ನಗರಸಭಾ ಉಪಚುನಾವಣೆ: ವಾರ್ಡ್ 1 ರ ವಿಜೇತ ಕಾಂಗ್ರೆಸ್ ಆಭ್ಯರ್ಥಿ ದಿನೇಶ್ ಶೇವಿರೆರವರಿಂದ ಮಾಯಿದೆ ದೇವುಸ್ ಚರ್ಚ್ ನಲ್ಲಿ ಪ್ರಾರ್ಥನೆ

0

ಪುತ್ತೂರು: ಪುತ್ತೂರು ನಗರಸಭಾ ಉಪ ಚುನಾವಣೆಯಲ್ಲಿ ವಾರ್ಡ್ 1 ರಲ್ಲಿ ಕಾಂಗ್ರೆಸ್ ಆಭ್ಯರ್ಥಿ ದಿನೇಶ್ ಶೇವಿರೆರವರು 119 ಮತಗಳಿಂದ ಗೆಲುವು ಕಂಡಿದ್ದು, ಈ ನಿಟ್ಟಿನಲ್ಲಿ ವಿಜೇತ ಅಭ್ಯರ್ಥಿ ದಿನೇಶ್ ಶೇವಿರೆರವರು ಡಿ.30 ರಂದು ಪುತ್ತೂರು ಮಾಯಿದೆ ದೇವುಸ್ ಚರ್ಚ್ ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕೆಡಿಪಿ ಮಾಜಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಅಲ್ಪಸಂಖ್ಯಾತ ಜಿಲ್ಲಾ ಉಪಾಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ರೋಶನ್ ಡಾಯಸ್ ಬಪ್ಪಳಿಗೆ, ಹಸೈನಾರ್ ಬನಾರಿ, ಕುಮಾರ ದೇವಾಂಗ, ಚಂದ್ರಶೇಖರ, ರಶೀದ್ ಮುರ, ಕೃಷ್ಣಪ್ರಸಾದ್, ಪ್ರಕಾಶ್ ಗೌಡ ನೆಕ್ಕೆಲಾಡಿ, ಕಲಾವಿದ ಕೃಷ್ಣಪ್ಪ, ಶೇಖರ್, ಪ್ರಕಾಶ್ ನೆಕ್ಕಿಲಾಡಿ, ನವೀನ್ ಶೇವಿರೆ, ಜಾನಕಿ ಮುರರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here