ಕುದ್ಮಾರು ಶಾಲೆಯಲ್ಲಿ ಕುಣಿತ ಭಜನೆ ತರಬೇತಿ ಕಾರ್ಯಕ್ರಮ ಉದ್ಘಾಟನೆ

0

ಕಾಣಿಯೂರು: ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಳಿ ಕುದ್ಮಾರು ಇದರ ವತಿಯಿಂದ ನಡೆಯುವ ಕುಣಿತ ಭಜನೆಯ ಉದ್ಘಾಟನೆಯು ಕುದ್ಮಾರು ಶಾಲಾ ವಠಾರದಲ್ಲಿ ನಡೆಯಿತು. ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಜನೇಶ್ ಭಟ್ ಬರೆಪ್ಪಾಡಿ ಉದ್ಘಾಟಿಸಿ ಮಾತನಾಡಿ, ಭಜನೆಯು ವಿಭಜನೆಯನ್ನು ತಡೆಯುತ್ತದೆ.

ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಜಯಂತ್ ವೈ ತರಬೇತುದಾರರಾಗಿ ದೊರೆತಿರುವುದು ಶಿಬಿರಾರ್ಥಿಗಳ ಅದೃಷ್ಟ. ಇಲ್ಲಿ ತರಬೇತಿ ಪಡೆದ ಭಜಕರಿಗೆ ನಮ್ಮ ದೇವಸ್ಥಾನದ ಶಿವರಾತ್ರಿ ಉತ್ಸವದಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಿದರು. ಕುದ್ಮಾರು ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ನವ್ಯಾ ಅನ್ಯಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲಾ ಮಕ್ಕಳಿಗೆ ಉಪಯುಕ್ತವಾಗುವ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ತರಬೇತುದಾರರಾದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಜಯಂತ್ ವೈ ಮಾತನಾಡಿ, ಶಿಬಿರದಲ್ಲಿ ಕುಣಿತ ಭಜನೆಯ ಜೊತೆಗೆ ಯೋಗ ಪ್ರಾಣಾಯಾಮ ತಬಲ ಹಾರ್ಮೋನಿಯಂ ಮತ್ತು ಯಕ್ಷಗಾನ ತರಬೇತಿಯನ್ನು ನೀಡಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ ತಾರಾ ಮಹಿಳಾ ಮಂಡಳಿ ಉಪಾಧ್ಯಕ್ಷೆ ಉಮ್ಮಕ್ಕ, ಮಹಿಳಾ ಮಂಡಳಿ ಸದಸ್ಯರು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು. ಮಹಿಳಾ ಮಂಡಳಿ ಸದಸ್ಯೆ ಗೌರಿ ಕಾರ್ಲಾಡಿ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ ಸ್ವಾಗತಿಸಿ, ಸವಣೂರುಮೊಗರು ಶಾಲಾ ಶಿಕ್ಷಕಿ ದಯಾಮಣಿ ವಂದಿಸಿದರು.

LEAVE A REPLY

Please enter your comment!
Please enter your name here