ಲೇಖಕಿ ಸುಲೋಚನಾ ಪಿ.ಕೆಯವರ ನುಡಿಮುತ್ತುಗಳು, ಅರೆಭಾಷೆ ಕವನ ಸಂಕಲನ ಲೋಕಾರ್ಪಣೆ

0

ಪುತ್ತೂರು:ಲೇಖಕಿಯಾಗಿರುವ ಉಪ ತಹಶೀಲ್ದಾರ್ ಸುಲೋಚನಾ ಪಿ.ಕೆಯವರ ಬರೆದಿರುವ ‘ಸತ್ಯದರ್ಶನ ನುಡಿಮುತ್ತುಗಳು’ ಮತ್ತು ‘ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್‌ನ ತಾಯಿತಾತ್’ ಅರೆಭಾಷೆ ಕವನ ಸಂಕಲನದ ಲೋಕಾರ್ಪಣೆಯು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಸಹಕಾರದೊಂದಿಗೆ ಡಿ.31ರಂದುದರ್ಬೆ ಬೈಪಾಸ್ ರಸ್ತೆಯ ಮಕ್ಕಳ ಮಂಟಪದಲ್ಲಿ ನಡೆಯಿತು.


ಪುಸ್ತಕ ಲೋಕಾರ್ಪಣೆ ಮಾಡಿದ ದರ್ಬೆ ಮಕ್ಕಳ ಮಂಟಪದ ಶಿಕ್ಷಣ ಸಿದ್ಧಾಂತಿ ಡಾ ಎನ್ ಸುಕುಮಾರ ಗೌಡ ಮಾತನಾಡಿ, ಲೇಖಕಿ ಸುಲೋಚನಾರವರು ಬರೆದಿರುವ ಪುಸ್ತಕವನ್ನು ಓದಿ ಮಂಥನ ಮಾಡಿಕೊಳ್ಳಬೇಕು. ಅವರು ಬರೆದಿರುವ ಪುಸ್ತಕದ ಬಗ್ಗೆ ಏನಾದರೂ ವಿಚಾರಗಳು ಅಥವಾ ಪ್ರತಿಕ್ರಿಯೆಗಳಿದ್ದರೆ ಅವರನ್ನು ಸಂಪರ್ಕಿಸಹುದು. ಸುಲೋಚನಾರವರ ಬರವಣಿಗೆಯು ನಿರಂತರವಾಗಿ ಮುಂದುವರಿಯಲಿ ಎಂದರು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತಹಶಿಲ್ದಾರ್ ಜೆ.ಶಿವಶಂಕರ್ ಮಾತನಾಡಿ, ನಮ್ಮ ಇಲಾಖೆಯಲ್ಲಿ ಉಪ ತಹಶೀಲ್ದಾರ್ ಆಗಿದ್ದುಕೊಂಡು ಪುಸ್ತಕ ಬರೆದಿರುವುದು ಸಂತೋಷ ತಂದಿದೆ. ಈ ಪುಸ್ತಕವನ್ನು ಪ್ರತಿಯೊಬ್ಬರೂ ಓದಿ ಅರ್ಥಮಾಡಿಕೊಂಡು ಅರದಲ್ಲಿರುವ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ಲೇಖನದ ಮೂಲಕ ಸಮಾಜ, ವ್ಯಕ್ತಿತ್ವ ಬದಲಾಯಿಸಬಹದು. ಸಾಹಿತ್ಯಗಳು ಬೆಳೆದರೆ ಸಮಾಜದ ಅಭಿವೃದ್ಧಿ. ವ್ಯಂಗ್ಯ ಸಾಹಿತಿಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸುಲೋಚನಾರವರು ಕಂದಾಯ ಇಲಾಖೆಯ ಪ್ರತಿನಿಧಿಯಾಗಿ ಸರಕಾರಿ ನೌಕರರ ಸಂಘಕ್ಕೆ ಬಂದ ಬಳಿಕ ನಮ್ಮ ಸಂಘವು ಸಾಹಿತ್ಯ ಸಂಘವಾಗುತ್ತಿದೆ. ಸಂಘದಲ್ಲಿ ಸಾಹಿತ್ಯ ಬದ್ಧವಾಗಿ ಚರ್ಚೆಗಳಾಗುತ್ತಿದೆ. ಕಂದಾಯ ಇಲಾಖೆಯ ಕಾರ್ಯಭಾರ, ಅಧಿಕಾರಿಗಳ ಒತ್ತಡದೊಂದಿಗೆ ಮನಸ್ಸಿನ ಮಾತಿಗಳನ್ನು ಪುಸ್ತಕ ರಚಿಸಿರುವುದುಕ್ಕೆ ಅಭಿನಂದಿಸಿದರು. ಸಂಘದಿಂದ ಅಭಿನಂದನೆ ಸಲ್ಲಿಸಿದರು.


ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಶಿಕ್ಷಣ ಚಿಂತಕ ಗೋಪಾಡ್ಕರ್ ಮಾತನಾಡಿ, ಪ್ರೌಢಶಾಲಾ ವಿದ್ಯಾರ್ಥಿ ಜೀವನದಲ್ಲಿ ಸುಲೋಚನಾರವರು ಮೌನವಾಗಿದ್ದರು. ಅವರ ಮೌನದಲ್ಲಿ ಸಾಕಷ್ಟು ವಿಚಾರಗಳಿತ್ತು. ಅವರ ಮೌನ ಈಗ ಸ್ಪೋಟವಾಗಿದೆ. ಅಮ್ಮನ ಆದರ್ಶದಲ್ಲಿ ಪುಸ್ತಕವನ್ನು ಬಹಳ ದೀರ್ಘವಾಗಿ ಬರೆದಿದ್ದಾರೆ. ಕಲಾ ಪ್ರಜ್ಞೆ ಇಲ್ಲದವರೂ ಜಿಲ್ಲಾಧಿಕಾರಿಗಳಾಗಿದ್ದಾರೆ. ಕೆಲವರು ಕೇವಲ ಸಹಿ ಹಾಕುವುದಕ್ಕೆ ಅಧಿಕಾರಿಗಳಾಗಿದ್ದಾರೆ. ಇದರ ಬಗ್ಗೆ ಸ್ವತಃ ನಾನೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು ಸುಲೋಚನಾರವರು ಸಹಿ ಹಾಕುವುದಕ್ಕೆ ಹುಟ್ಟಿದವರಲ್ಲ ಎಂದರು.


ಸಾಹಿತಿ, ನ್ಯಾಯವಾದಿಯಾಗಿರುವ ವಿದ್ಯಾಧರ್ ಕುಡೆಕಲ್ ಮಡಿಕೇರಿ ಮಾತನಾಡಿ, ಕರ್ನಾಟಕವು ಇತರ ರಾಜ್ಯಗಳಿಗಿಂತ ಭಿನ್ನ. ವಿವಿಧ ಭಾಷಾ ಅಕಾಡೆಮಿಗಳ ಮುಖಾಂತರ ಭಾಷೆಯನ್ನು ರಕ್ಷಿಸುವ ಕಾರ್ಯವಾಗುತ್ತಿದೆ. ಆದರೂ ಓಟ್ ಬ್ಯಾಂಕ್ ರಾಜಕೀಯದಲ್ಲಿ ಕೆಲವೊಂದು ಭಾಷೆಗಳು ಗೊತ್ತಾಗುವುದಿಲ್ಲ. ನಿರ್ಲಕ್ಷದ ಸಮುದಾಯದ ಕೊಂಡಿಮುಂದುವರಿದ ಭಾಗವಾಗಿ ಸುಲೋಚನ ಪುಸ್ತಕ ಬರೆದಿದ್ದಾರೆ ಎಂದರು. ಸೈನಿಕನ ಪುತ್ರಿಯಾಗಿ ಪುಸ್ತಕ ಬರೆದಿರುವ ಸುಲೋಚನಾರವರು ಸತ್ಯದರ್ಶನ ಅಮ್ಮನ ಮಾತನ್ನೇ ದಾರಿದೀಪವಾಗಿ ಪುಸ್ತಕದ ಬರೆದಿದ್ದಾರೆ. ಗಾದೆಯ ತುಣುಕುಗಳಿವೆ. ತಾಯಿಯ ಮಾತು ಹಿತವಚನವಾಗಿರುವುದು ಹಾಗೂ ತನ್ನಲ್ಲಿ ಬೀರಿರುವ ಪ್ರಭಾವವನ್ನು ಪುಸ್ತಕದಲ್ಲಿ ತೋರಿದ್ದಾರೆ ಎಂದರು.


ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಭೀಮರಾವ್ ವಾಷ್ಟರ್ ಮಾತನಾಡಿ, ಸಾಹಿತಿ ಸುಲೋಚನಾರವರ ಎರಡೂ ಪುಸ್ತಕಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು. ಅದರಲ್ಲಿರುವ ಒಳಾರ್ಥ ತಿಳಿದುಕೊಳ್ಳಬೇಕು. ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಿರುವ ಪುಸ್ತಕ ಯುವ ಸಾಹಿತಿಗಳಿಗೆ ವೇದಿಕೆಯಾಗಲಿ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಬಾಲ್ಯದಲ್ಲಿ ದೊರೆತ ಅಮ್ಮನ ಹಿತ ನುಡಿಗಳನ್ನು ಕೃತಿಗಳ ಮೂಲಕ ಸುಲೋಚನಾರವರು ಕನ್ನಡ ಸಾಹಿತ್ಯ ಪರಿಷತ್‌ಗೆ ಹೊಸ ಮುಖದ ಪರಿಚಯವಾಗಿದೆ. ಫೇಸ್‌ಬುಕ್‌ನಲ್ಲಿ ಬರೆಯುವವರೂ ಸಾಹಿತ್ಯದ ಬಗ್ಗೆ ಅಭಿರುಚಿ ಇರುವವರಾಗಿದ್ದು ಮುಂದೆ ಅವರು ಉತ್ತಮ ಸಾಹಿತಿಗಳಾಗಿ ಬರಬಹುದು ಎಂದ ಅವರು ನಾನು ಬರೆದದ್ದೇ ಉತ್ಕೃಷ್ಟವಾದುದು ಎಂಬ ಭ್ರಮೆ ಸಾಹಿತಿಗಳಲ್ಲಿರಬಾರದು ಎಂದರು.


