ಧನುಪೂಜೆಯಲ್ಲಿ ಮಹಾಲಿಂಗೇಶ್ವರನ ಮಹಿಮೆ – ಕಳೆದು ಹೋದ ಚಿನ್ನದ ಸರ ಕ್ಷಣಾರ್ಧದಲ್ಲಿ ವಾರಿಸುದಾರರ ಕೈ ಸೇರಿತು

0

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆಯುತ್ತಿರುವ ಧನುಪೂಜೆಯ ಸಂದರ್ಭ ಮಹಿಳೆಯೊಬ್ಬರ ಕಳೆದು ಹೋದ ಚಿನ್ನದ ಸರ ಕ್ಷಣಾರ್ಧದಲ್ಲಿ ಅವರ ಕೈ ಸೇರಿದ ಘಟನೆ ಜ.7ರ ಆದಿತ್ಯವಾರದಂದು ನಡೆದಿದೆ.
ಆದಿತ್ಯವಾರದ ದಿನ ಅಧಿಕ ಸಂಖ್ಯೆಯಲ್ಲಿ ಭಕ್ತರು ಧನು ಪೂಜೆಗೆ ಆಗಮಿಸಿದ್ದರು. ಪೂಜೆ ಆದ ತಕ್ಷಣ ಚಿನ್ನದ ಸರವೊಂದು ಬಿದ್ದು ಸಿಕ್ಕಿರುವ ಬಗ್ಗೆ ಮೈಕ್ ಮುಖಾಂತರ ಮಾಹಿತಿ ನೀಡಲಾಯಿತು. ಮಹಿಳೆಯೋರ್ವರು ತನ್ನ ಕತ್ತಿನಲ್ಲಿದ್ದ ಸರ ಕಳಕೊಂಡ ಬಗ್ಗೆ ಅರಿತು, ದೇವಸ್ಥಾನದವರಿಗೆ ತಿಳಿಸಲಾಗಿ ಅದರಲ್ಲಿದ್ದ ಪೆಂಡೆಂಟಿನ ಗುರುತು ಹೇಳಿದರು. ಆ ಮೂಲಕ ಅವರಿಗೆ ಚಿನ್ನದ ಸರ ಹಸ್ತಾಂತರಿಸಲಾಯಿತು.

ಪ್ರಾಮಾಣಿಕತೆ ಮೆರೆದ ಸಿ ಆರ್ ಪಿ ಪರಮೇಶ್ವರಿ:
ದೇವಳದಲ್ಲಿ ಬಿದ್ದು ಸಿಕ್ಕ ಚಿನ್ನದ ಸರವನ್ನು ಶಿಕ್ಷಣ ಇಲಾಖೆಯ ಸಿ.ಆರ್.ಪಿ ಪರಮೇಶ್ವರಿ ಅವರು ರುದ್ರಪಾರಾಯಣ ಮಾಡುತ್ತಿದ್ದ ಸಂಘಟರಿಗೆ ನೀಡಿದರು. ರುದ್ರಪಾರಾಯಣ ಬಳಿಕ ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ಅವರು ಮೈಕ್ ಅನೌನ್ಸ್ ಮಾಡಿದರು. ಈ ವೇಳೆ ಚಿನ್ನದ ಸರ ಕಳೆದು ಕೊಂಡ ಅರಿವಿಲ್ಲದ ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ರೇಖಾ ಅವರು ಮೈಕ್ ಅನೌನ್ಸ್ ವೇಳೆ ಕತ್ತಿನಲ್ಲಿ ಚಿನ್ನದ ಸರ ಕಳಕೊಂಡ ಅರಿವಾಗಿದೆ. ಅವರು ಚಿನ್ನದ ಸರದ ಗುರುತು ಹೇಳುವ ಮೂಲಕ ಕಳಕೊಂಡ ಚಿನ್ನದ ಸರವನ್ನು ಪಡೆದರು. ದೇವರ ನಡೆಯಲ್ಲಿ ಸರವನ್ನು ವಾರಿಸುದಾರರಿಗೆ ಒಪ್ಪಿಸಲಾಯಿತು. ಬ್ರಾಹ್ಮೀ ಮುಹೂರ್ತದಲ್ಲಿ ನಡೆಯುವ ಧನುಪೂಜೆಯಲ್ಲಿ ಶ್ರೀ ದೇವರ ಮಹಿಮೆ ಪ್ರಕಟವಾಯಿತು ಎಂದು ಭಕ್ತರು ಅಭಿಪ್ರಾಯಿಸಿದರು.

LEAVE A REPLY

Please enter your comment!
Please enter your name here