ಪುತ್ತೂರು: ವಿದ್ಯಾಕೀರ್ತಿ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಇದರ ಆಡಳಿತಕ್ಕೊಳಪಟ್ಟ ಇಎಸ್‌ಆರ್ ಪ್ರೆಸಿಡೆನ್ಸಿ ಸ್ಕೂಲ್ ಮರೀಲ್ ಪುತ್ತೂರು ಇದರ 8ನೇ ವರ್ಷದ ಶಾಲಾ ವಾರ್ಷಿಕೋತ್ಸವ ಡಿ.26ರಂದು ನಡೆಯಿತು. ಕೂರ್ನಡ್ಕ ಜುಮಾ ಮಸೀದಿ ಅಧ್ಯಕ್ಷ ಕೆ.ಎಚ್ ಖಾಸಿಂ ಹಾಜಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಸಂಚಾಲಕರಾದ ಝಾಕೀರ್ ಹುಸೈನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಿರಾಜ್ ಎ.ಕೆ ಮತ್ತು ಆಡಳಿತ ಮಂಡಳಿಯ ಸದಸ್ಯ ವಿ.ಕೆ ಶರೀಫ್, ಮಕ್ಸೂದ್ ಉಪಸ್ಥಿತರಿದ್ದರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ತಾಜುನ್ನೀಸಾ ವಾರ್ಷಿಕ ವರದಿ ವಾಚಿಸಿದರು. ಅತಿಥಿಯಾಗಿದ್ದ ಹೇಮನಾಥ ಶೆಟ್ಟಿ ಕಾವು ಮಾತನಾಡಿ ಯಾವುದೇ ಒಂದು ವಿದ್ಯಾಸಂಸ್ಥೆ ಪ್ರಗತಿ ಹೊಂದಬೇಕಾದರೆ ಸಮಾಜದಲ್ಲಿರುವ ಪ್ರತಿಯೊಬ್ಬರ ಪ್ರೋತ್ಸಾಹ, ಸಹಕಾರ ಅತ್ಯಗತ್ಯ. ನಾವೆಲ್ಲರೂ ಒಂದಾಗಿ ಈ ಸಂಸ್ಥೆಯ ಏಳಿಗೆಗಾಗಿ ಶ್ರಮಿಸೋಣ’ ಎಂದು ಹೇಳಿದರು.
ತಾಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಕಲಾ ಮಾತನಾಡಿ ಯಾವುದೇ ಮಗುವನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಕೆ ಮಾಡಬೇಡಿ, ಪ್ರತೀ ಮಗುವಿಗೂ ತನ್ನದೇ ಆದ ಪ್ರತಿಭೆಯಿದೆ ಎಂದರು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರದ ಸಂಚಾಲಕರಾದ ಸಿದ್ದಿಕ್ ಕೆ.ಪಿ.ಎ, ಪುತ್ತೂರು ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್ ಕೆ, ಪಿ.ಕೆ ಝುಬೇರ್, ಹನೀಫ್ ಬಗ್ಗಮೂಲೆ, ಲತೀಫ್ ನೇರಳಕಟ್ಟೆ, ಶಾಲಾ ಸಂಚಾಲಕರಾದ ಝಾಕೀರ್ ಹುಸೈನ್, ಸದಸ್ಯರಾದ ಮಕ್ಸೂದ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ರಕ್ಷಕ ಶಿಕ್ಷಕ ಸಂಘದ ಗೌರವಾಧ್ಯಕ್ಷರಾದ ಹಮೀದ್ ಕೆ.ಎ, ಆಧ್ಯಕ್ಷ ಸಿರಾಜ್ ಎ.ಕೆ. ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಸದಸ್ಯ ವಿ.ಕೆ. ಶರೀಫ್ ಸ್ವಾಗತಿಸಿದರು. ಕು.ಆಯಿಶತ್ ರಿಝಾ ವಂದಿಸಿದರು. ಶಾಲಾ ಶಿಕ್ಷಕರಾದ ಸುಶಾಂತಿ ಹಾಗೂ ಕು.ಸಯೀದಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ಮಾ.ಝಿಶಾನ್ ಇಬ್ರಾಹಿಂ ಮತ್ತು ಕು.ನಫೀಸಾ ಫಿದಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.