ಲೇಖಕಿಯಾಗಿರುವ ಉಪ ತಹಶೀಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಸ್ವಾ ಚಿಂತನೆಯೊಂದಿಗೆ ಬೆಳೆದವಳು. ಪ್ರೌಢ ಶಾಲೆಯಲ್ಲಿ ಕವನ ಬರೆದಿದ್ದೇನೆ. ಕಾಲೇಜು ಹಂತದಲ್ಲಿ ಸಾಹಿತ್ಯದ ರುಚಿ ತಿಳಿದವಳು. ಹೇಳಿಕೊಳ್ಳಲಾಗದ ವಿಚಾರಗಳನ್ನು, ನನ್ನೊಲಗಿನ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲು ಶ್ರಮಪಟ್ಟಿದ್ದೇನೆ. ಧೈರ್ಯವಿಲ್ಲದೆ ಕಾಲಾವಕಾಶ ಪಡೆದುಕೊಂಡಿದೆ. ನನ್ನ ಗುರು ನೀಡಿದ ಜ್ಞಾನದಲ್ಲಿ ನನ್ನ ಮನಸ್ಸಿನ ಭಾವನೆಗಳನ್ನು ಪುಸ್ತಕ ರೂಪದಲ್ಲಿ ಬರೆದಿದ್ದೇನೆ. ಜ್ಞಾನ ಬೇರೆ, ಪುಸ್ತಕ ಬೇರೆ. ಜನರ ಭಾವನೆಗಳು ವಿಭಿನ್ನವಾಗಿರುತ್ತದೆ. ನಾನು ನನ್ನದೇ ಭಾವನೆಯಲ್ಲಿ ಪುಸ್ತಕ ಬರೆದಿದ್ದೇನೆ. ಇದನ್ನು ಯಾರು ಬೇಕಾದರೂ ಓದಬಹುದು. ವಿಮರ್ಷೆಗೆ ನಾನು ಭಾಗವಹಿಸುವುದಿಲ್ಲ. ಅಮ್ಮನ ಮಾತು ನನ್ನ ಮನಸ್ಸಿನಲ್ಲಿ ದೃಢವಾಗಿದ್ದು ಅದು ಜೀವನದಲ್ಲಿ ಬದಲಾವಣೆ ದಾರಿಯಾಗಿ, ಶಕ್ತಿ ತುಂಬಿದೆ. ಅಮ್ಮನಿಂದ ನನಗೆ ಸತ್ಯದರ್ಶನವಾಗಿದೆ. ಅವರ ನನ್ನ ವ್ಯಕ್ತಿತ್ವ ರೂಪಿಸಿದೆ. ನುಡಿಮುತ್ತು ಪುಸ್ತಕದಲ್ಲಿ ಸಮಾಜದಿಂದ ಸಂಗ್ರಹಿಸಿದ 1500 ನುಡಿಮುತ್ತುಗಳಿವೆ ಎಂದರು.


ರಂಗ ಬೆಳಕು ತಂಡದವರಿಂದ ರಂಗ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಂಗ ಬೆಳಕು ತಂಡದವರಿಂದ ರಂಗ ಗೀತೆಗಳ ಗಾಯನ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ಬಳಿಕ ನಡೆದ ಕವಿಗೋಷ್ಠಿಯಲ್ಲಿ ಎಚ್. ಭೀಮರಾವ್ ವಾಷ್ಟರ್ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಸುಪ್ರಿತಾ ಚರಣ್ ಪಾಲಪ್ಪೆ, ಕವಿತಾ ಸತೀಶ್, ದಿವ್ಯ ಮಯ್ಯ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಪ್ರಿಯಾ ಸುಳ್ಯ, ರಮ್ಯ ಚೇತನ್ ವಿಟ್ಲ, ಚೇತನ್ ಕೆ.ವಿಟ್ಲ, ಹರ್ಷಿತ ಹರೀಶ್ ಕುಲಾಲ್ ಐವನಾಡು, ಸೌಜನ್ಯ ಬಿ.ಎಂ ಕೆಯ್ಯೂರು, ನಾರಾಯಣ ನಾಯ್ಕ ಕುದುಕೋಳಿ, ನವ್ಯಶ್ರೀ ಸ್ವರ್ಗ, ಪೂರ್ಣಿಮಾ ಗಿರೀಶ್ ಕತ್ತಿಮುಂಡ, ಜೆಸ್ಸಿ ಪಿ.ವಿ, ಶಾಹಿನಾ ಎನ್ ಬೆಳ್ಳಾರೆ, ಉಮಪ್ರಸಾದ್ ರೈ ನಡುಬೈಲು, ಸಂಗೀತ ಕೂಡ್ಲು, ಪೂರ್ಣಿಮಾ ಕುದ್ಮಾರ್, ನಳಿನಿ ಡಿ. ಪಂಜಳ, ಪ್ರಮೀಳಾ ರಾಜ್, ಪೂರ್ಣೀಮಾ ಪೆರ್ಲಂಪಾಡಿ, ವಿಜಯ ಕುಮಾರ್ ಕಾಣಿಚ್ಚಾರ್ ಹಾಗೂ ಅನನ್ಯ ಎಚ್ ಸುಬ್ರಹ್ಮಣ್ಯ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here