ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ಸ್‌ಗೆ 13 ಚಿನ್ನ, 7 ಬೆಳ್ಳಿ, 14ಕಂಚಿನ ಪದಕ

0

ಪುತ್ತೂರು: ಮಣಿಪಾಲದಲ್ಲಿ ಡಿ.23 ಹಾಗೂ 24ರಂದು ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ಸ್‌ನ ಪುತ್ತೂರು ಶಾಖೆಯ ತಂಡ 13 ಚಿನ್ನ ,7 ಬೆಳ್ಳಿ 14 ಕಂಚಿನ ಪದಕ ಪಡೆದುಕೊಂಡಿದೆ.


ಸಂಸ್ಥೆಯ ಮುಖ್ಯ ಶಿಕ್ಷಕ ಎಂ.ಸುರೇಶ್ ಸಹಶಿಕ್ಷಕರಾದ ಅನೀಶ್ ರೈ ಹಾಗೂ ನವೀನ್ ಕುಮಾರ್ ತರಬೇತಿಯನ್ನು ನೀಡಿರುತ್ತಾರೆ. ವಿದ್ಯಾರ್ಥಿಗಳಾದ ಮಹಿತ್, ದೀಪೇಶ್, ಸಮೃದ್ಧ್, ಅಜಯ್, ಪೂರ್ವಿ, ರಿಹಾಂಶ್, ಪ್ರಥಮ್, ದಿವ್ಯಾ ಪ್ರಭು, ಅಶೋಕ್, ಭವಿಷ್ಯ, ಆರುಷ್ ರೈ, ಅವಿ ರೈ, ಶ್ರೀರಾಮ, ಬ್ರಿಜೇಶ್, ಸರ್ವಿನ್, ದೈವಿಕ್ ಶೆಟ್ಟಿ, ಅನುಷ್, ಸಿದ್ದಾರ್ಥ, ಮನ್ವಿತ್, ರೋಚಿಕಾ, ಮನನ್, ಚಿನ್ಮಯ್, ಅನಿ ರೈ, ರೋಚನಾ, ಶ್ರೀಯ, ಶ್ರೀಯಂ ದ್ರುವ, ಅನೀಶ್, ಆದೀಶ್ ಹಾಗೂ ಪ್ರಧಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here