ಬಡಗನ್ನೂರು: ತ್ಯಾಜ್ಯ ಎಸೆದು ಪರಿಸರಕ್ಕೆ ಕುಂದು ತರುವವರ 5 ಸಾವಿರ ದಂಡ ವಿಧಿಸುವಂತೆ ಹಾಗೂ ಜಾಗೃತಿ ನಾಮಫಲಕ ಅಳವಡಿಸಲು ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಚಲತಾ ಎಂ ರವರ ಅಧ್ಯಕ್ಷತೆಯಲ್ಲಿ ಡಿ.27 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಸಜಂಕಾಡಿ ಅರಣ್ಯ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮವೊಂದರ ಪ್ಲಾಸ್ಟಿಕ್ ಗ್ಲಾಸ್, ಹಾಗೂ ಉಳಿಕೆ ತ್ಯಾಜ್ಯ ರಾತ್ರಿ ಹೊತ್ತಿನಲ್ಲಿ ಗೋಣಿ ಚೀಲದಲ್ಲಿ ತಂದು ಬಿಸಕಿದ ಬಗ್ಗೆ ಸದಸ್ಯ ಸಂತೋಷ್ ಆಳ್ವ ಗಿರಿಮನೆ ವಿಷಯ ಪ್ರಸ್ತಾಪ ಮಾಡಿದರು. ತ್ಯಾಜ್ಯ ಎಸೆದು ಪರಿಸರ ನಾಶಕ್ಕೆ ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಗ್ರಾಮದ ಸ್ವಚ್ಛತೆ ದೃಷ್ಟಿಯಿಂದ ಗ್ರಾ.ಪಂ ವತಿಯಿಂದ ವಾರದಲ್ಲಿ ಒಂದು ದಿವಸ ಕಸ ವಿಲೇವಾರಿ ಮಾಡಲಾಗುತ್ತದೆ ಅದರೂ ಜನರು ಇದರ ಸದುಪಯೋಗ ಪಡೆದುಕೊಳ್ಳದೆ ಸಿಕ್ಕ ಸಿಕ್ಕಿದ ಪ್ರದೇಶದಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಈ ಬಗ್ಗೆ ತ್ಯಾಜ್ಯ ಎಸೆಯುವ ಪ್ರದೇಶದಲ್ಲಿ ದಂಡ ವಿಧಿಸುವ ಬಗ್ಗೆ ನಾಮಫಲಕ ಹಾಕುವಂತೆ ಒತ್ತಾಯಿಸಿದರು. ಬಳಿಕ ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಬಗ್ಗೆ ತಾಂತ್ರಿಕ ಸಮಸ್ಯೆ ಸರಿಪಡಿಸುವ ಬಗ್ಗೆ ಡಿ.27 ರಿಂದ 29 ರ ತನಕ ಶಿಬಿರ ಆಯೋಜನೆ ಮಾಡುವ ಬಗ್ಗೆ ಕರ್ನಾಟಕ ಸರ್ಕಾರದ ಸುತ್ತೋಲೆ ಹೊರಡಿಸಿ, ಸಮಸ್ಯೆ ಸರಿಪಡಿಸಲು ಗ್ರಾ.ಪಂ ಗೆ , ಪೋಸ್ಟ್ ಆಫೀಸ್ ಅಧಿಕಾರಿಗಳು , ಬ್ಯಾಂಕ್ ಅಧಿಕಾರಿಗಳು ಮತ್ತು ಗ್ರಾಮ ಒನ್ ಸಿಬ್ಬಂದಿಗಳು ಕರ್ತವ್ಯ ಹಂಚಿಕೆ ಮಾಡಲಾಗಿತ್ತು ಅದರೆ ಕಾರ್ಯಾಗಾರದಲ್ಲಿ ಬ್ಯಾಂಕ್ ಅಧಿಕಾರಿಗಳು ಪೋಸ್ಟ್ ಆಫೀಸ್ ಅಧಿಕಾರಿಗಳು ಹಾಗೂ ಗ್ರಾಮ ಒನ್ ಸಿಬ್ಬಂದಿಗಳು ಹಾಜರಾಗದೆ ಇದ್ದ ಬಗ್ಗೆ ಸದಸ್ಯ ಸಂತೋಷ್ ಆಳ್ವ ವಿಷಯ ಪ್ರಸ್ತಾಪ ಮಾಡಿ ಸರಕಾರದ ಸುತ್ತೋಲೆ ಪ್ರಕಾರ ಗ್ರಾ.