ಪುತ್ತೂರು: ಸುಳ್ಯಪದವಿನ ಕನ್ನಡ್ಕದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಕನ್ನಡ್ಕ ನಿವಾಸಿ, ಪುತ್ತೂರಿನ ಪಿಯು ಕಾಲೇಜೊಂದರ ಪ್ರಥಮ ಪಿಯು ವಿದ್ಯಾರ್ಥಿನಿ ದೀಕ್ಷಾ(16) ಎಂದು ಗುರುತಿಸಲಾಗಿದೆ.
ದೀಕ್ಷಾ, ಮನೆಯ ಫ್ಯಾನ್ ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈಶ್ವರಮಂಗಲ ಹೊರಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಥಮ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿರುವ ದೀಕ್ಷಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಜ.8ರಂದು ಅವರಿಗೆ ಲ್ಯಾಬ್ ಪರೀಕ್ಷೆ ನಡೆಯಲಿತ್ತು ಎನ್ನಲಾಗಿದೆ.