ಡಿ.30: ಪಟ್ಟೆ ವಿದ್ಯಾಸಂಸ್ಥೆಗಳ ನೂತನ ಪ್ರಯೋಗಾಲಯ ಮತ್ತು ಕೊಠಡಿ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

0

ಬಡಗನ್ನೂರುಃ ಪಟ್ಟೆ  ವಿದ್ಯಾಸಂಸ್ಥೆಗಳ ನೂತನ ಪ್ರಯೋಗಾಲಯ ಮತ್ತು ಕೊಠಡಿ ಉದ್ಘಾಟನೆ ಹಾಗೂ  ಪ್ರತಿಭಾ  ಪುರಸ್ಕಾರ ಸಮಾರಂಭವು  ಡಿ.30 ರಂದು ಬೆಳಗ್ಗೆ ಗಂ 9 ಕ್ಕೆ ವಿದ್ಯಾಸಂಸ್ಥೆಗಳ ವಠಾರದಲ್ಲಿ  ನಡೆಯಲಿರುವುದು.ಪ್ರತಿಭಾ ಪುರಸ್ಕಾರ ಸಮಾರಂಭವು ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕ ಪಿ ನಾರಾಯಣ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ, ಪಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕರುಗಳಾದ ಶಿವಪ್ರಸಾದ್ ಪಟ್ಟೆ, ನಹುಷ ಪಿ.ವಿ, ಶಿರೀಷ  ಪಿ.ಬಿ ,  ಪ್ರಗತಿಪರ ಕೃಷಿಕ ಹರೀಶ್ ರೈ ಮೇರ್ಲ, ಕುಂಬ್ರ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಬಿ.ಆರ್, ಪ್ರತಿಭಾ ಪ್ರೌಢಶಾಲಾ ಎಸ್. ಡಿ.ಯಂ.ಸಿ.ಅಧ್ಯಕ್ಷ ಬೆಳಿಯಪ್ಪ ಗೌಡ ಕನ್ನಾಯ, ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಎಸ್. ಡಿ.ಯಂ.ಸಿ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ ಭಾಗವಹಿಸಲಿದ್ದಾರೆ.

 ನೂತನ ಪ್ರಯೋಗಾಲಯ ಮತ್ತು ಕೊಠಡಿ ಉದ್ಘಾಟನೆ:- ನೂತನ ಪ್ರಯೋಗಾಲಯ ಮತ್ತು ಕೊಠಡಿ ಉದ್ಘಾಟನೆಯನ್ನು ಪುತ್ತೂರು, ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ಮಾಡಲಿದ್ದಾರೆ.ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರ ಶಾಸಕ  ಎಸ್.ಎಲ್.ಬೋಜೇಗೌಡ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಆಪರೇಶನ್ಸ್, ಸೆಸ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಏರಿಯಾ  ಮ್ಯಾನೇಜರ್  ಪ್ರಸಾದ್ ಬಿ   ವಿವೇಕ ತರಗತಿ ಉದ್ಘಾಟನೆ ಮಾಡಲಿದ್ದಾರೆಸಮಾರಂಭವು ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪಿ. ವೇಣುಗೋಪಾಲ್ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಅತಿಥಿಗಳಾಗಿ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ,  ಪ್ರಗತಿಪರ ಕೃಷಿಕ  ಬಿ ಜಿ ನಾರಾಯಣ ಭಟ್ ತೆಕ್ಕಡ್ಕ,  ಪುತ್ತೂರು ಚೇಂಬ‌ರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್  ಅಧ್ಯಕ್ಷ  ವಾಮನ್ ಪೈ, ಉದ್ಯಮಿಗಳು ನೂತನ ಶೌಚಾಲಯದ ದಾನಿಗಳಾದ  ಎ. ಚಿಕ್ಕಪ್ಪ ನ್ಯಾಕ್ ಅರಿಯಡ್ಕ, ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ  ಪುಷ್ಪಲತಾ ದೇವಕಜೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಪುತ್ತೂರು ಉದ್ಯಮಿ ಕೆ ಪಾಂಡುರಂಗ ಭಟ್,  ಮೆರೈನ್ ಇಂಜಿನಿಯರ್  ಮನೋಹರ ಪ್ರಸಾದ್ ರೈ ಮೇಗಿನ ಮನೆ,  ಭಾಗವಹಿಸಲಿದ್ದಾರೆ.

ಅಭಿನಂದನಾ ಕಾರ್ಯಕ್ರಮ :-ಪಟ್ಟೆ ಪ್ರತಿಭಾ ಪ್ರೌಢಶಾಲಾ ರಾಷ್ಟ್ರಮಟ್ಟದ ಕ್ರೀಡಾಪಟು ತನುಶ್ರೀ ರೈ, ಬಡಕಾಯೂರು,ಪಟ್ಟೆ ಪ್ರತಿಭಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ,  ಕಟ್ಟಡ ಗುತ್ತಿಗೆದಾರ ಲೋಕೇಶ್ ಅಮೈ,  ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶರು ಸಂಸ್ಥೆಯ ಹಿರಿಯ ವಿದ್ಯಾರ್ಥಿಯೂ  ಆದ  ಲತೀಫ್ ಮುಂಡೋಳೆ,   ಹಿರಿಯ ವಿದ್ಯಾರ್ಥಿ ಅಶ್ರಫ್ ಮತ್ತು ಬಳಗ ಪಟ್ಟೆ , ಹಾಗೂ 2022 -23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ರೂಪಾಯಿ 25000 ಮೇಲ್ಪಟ್ಟು ಕೊಡುಗೆ ನೀಡಿದ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ..

ಸಾಂಸ್ಕೃತಿಕ  ಕಾರ್ಯಕ್ರಮ:-ಅಪರಾಹ್ನ ಗಂ 2 ರಿಂದ ವಿದ್ಯಾಸಂಸ್ಥೆ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವಂತೆ ವಿದ್ಯಾಸಂಸ್ಥೆಗಳ ಸಂಚಾಲಕ ಪಿ ನಾರಾಯಣ ಭಟ್ ಹಾಗೂ ಅಧ್ಯಕ್ಷ ವೇಣುಗೋಪಾಲ್ ಪಟ್ಟೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here