ನಾಳೆ (ಜ.5)ಕ್ಕೆ ಕೆಮ್ಮಾಯಿ  ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಪುತ್ತಿಗೆ ಶ್ರೀಗಳ ಪಟ್ಟದ ದೇವರಿಗೆ ಪೂಜೆ

0

ಪುತ್ತೂರು: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜ.18 ರಂದು ಎರಡು ವರ್ಷಗಳ ಅವಧಿಗೆ  ಪೂಜಾಕೈಕಾರ್ಯ ಕೈಗೊಳ್ಳಲಿರುವ ಪುತ್ತಿಗೆ ಶ್ರೀ ಡಾ ಸುಗುಣೇಂದ್ರ ತೀರ್ಥ ಶ್ರೀ ಪಾದರು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀ ಪಾದರು, ಜ.5 ಬೆಳಿಗ್ಗೆ 9ಗಂಟೆಗೆ  ಕೆಮ್ಮಾಯಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಪಟ್ಟದ ದೇವರಿಗೆ ಪೂಜೆಗೈದು ಭಿಕ್ಷೆ ಸ್ವೀಕರಿಸಿ ಆಶೀರ್ವಚನ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಆಸ್ತಿಕ ಬಂಧುಗಳಿಗೆ ಭಗವದ್ಗೀತಾ ಪುಸ್ತಕ ವಿತರಿಸಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಲಿದ್ದಾರೆ ಎಂದು  ದೇವಸ್ಥಾನದ  ಆಡಳಿತ ಮಂಡಳಿ ತಿಳಿಸಿದೆ. ಈ  ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಫಲಮಂತ್ರಾಕ್ಷತೆ ಜತೆಗೆ ಪ್ರಸಾದ ಭೋಜನ ಸ್ವೀಕರಿಸಬೇಕೆಂದು ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here