ್, ಪಿಟ ಬ್ರೆಡ್, ಸ್ಯಾಂಡ್ವಿಚ್, ಬರ್ಗರ್, ಸ್ಪೆಶಲ್ ಚಾಟ್ಸ್, ಮೊಮೊಸ್, ಫ್ರೆಂಚ್ ಫ್ರಿಯ್ಸ್, ವೆಜ್ ಫಿಝಾ ಹಾಗೂ ಜ್ಯೂಸ್ ಐಟಂಗಳಾದ ಹಾಟ್ ಡ್ರಿಂಕ್ಸ್, ಮಿಲ್ಕ್ ಶೇಕ್, ಐಸ್ ಕ್ರೀಂ ಮಿಲ್ಕ್ ಶೇಕ್, ಫಲೂಡ, ಮೊಜಿಟೊ, ಕೇಕ್ ಶೇಕ್, ಐಸ್‌ಕ್ರೀಂ ಸ್ಕೂಪ್ ಸೇರಿದಂತೆ ವಿವಿಧ ತರದ ಐಸ್‌ಕ್ರೀಂ, ತಿಂಡಿ ತಿನಸುಗಳು ಲಭ್ಯವಿದೆ ಎಂದರು.

LEAVE A REPLY

Please enter your comment!
Please enter your name here