ಪುತ್ತೂರು: ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಂದ ಮಂಗಳೂರು ದಿವ್ಯಾಸ್ ಸಂಸ್ಥೆ ಸಹಯೋಗದಲ್ಲಿ ಬೆಳ್ಳಿಪಾಡಿಯ ಸರಕಾರಿ ಉನ್ನತೀಕರಿಸಿದ ಹಿ,ಪ್ರಾ ಶಾಲೆಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು. ಆರೋಗ್ಯ ಜಾಗೃತಿ ಮಾಲಿಕೆ ಶಿರೋನಾಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಆರೋಗ್ಯ ಜಾಗೃತಿ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ ಇದರೊಂದಿಗೆ ಶಾಲಾ ಪರಿಸರದ ಸ್ವಚ್ಚತೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದೇ ವೇಳೆ ಉಜಿರೆಯ ಹ್ಯಾಪಿ ಚಿಲ್ಡ್ರನ್ ಕ್ಲಿನಿಕ್ ನ ಡಾ ಅನನ್ಯಲಕ್ಷ್ಮೀ ಸಂದೀಪ್ ಮಕ್ಕಳಿಗೆ ಶಾರೀರಿಕ ಹಾಗು ಮಾನಸಿಕ ಸ್ವಚ್ಚತೆಯ ಬಗ್ಗೆ ಚಟುವಟಿಕೆಗಳ ಮೂಲಕ ವಿವರಿಸಿದರು. ಎನ್ ಎಸ್ ಎಸ್ ಸ್ವಯಂಸೇವಕರು ಸುತ್ತಮುತ್ತಲಿನ ಪರಿಸರದ ಸ್ವಚ್ಚತೆ ಮತ್ತು ಗಿಡ ನೆಡುವ ಮೂಲಕ ಶ್ರಮದಾನ ನಡೆಸಿದರು.
ದಿವ್ಯಾಸ್ ಸಂಸ್ಥೆಯ ಆಸ್ರಯದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಅಂತಿಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರಜ್ಞಾ ಡಿ ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.