ಪಂ ಎಲ್ಲ ವ್ಯವಸ್ಥೆ ಮಾಡಿದೆ ಆದರೆ ತಾಂತ್ರಿಕ ಸಮಸ್ಯೆ ಸರಿಪಡಿಸಲು ಸಂಬಂಧ ಪಟ್ಟ ಅಧಿಕಾರಿ ಬರಬೇಕು ಅವರು ಬರುವುದಿಲ್ಲ ಅಂದರೆ ಕಾರ್ಯಕ್ರಮ ಅಯೋಜಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು ಸಮಸ್ಯೆ ಬಗೆಹರಿಸಲು ಬಂದ ಎಲ್ಲರೂ ಕೂಲಿ ಕಾರ್ಮಿಕರು ಅವರು ದುಡಿದು ಜೀವನ ಸಾಗಿಸಬೇಕಷ್ಟೆ ಅವರನ್ನು ಇಡೀ ದಿನ ಅಲೆದಾಡುವಂತೆ ಮಾಡುವುದು ಸರಿಯಲ್ಲ ಎಂದರು. ಈ ಬಗ್ಗೆ ಅಭಿವೃದ್ಧಿ ವಸೀಮ ಗಂಧದ ಮಾತನಾಡಿ ಸರ್ಕಾರದ ಸುತ್ತೋಲೆ ಪ್ರಕಾರ ಗ್ರಾ.ಪಂ ಗೆ , ಪೋಸ್ಟ್ ,ಆಫೀಸ್ ಅಧಿಕಾರಿಗಳು , ಬ್ಯಾಂಕ್ ಅಧಿಕಾರಿಗಳು ಮತ್ತು ಗ್ರಾಮ ಒನ್ ಸಿಬ್ಬಂದಿಗಳು ಕರ್ತವ್ಯ ಹಂಚಿಕೆ ಮಾಡಲಾಗಿದೆ. ಪುತ್ತೂರಿನ ಹಲವು ಪಂಚಾಯತಿಗೆ ಮೊದಲ ದಿನ ಕರ್ತವ್ಯಕ್ಕೆ ಹಾಜರಾಗಿಲ್ಲ. ನಮ್ಮಲ್ಲಿ 22 ಮಂದಿಯದ್ದು ಮಾತ್ರ ಸಮಸ್ಯೆ ಇದೆ. ಸಾಮಾನ್ಯ ಸಭೆ ಮುಗಿದ ಬಳಿಕ ಸ್ಥಳೀಯ ಗ್ರಾಮ ಒನ್ ಸಿಬ್ಬಂದಿಯನ್ನು ಕರೆದು ನಾನೇ ಖುದ್ದಾಗಿ ಕುಳಿತು ಎಲ್ಲಿ ಸಮಸ್ಯೆ ಆಗಿದೆ ಎಂದು ನೋಡುತ್ತೇನೆ ಎಂದು ಉತ್ತರಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ವೆಂಕಟೇಶ ಕನ್ನಡ್ಕ, ರವಿಚಂದ್ರ ಸಾರೆಪ್ಪಾಡಿ, ಪದ್ಮನಾಭ ಸುಳ್ಯಪದವು, ವಸಂತ ಗೌಡ ಕನ್ನಾಯ, ಧರ್ಮೇಂದ್ರ ಪದಡ್ಕ, ಲಿಂಗಪ್ಪ ಮೋಡಿಕೆ, ಸವಿತಾ ನೆರೋತ್ತಡ್ಕ, ಕಲಾವತಿ ಗೌಡ ಪಟ್ಲಡ್ಕ, ಸುಜಾತ ಮೈಂದನಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ,ಶ್ರೀಮತಿ ಕೆ, ದಮಯಂತಿ ಕೆಮ್ಮತ್ತಡ್ಕ ಉಪಸ್ಥಿತರಿದ್ದರು.
ಸಭೆ ಪ್ರಾರಂಭದ ಮೊದಲು ಇತ್ತೀಚೆಗೆ ನಿಧನ ಹೊಂದಿದ ಗ್ರಾ.ಪಂ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ರವರ ಅತ್ಮಕ್ಕೆ ಸದ್ಗತಿ ದೊರೆಯಲೆಂದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸ್ವಾಗತಿಸಿ ,ವಂದಿಸಿದರು. ಪಂ. ಸಿಬ್ಬಂದಿಗಳು ಸಹಕರಿಸಿದರು.