ಜ. 13, 14: ಮರೀಲ್ ಹನಫಿ ಮಸೀದಿಯಲ್ಲಿ ಜಲಾಲಿಯಾ , ಮಜ್ಲಿಸುನ್ನೂರು ಮೆಹಿಪಿಲೇನಾತ್ ಕಾರ್ಯಕ್ರಮ

0

ಪುತ್ತೂರು ಮರೀಲ್ ಅಲ್ ಹಬೀಬ್ ಹನಫಿ ಜಾಮಿಯಾ ಮಸ್ಜಿದ್ ಹಾಗೂ ಆಶಿಖಾನೆ ರಸೂಲ್ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ವಾರ್ಷಿಕ ಜಲಾಲಿಯ ದ್ಸಿಕ್ರ್ ಮಜ್ಲಿಸ್, ಮಜ್ಲಿಸುನ್ನೂರು ಮೆಹಿಪಿಲೇನಾತ್ ಹಾಗೂ ಮತ ಪ್ರಭಾಷಣ ಕಾರ್ಯಕ್ರಮವು ಜ.13 ಮತ್ತು 14ರಂದು ಮಗ್ರೀಬ್ ನಮಾಜಿನ ಬಳಿಕ ಮರೀಲ್ ಹನಫಿ ಮಸೀದಿಯ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ನೇತೃತ್ವವನ್ನು ಕಾವಲ್ ಕಟ್ಟೆ ಹಝ್ರತ್ ಅಲ್ಲಾಮಾ ಮೌಲಾನ ಅಲ್ ಹಾಜ್ ಡಾ ಮುಹಮ್ಮದ್ ಫಾಝಿಲ್ ರಝ್ವಿ ವಹಿಸಲಿದ್ದಾರೆ. ಮಜ್ಲಿಸುನ್ನೂರು ಕಾರ್ಯಕ್ರಮದ ನೇತೃತ್ವವನ್ನು ಕೂರ್ನಡ್ಕ ಮೊಹಲ್ಲಾ ಖಾಝಿ ಬಿ.ಕೆ, ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ರವರು ವಹಿಸಲಿದ್ದಾರೆ. ನಅತೆ ಅಲಾಪೆಯನ್ನು ಮಹಮ್ಮದ್ ನಬೀಲ್ ರಾಝಾ ಬರಕಾತಿ ಬೆಂಗಳೂರು ರವರು ವಹಿಸಲಿದ್ದಾರೆ . ಜ. 14ರಂದು ಮಗ್ರಿಬ್ ನಮಾಜಿನ ಬಳಿಕ ಜಲಾಲಿಯಾ ದ್ಸಿಕ್ರ್ ಮಜ್ಲಿಸ್ ನಡೆಯಲಿದ್ದು ಇದರ ನೇತೃತ್ವವನ್ನು ಇಬ್ರಾಹಿಂ ಖಲೀಲುಲ್ಲಾ ತಂಳ್ ನಾಹೂರಿ ತಮಿಳುನಾಡು ವಹಿಸಲಿದ್ದಾರೆ .ಅಲ್ಲಾಮ ಮೌಲಾನಾ ಇರ್ಷಾದ್ ರಾಝಾ ಹುಬ್ಬಳ್ಳಿ ರವರು ಉರ್ದು ಮತ ಪ್ರಭಾಷಣ ಮಾಡಲಿದ್ದಾರೆ ಎಂದು ಮರೀಲ್ ಅಲ್ ಹಬೀಬ್ ಹನಫಿ ಜಾಮಿಯಾ ಮಸೀದಿಯ ಅಧ್ಯಕ್ಷ ರಜಾಕ್ ಖಾನ್ ಆಯ್ಕೆ ಮತ್ತು ಪ್ರಧಾನ ಕಾರ್ಯದರ್ಶಿ ರಿಯಾಜ್ ಕೂರ್ನಡ್ಕ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here