ಬಡ/ ಯತೀಂ ಹೆಣ್ಣುಮಗಳ ಮದುವೆ ಸಹಾಯರ್ಥ ಹಿನ್ನೆಲೆ

0

ಜ.9: ಚಾಪಲ್ಲದಲ್ಲಿ ಉಸ್ತಾದ್ ಅಹ್ಮದ್ ಕಬೀರ್ ಬಾಖವಿಯವರ ಏಕದಿನ ಮತಪ್ರವಚನ

ಪುತ್ತೂರು: ಆಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಎಂಬ ಸಂಘಟನೆಯ ಬೆಳ್ಳಿಹಬ್ಬದ ಅಂಗವಾಗಿ ಸುಮಾರು 25ರಷ್ಟು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಬಡ ಮತ್ತು ಯತೀಂ ಹೆಣ್ಣುಮಗಳ ಮದುವೆಯ ಸಹಾಯಾರ್ಥವಾಗಿ ಅಂತರಾಷ್ಟ್ರೀಯ ವಾಗ್ಮಿ ಉಸ್ತಾದ್ ಅಹ್ಮದ್ ಕಬೀರ್ ಬಾಖವಿರವರ ಏಕದಿನ ಮತಪ್ರವಚನ ಜ.9ರಂದು ಚಾಪಲ್ಲ ಬದ್ರಿಯಾ ಜುಮ್ಮಾ ಮಸ್ಚಿದ್ ವಠಾರದಲ್ಲಿರುವ ಮಹೂಂ ಸಯ್ಯದ್ ಅಲ್ ಹಾದೀ ತಂಙಳ್ ವೇದಿಕೆಯಲ್ಲಿ ನಡೆಯಲಿದೆ ಎಂದು ಆಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಝಕರೀಯ ಮಾಂತೂರು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಸವಣೂರಿನ ಚಾಪಲ್ಲ ಬದ್ರಿಯಾ ಜುಮ್ಮಾ ಮಸ್ಚಿದ್‌ನ ಅಧೀನದಲ್ಲಿರುವ ಅಲ್‌ನೂರ್ ಮುಸ್ಲಿಂ ಯೂತ್ ಫೆಡರೇಶನ್ ಸಂಘಟನೆಯು ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಹಾಗಾಗಿ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಲ್ಲಿ ಏಕದಿನದ ಮತಪ್ರವಚನವೂ ಒಂದಾಗಿದ್ದು, ಇದರ ಮೂಲಕ ಬಡ ಮತ್ತು ಯತೀಂ ಹೆಣ್ಣುಮಗಳ ಮದುವೆಗೆ ಸಹಾಯ ಮಾಡಲಿದ್ದೇವೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಪಲ್ಲ ಬದ್ರಿಯಾ ಜುಮ್ಮಾ ಮಸ್ಚಿದ್ ಇದರ ಆಡಳಿತ ಮಂಡಳಿ ಅಧ್ಯಕ್ಷ ಕಣಿಮಜಲು ಮುಹಮ್ಮದ್ ಹಾಜಿ ವಹಿಸಲಿದ್ದಾರೆ.

ಚಾಪಲ್ಲ ಮಸೀದಿಯ ಗೌರವಾಧ್ಯಕ್ಷ ಅಸ್ಸಯ್ಯದ್ ಹಾಮಿದುಲ್ ಹಾದೀ ತಂಙಳ್ ಮಂಜೇಶ್ವರ ದುವಾಃ ಆಶೀರ್ವಚನ ನೀಡಲಿದ್ದಾರೆ. ಚಾಪಲ್ಲ ಮುದರ್ರಿಸ್ ಅಶ್ರಫ್ ಫಾಝಿಲ್ ಬಾಖವಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ವಿದಾನಸಭಾ ಸ್ಪೀಕರ್ ಯು.ಟಿ.ಖಾದರ್, ಕೆಪಿಸಿಸಿ ಸದಸ್ಯ ಇನಾಯತ್ ಆಲಿ ಭಾಗವಹಿಸಲಿದ್ದಾರೆ. ಎಂ.ಎಸ್ ಮುಹಮ್ಮದ್, ಅಬ್ದುಲ್ ರಹಿಮಾನ್ ಅರಿಯಡ್ಕ ಸಹಿತ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಅಲ್‌ನೂರ್ ಮುಸ್ಲಿಂ ಯೂತ್ ಫೆಡರೇಶನ್‌ನ ಸ್ವಾಗತ ಸಮಿತಿ ಅಧ್ಯಕ್ಷ ರಝಾಕ್ ಕೆನರ, ಕಾರ್ಯದರ್ಶಿ ರಫೀಕ್, ಎಂ.ಎ, ಸದಸ್ಯ ನಝೀರ್, ಫೆಡರೇಶನ್‌ನ ಕಾರ್ಯದರ್ಶಿ ಬಶೀರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here